ದುಬೈ :ಐಸಿಸಿ ಟಿ-20 ವಿಶ್ವಕಪ್ನ ಸೂಪರ್-12 ಗ್ರೂಪ್ 1ರ ಇಂಗ್ಲೆಂಡ್ ಮತ್ತು ಬಾಂಗ್ಲಾ ನಡುವಿನ ಪಂದ್ಯದಲ್ಲಿ ಆಂಗ್ಲರ ಪಡೆ 8 ವಿಕೆಟ್ಗಳಿಂದ ಭರ್ಜರಿ ಜಯ ದಾಖಲಿಸಿದೆ. ಬಾಂಗ್ಲಾದೇಶ ನೀಡಿದ್ದ ಸಾಧಾರಣ ಗುರಿ ಬೆನ್ನಟ್ಟಿದ ಮಾರ್ಗನ್ ಪಡೆ ನಿರಾಯಾಸವಾಗಿ ದಡ ತಲುಪಿದೆ.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಬಾಂಗ್ಲಾದೇಶ ನಿಗದಿತ 20 ಓವರ್ನಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 124 ರನ್ ಗಳಿಸಿತ್ತು. ಈ ಸಾಧಾರಣ ಮೊತ್ತ ಬೆನ್ನಟ್ಟಿದ ಇಂಗ್ಲೆಂಡ್ 8 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದೆ.
ಆಂಗ್ಲರ ಪರ ಜೇಸನ್ ರಾಯ್ ಹಾಗೂ ಜೋಸ್ ಬಟ್ಲರ್ ಉತ್ತಮ ಆರಂಭ ತಂದು ಕೊಟ್ಟರು. 18 ರನ್ಗಳಿಸಿದ್ದ ವೇಳೆ ಜೋಸ್ ಬಟ್ಲರ್ ನ್ಯೂಸಮ್ ಅಹ್ಮದ್ಗೆ ವಿಕೆಟ್ ಒಪ್ಪಿಸಿದರು. ಬಾಂಗ್ಲಾ ಬೌಲರ್ಗಳಿಗೆ ಕಾಡಿದ ಜೇಸನ್ ರಾಯ್ 5 ಬೌಂಡರಿ 3 ಸಿಕ್ಸರ್ ನೆರವಿನಿಂದ 38 ಎಸೆತದಲ್ಲಿ 61 ರನ್ ಗಳಿಸಿ ಔಟಾದರು. ನಂತರ ಕ್ರೀಸ್ಗೆ ಆಗಮಿಸಿದ ಜಾನಿ ಬೈರ್ಸ್ಟೋ 8 (4), ಡೇವಿಡ್ ಮಲನ್ 28 (25) ಜೊತೆ ಸೇರಿ ತಂಡವನ್ನ ಇನ್ನೂ 6 ಓವರ್ ಬಾಕಿ ಇರುವಾಗಲೇ ಜಯದ ದಡ ತಲುಪಿಸಿದರು.
ಬಾಂಗ್ಲಾದೇಶ ಪರವಾಗಿ ಶೋರಿಫುಲ್ ಇಸ್ಲಾಮ್ ಹಾಗೂ ನಾಸೂಮ್ ಅಹ್ಮದ್ ತಲಾ ಒಂದೊಂದು ವಿಕೆಟ್ ಪಡೆದರು.
ಇದನ್ನೂ ಓದಿ:ಟಿವಿ ಚರ್ಚೆಯಲ್ಲಿ ಪಾಕ್ ವೇಗಿ ಅಖ್ತರ್ಗೆ ಅವಮಾನ.. ಶೋ ಮಧ್ಯದಲ್ಲೇ ಹೊರ ನಡೆದ ಮಾಜಿ ಕ್ರಿಕೆಟಿಗ..