ಕರ್ನಾಟಕ

karnataka

ETV Bharat / sports

ನಿಜಕ್ಕೂ ಪವಾಡ: ಮೊಹಮ್ಮದ್​ ರಿಜ್ವಾನ್​ಗೆ ಚಿಕಿತ್ಸೆ ನೀಡಿದ ಭಾರತೀಯ ವೈದ್ಯನ ಮಾತು! - Saheer Sainalabdeen

ಎದೆಯ ಸೋಂಕಿನ ತೊಂದರೆಗೊಳಗಾಗಿದ್ದ ಮೊಹಮ್ಮದ್ ರಿಜ್ವಾನ್ ಎರಡು ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಈ ವಿಚಾರವಾಗಿ ಅವರಿಗೆ ಚಿಕಿತ್ಸೆ ನೀಡಿರುವ ಭಾರತೀಯ ವೈದ್ಯ ಸಾಹೀರ್ ಸೈನಾಲಾಬ್ದೀನ್ ಮಾತನಾಡಿದ್ದಾರೆ.

Mohammad Rizwan
Mohammad Rizwan

By

Published : Nov 13, 2021, 3:00 PM IST

ಹೈದರಾಬಾದ್​:ಆಸ್ಟ್ರೇಲಿಯಾ(PAK vs AUS) ವಿರುದ್ಧ ನಡೆದ ಐಸಿಸಿ ಟಿ-20 ವಿಶ್ವಕಪ್(ICC T20 World Cup)​ ಸೆಮಿಫೈನಲ್​​ನಲ್ಲಿ 5 ವಿಕೆಟ್​ಗಳ ಅಂತರದ ಸೋಲು ಕಾಣುವ ಮೂಲಕ ಪಾಕ್​ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಈ ಮಧ್ಯೆ ಪಾಕ್​ ತಂಡದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್​​ ಎರಡು ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಂಡು ಮೈದಾನದಲ್ಲಿ ಬ್ಯಾಟ್​ ಬೀಸಿ ಎಲ್ಲರ ಗಮನ ಸೆಳೆದಿದ್ದರು.

ಎದೆಯಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ನವೆಂಬರ್​​ 9ರಂದು ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದ ಮೊಹಮ್ಮದ್ ರಿಜ್ವಾನ್​ (Mohammad Rizwan) ಎರಡು ದಿನಗಳ ಕಾಲ ಐಸಿಯು(ICU)ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಅವರಿಗೆ ಭಾರತೀಯ ವೈದ್ಯ ಸಾಹೀರ್ ಸೈನಾಲಾಬ್ದೀನ್(Saheer Sainalabdeen) ಚಿಕಿತ್ಸೆ ನೀಡಿದ್ದರು. ಐಸಿಯುಗೆ ದಾಖಲಾಗಿದ್ದರಿಂದ ಕೇವಲ ಎರಡು ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆಂದು ವೈದ್ಯರಿಗೂ ಸಹ ಗೊತ್ತಿರಲಿಲ್ಲ. ಆದರೆ ಪವಾಡ ರೀತಿಯಲ್ಲಿ ಚೇತರಿಸಿಕೊಂಡಿರುವ ಅವರು ತಂಡ ಸೇರಿಕೊಂಡು, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 67ರನ್​ ಸಿಡಿಸಿದ್ದರು.

ಮೊಹಮ್ಮದ್ ರಿಜ್ವಾನ್ ಆಸ್ಪತ್ರೆಗೆ ದಾಖಲಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ವೈದ್ಯ ಸಾಹೀರ್​ ಸೈನಾಲಾಬ್ದೀನ್, ಎದೆಯಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕನಿಷ್ಠ ಒಂದು ವಾರ ಕಾಲ ಆಸ್ಪತ್ರೆಯಲ್ಲಿ ಇರಬೇಕಾಗಬಹುದೆಂದು ನಾವೆಲ್ಲರೂ ಅಂದುಕೊಂಡಿದ್ದೇವು. ಆದರೆ ಎರಡನೇ ದಿನಕ್ಕೆ ಚೇತರಿಸಿಕೊಂಡಿರುವುದು ನಮಗೂ ಅಚ್ಚರಿ ಮೂಡಿಸಿದೆ. ಇಂತಹ ಸೋಂಕು ಇಷ್ಟೊಂದು ವೇಗವಾಗಿ ಚೇತರಿಸಿಕೊಂಡಿರುವುದು ಇದೇ ಮೊದಲು ಸಲ ಎಂದಿರುವ ಅವರು, ರಿಜ್ವಾನ್​ ಅವರ ದೇಹ ಚಿಕಿತ್ಸೆ ಸ್ಪಂದಿಸಿರುವ ರೀತಿ ನಿಜಕ್ಕೂ ಅಚ್ಚರಿ ಮೂಡಿಸಿದೆ ಎಂದು ದುಬೈನ ಮೆಡಿಯೋರ್ ಆಸ್ಪತ್ರೆಯ ವೈದ್ಯ ಡಾ. ಸಾಹೀರ್ ಸೈನಾಲಬ್ದೀನ್ ತಿಳಿಸಿದ್ದಾರೆ.

ಇದನ್ನೂ ಓದಿರಿ:PAK vs AUS : ಆಸೀಸ್​ ವಿರುದ್ಧದ ಸೆಮೀಸ್​ಗೂ ಮುನ್ನ ಎರಡು ದಿನ ICUನಲ್ಲಿ ಚಿಕಿತ್ಸೆ ಪಡೆದಿದ್ದ ರಿಜ್ವಾನ್!

ನವೆಂಬರ್​​ 9ರಂದು ರಾತ್ರಿ ಮೊಹಮ್ಮದ್​ ರಿಜ್ವಾನ್​ಗೆ ಎದೆ ನೋವು, ಉಸಿರಾಟದ ತೊಂದರೆ ಹಾಗೂ ಜ್ವರ ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರ ತಪಾಸಣೆ ನಡೆಸಿದ್ದ ವೈದ್ಯರು ಎದೆಯಲ್ಲಿ ಸೋಂಕು(Laryngeal Infection) ಇರುವುದನ್ನ ಪತ್ತೆ ಹಚ್ಚಿದ್ದರು. ಹೀಗಾಗಿ ಐಸಿಯುನಲ್ಲಿ ದಾಖಲಿಸಿಕೊಂಡು ಮಾಡಿಕೊಂಡು ಚಿಕಿತ್ಸೆ ನೀಡುತ್ತಿದ್ದರು.

ABOUT THE AUTHOR

...view details