ಕರ್ನಾಟಕ

karnataka

ETV Bharat / sports

ಗುಡ್​ನ್ಯೂಸ್​: ನೆಟ್​ನಲ್ಲಿ ಬೌಲಿಂಗ್​​​ ಅಭ್ಯಾಸ ಆರಂಭಿಸಿದ ಹಾರ್ದಿಕ್​​

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಹಾರ್ದಿಕ್ ಪಾಂಡ್ಯಾ ಇದೀಗ ಸಂಪೂರ್ಣವಾಗಿ ಫಿಟ್​ ಆಗಿದ್ದು, ಸುಮಾರು 3 ತಿಂಗಳ ಬಳಿಕ ನೆಟ್​ನಲ್ಲಿ ಬೌಲಿಂಗ್​ ಅಭ್ಯಾಸ ಆರಂಭ ಮಾಡಿದ್ದಾರೆ.

Hardik
Hardik

By

Published : Oct 28, 2021, 1:05 AM IST

ದುಬೈ:ಐಸಿಸಿ ಟಿ-20 ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಮುಂದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಸೆಣಸಾಟ ನಡೆಸಲಿದ್ದು, ಅದಕ್ಕೂ ಮುಂಚಿತವಾಗಿ ತಂಡಕ್ಕೆ ಗುಡ್​ನ್ಯೂವೊಂದು​ ಸಿಕ್ಕಿದೆ.

ಪಾಕ್​ ವಿರುದ್ಧದ ಪಂದ್ಯದ ವೇಳೆ ಭುಜದ ನೋವಿಗೊಳಗಾಗಿ ಗಾಯಗೊಂಡಿದ್ದ ಹಾರ್ದಿಕ್ ಪಾಂಡ್ಯಾ ಈಗಾಗಲೇ ಸಂಪೂರ್ಣವಾಗಿ ಫಿಟ್​ ಆಗಿದ್ದು, ಸದ್ಯ ನೆಟ್​ನಲ್ಲಿ ಬೌಲಿಂಗ್​ ಅಭ್ಯಾಸ ಆರಂಭ ಮಾಡಿದ್ದಾರೆ. ಹೀಗಾಗಿ ಟೀಂ ಇಂಡಿಯಾಗೆ ಮತ್ತೊಂದು ಬತ್ತಳಿಕೆ ಸಿಕ್ಕಿದೆ.

ಇದನ್ನೂ ಓದಿರಿ:ಟಿ-20 ವಿಶ್ವಕಪ್​: ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯಾ ಫಿಟ್​!

ಕಳೆದ ಜುಲೈ ತಿಂಗಳಲ್ಲಿ ಕೊನೆಯದಾಗಿ ಬೌಲಿಂಗ್ ಮಾಡಿದ್ದ ಹಾರ್ದಿಕ್ ಪಾಂಡ್ಯಾ, ತದನಂತರ ಐಪಿಎಲ್​ನ ಯಾವುದೇ ಪಂದ್ಯದಲ್ಲೂ ಬೌಲಿಂಗ್ ಮಾಡಿರಲಿಲ್ಲ. ಹೀಗಾಗಿ ಅವರ ಬಗ್ಗೆ ಅನೇಕ ರೀತಿಯ ಟೀಕೆಗಳು ಕೇಳಿ ಬಂದಿದ್ದವು. ಇದರ ಬೆನ್ನಲ್ಲೇ ಬೌಲಿಂಗ್ ಮಾಡಲು ಶುರು ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯಾ ಬೌಲಿಂಗ್ ಮಾಡ್ತಿದ್ದ ವೇಳೆ ಕೋಚ್​ ರವಿಶಾಸ್ತ್ರಿ ಹಾಗೂ ಮೆಂಟರ್ ಮಹೇಂದ್ರ ಸಿಂಗ್ ಧೋನಿ ಪರಿಶೀಲನೆ ನಡೆಸಿದರು.

ನೆಟ್​ನಲ್ಲಿ ಸುಮಾರು 20 ನಿಮಿಷಗಳ ಕಾಲ ಬೌಲಿಂಗ್ ಮಾಡಿರುವ ಹಾರ್ದಿಕ್ ಪಾಂಡ್ಯಾ, ಮತ್ತೊಮ್ಮೆ ಹಳೆಯ ಲಯಕ್ಕೆ ಮರಳುತ್ತಿರುವುದು ತಂಡಕ್ಕೆ ಶುಭಸುದ್ಧಿ​​ ಆಗಿದ್ದು, ಬೌಲಿಂಗ್ ಜೊತೆಗೆ ಫಿನಿಷರ್​​ ಸಮಸ್ಯೆ ಬಗೆಹರಿಯುವ ನಿರೀಕ್ಷೆಯಿದೆ.

ಈಗಾಗಲೇ ವಿಶ್ವಕಪ್​ ಅಭಿಯಾನದಲ್ಲಿ ಟೀಂ ಇಂಡಿಯಾ ತಾನು ಆಡಿರುವ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೋಲು ಕಂಡಿರುವ ಕಾರಣ, ಮುಂದಿನ ಎಲ್ಲ ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಬೇಕಾದ ಅನಿವಾರ್ಯತೆಯಲ್ಲಿದೆ.

ABOUT THE AUTHOR

...view details