ಕರ್ನಾಟಕ

karnataka

ETV Bharat / sports

ಕಿವೀಸ್​ ವಿರುದ್ಧ ಹಾರ್ದಿಕ್​, ಭುವಿ ಕೈಬಿಟ್ಟು ಈ ಇಬ್ಬರಿಗೆ ಅವಕಾಶ ನೀಡಿ ಎಂದ ಗವಾಸ್ಕರ್​​

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಭಾರತ ತಂಡದಲ್ಲಿ ಕೆಲ ಬದಲಾವಣೆ ಮಾಡುವಂತೆ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಸಲಹೆ ನೀಡಿದ್ದಾರೆ.

By

Published : Oct 29, 2021, 7:26 AM IST

Sunil Gavaskar Advice
ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಸಲಹೆ

ದುಬೈ:ಐಸಿಸಿ ಟಿ20 ವಿಶ್ವಕಪ್ ಸೂಪರ್ 12 ಹಂತದ ಮುಂದಿನ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದಲ್ಲಿ ಬದಲಾವಣೆ ಅಗತ್ಯವಾಗಿದೆ. ಫಾರ್ಮ್‌ ಕಳೆದುಕೊಂಡಿರುವ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ಬದಲಿಗೆ ಇತರ ಆಟಗಾರರಿಗೆ ಅವಕಾಶ ನೀಡುವಂತೆ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಪಾಕಿಸ್ತಾನದ ವಿರುದ್ಧ 10 ವಿಕೆಟ್‌ಗಳ ಸೋಲಿನೊಂದಿಗೆ ಭಾರತವು ತನ್ನ ಟಿ20 ವಿಶ್ವಕಪ್ ಅಭಿಯಾನವನ್ನು ಆರಂಭಿಸಿತ್ತು. ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಈಗ ಕೊಹ್ಲಿ ಪಡೆ ಸೂಪರ್ 12 ಹಂತದಲ್ಲಿನ ಪ್ರತಿ ಪಂದ್ಯದಲ್ಲೂ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಟೀಂ ಇಂಡಿಯಾ 11ರ ಬಳಗದ ಬಗ್ಗೆ ಸಲಹೆ ನೀಡಿರುವ ಗವಾಸ್ಕರ್​​, ಬೌಲಿಂಗ್ ಮಾಡಲು ಸಮರ್ಥರಲ್ಲದಿದ್ದರೆ ಆಲ್‌ರೌಂಡರ್ ಹಾರ್ದಿಕ್ ಬದಲಿಗೆ ಇಶಾನ್ ಕಿಶನ್ ಹಾಗೂ ಅನುಭವಿ ಬೌಲರ್​ ಭುವನೇಶ್ವರ್ ಸ್ಥಾನಕ್ಕೆ ಶಾರ್ದೂಲ್ ಠಾಕೂರ್ ಅವರನ್ನು ಸೇರಿಸಿಕೊಳ್ಳುವಂತೆ ತಿಳಿಸಿದ್ದಾರೆ.

'ಇಶಾನ್, ಶಾರ್ದೂಲ್ ಪರಿಗಣಿಸಿ'

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಭುಜದ ಗಾಯದಿಂದ ಬೌಲಿಂಗ್ ಮಾಡಿರಲಿಲ್ಲ, ಸದ್ಯ ಐಪಿಎಲ್​ನಲ್ಲಿ ಮಿಂಚಿರುವ ಇಶಾನ್ ಕಿಶನ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಆದ್ದರಿಂದ ನಾನು ಖಂಡಿತವಾಗಿಯೂ ಪಾಂಡ್ಯಗಿಂತ ಕಿಶನ್​ ಅವರನ್ನೇ ಪರಿಗಣಿಸುತ್ತೇನೆ. ಅಲ್ಲದೆ, ಭುವನೇಶ್ವರ್ ಕುಮಾರ್ ಬದಲಿಗೆ ಶಾರ್ದೂಲ್ ಠಾಕೂರ್ ಅವರನ್ನು ಪರಿಗಣಿಸಬಹುದು ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಪಾಕ್​ ವಿರುದ್ಧ ಹಾರ್ದಿಕ್ ಪಾಂಡ್ಯ ಮತ್ತು ಭುವಿ ಇಬ್ಬರೂ ಬ್ಯಾಟಿಂಗ್​ ಹಾಗೂ ಮತ್ತು ಬೌಲಿಂಗ್​ನಲ್ಲಿ ವೈಫಲ್ಯ ಕಂಡಿದ್ದರು. 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಪಾಂಡ್ಯ 8 ಎಸೆತಗಳಲ್ಲಿ ಕೇವಲ 11 ರನ್ ಗಳಿಸಿದರೆ, ಭುವನೇಶ್ವರ್ ತಮ್ಮ 3 ಓವರ್‌ಗಳಲ್ಲಿ ವಿಕೆಟ್​ ಪಡೆಯದೆ 25 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು.

ನ್ಯೂಜಿಲೆಂಡ್​ ಹಾಗೂ ಭಾರತದ ನಡುವಿನ ಮುಂಬರುವ ಪಂದ್ಯವು ಅಕ್ಟೋಬರ್​ 31ರಂದು ದುಬೈನಲ್ಲಿ ನಡೆಯಲಿದೆ. ಸದ್ಯ ಎರಡೂ ತಂಡಗಳು ಆರಂಭಿಕ ಪಂದ್ಯದಲ್ಲಿ ಪಾಕ್​ ವಿರುದ್ಧ ಸೋಲು ಅನುಭವಿಸಿವೆ.

ಇದನ್ನೂ ಓದಿ:ನಾನು ಇನ್ನು ದಕ್ಷಿಣ ಆಫ್ರಿಕಾ ತಂಡಕ್ಕೆ ಆಡುವುದಿಲ್ಲ: ಕ್ರಿಸ್ ಮೋರಿಸ್​

ABOUT THE AUTHOR

...view details