ಅಬು ಧಾಬಿ:ವೆಸ್ಟ್ ಇಂಡೀಸ್ ಟಿ20 ವಿಶ್ವಕಪ್ ಪಯಣ ಮುಗಿಯುತ್ತಿದ್ದಂತೆ ಡ್ವೇನ್ ಬ್ರಾವೋ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದರು. ಇಂದು ಆಸ್ಟ್ರೇಲಿಯಾ ವಿರುದ್ಧ ಅಬು ಧಾಬಿಯಲ್ಲಿ ಅವರು ತಮ್ಮ ವೃತ್ತಿ ಜೀವನದ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಆಡಿದರು.
2019ರಲ್ಲಿ ನಿವೃತ್ತಿ ಘೋಷಿಸಿ ಮತ್ತೆ ತಮ್ಮ ನಿರ್ಧಾರ ಹಿಂತೆಗೆದುಕೊಂಡಿದ್ದ ಬ್ರಾವೋ ಈ ಬಾರಿಯ ಟೂರ್ನಿಯಲ್ಲಿ ತಂಡ ಉತ್ತಮ ಪ್ರದರ್ಶನ ನೀಡದ ಕಾರಣದಿಂದ ವಿದಾಯ ಹೇಳಿದ್ದು, ಪಂದ್ಯದ ವೇಳೆ ಆಟಗಾರರು ಗಾರ್ಡ್ ಆಫ್ ಹಾನರ್ ಸಲ್ಲಿಸಿದರು.
ಗುರುವಾರವಷ್ಟೇ ಶ್ರೀಲಂಕಾ ವಿರುದ್ಧದ ಪಂದ್ಯದ ಬಳಿಕ ಫೇಸ್ಬುಕ್ ಲೈವ್ನಲ್ಲಿ ಮಾತನಾಡಿದ್ದ ಅವರು ಇದೀಗ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ನಾನು ಉತ್ತಮ ವೃತ್ತಿ ಜೀವನ ಗಳಿಸಿದ್ದೆ. 18 ವರ್ಷಗಳ ಕಾಲ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಿದ್ದೆ. ಈ ನಡುವೆ ಕೆಲ ಏರಿಳಿತ, ಸವಾಲು ಎದುರಿಸಿದ್ದೇನೆ. ಹಿಂದಿರುಗಿ ನೋಡಿದಾಗ ನನ್ನ ದೇಶ ಮತ್ತು ಕೆರಿಬಿಯನ್ ಜನರನ್ನು ಪ್ರತಿನಿಧಿಸಿದ್ದಕ್ಕಾಗಿ ತುಂಬಾ ಕೃತಜ್ಞನಾಗಿದ್ದೇನೆ ಎಂದಿದ್ದರು.