ದುಬೈ :ಐಸಿಸಿ ಟಿ-20 ವಿಶ್ವಕಪ್ನ ಸೂಪರ್-12 ಗ್ರೂಪ್ 1ರ ಇಂಗ್ಲೆಂಡ್ ಮತ್ತು ಬಾಂಗ್ಲಾ ನಡುವಿನ ಪಂದ್ಯದಲ್ಲಿ ಬಾಂಗ್ಲಾ ಪಡೆ ಮೊದಲ ಬ್ಯಾಟಿಂಗ್ ನಡೆಸಿ ಆಂಗ್ಲರಿಗೆ ಸಾಧಾರಣ ಮೊತ್ತದ ಗುರಿ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಬಾಂಗ್ಲಾದೇಶ ನಿಗದಿತ 20 ಓವರ್ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 124 ರನ್ ಕಲೆ ಹಾಕಲಷ್ಟೇ ಶಕ್ತವಾಯಿತು. ಬಾಂಗ್ಲಾ ಪರವಾಗಿ ಆರಂಭಿಕರಾಗಿ ಕಣಕ್ಕಿಳಿದ ಲಿಟನ್ ದಾಸ್ 9 (8), ಮೊಹಮ್ಮದ್ ನಯೀಮ್ 5 (7) ರನ್ಗಳಿಸಿ ಬಹುಬೇಗ ವಿಕೆಟ್ ಒಪ್ಪಿಸಿದರು.
ನಂತರ ಕ್ರೀಸ್ಗಿಳಿದ ಆಟಗಾರರು ರನ್ ಕಲೆ ಹಾಕಲು ಪರದಾಡಿದರು. ಮುಸ್ತಫಿಕುರ್ ರಹಿಮ್ 30 ಬಾಲ್ನಲ್ಲಿ 29 ರನ್ ಗಳಿಸಿದ್ದು ಬಿಟ್ಟರೆ ಬೇರಾವ ಆಟಗಾರ ಸಹ ಕ್ರೀಸ್ನಲ್ಲಿ ರನ್ಗಳಿಸಲು ಸಾಧ್ಯವಾಗದೆ ವಿಕೆಟ್ ಒಪ್ಪಿಸಿದರು.
ಶಕಿಬ್ ಅಲ್ ಹಸನ್ 4(7), ಮಹಮದುಲ್ಲಾ 19 (24), ಆಸಿಫ್ ಹುಸೈನ್ 5 (6), ಮೆಹದಿ ಹಸನ್ 11 (10), ನೂರುಲ್ ಹಸನ್ 16 (18) ನಸೂಮ್ ಅಹಮ್ಮದ್ 19 (9) ಔಟಾಗದೆ ತಂಡ 124 ರನ್ ಗಳಿಸುವಲ್ಲಿ ನೆರವಾದರು. ಇಂಗ್ಲೆಂಡ್ ಪರವಾಗಿ ಟೈಮಲ್ ಮಿಲ್ಸ್ 3, ಮೋಯಿನ್ ಅಲಿ, ಲಿವಿಂಗ್ಸ್ಟೋನ್ ತಲಾ 2 ವಿಕೆಟ್ ಪಡೆದರೆ, ಕ್ರಿಸ್ ವೋಕ್ಸ್ 1 ವಿಕೆಟ್ ಪಡೆದು ಮಿಂಚಿದರು.