ಕರ್ನಾಟಕ

karnataka

ETV Bharat / sports

T20 World Cup: ICC ಟೂರ್ನಮೆಂಟ್​ ತಂಡದ ನಾಯಕನಾಗಿ ಬಾಬರ್​,ಯಾವುದೇ ಭಾರತೀಯನಿಗಿಲ್ಲ ಸ್ಥಾನ! - T20 World Cup

ಐಸಿಸಿ ಟಿ-20 ವಿಶ್ವಕಪ್(ICC T20 World Cup)​ ಮುಕ್ತಾಯಗೊಳ್ಳುತ್ತಿದ್ದಂತೆ ಐಸಿಸಿ ಟೂರ್ನಮೆಂಟ್ ಆಫ್​ ದಿ ಟೀಂ(ICC Team of the Tournament) ಘೋಷಣೆಯಾಗಿದೆ. ಇದರಲ್ಲಿ ಭಾರತೀಯ ಯಾವುದೇ ಆಟಗಾರ ಕೂಡ ಸ್ಥಾನ ಪಡೆದುಕೊಂಡಿಲ್ಲ..

Babar
Babar

By

Published : Nov 15, 2021, 3:16 PM IST

Updated : Nov 15, 2021, 4:37 PM IST

ದುಬೈ :ಐಸಿಸಿ ಟಿ-20 ವಿಶ್ವಕಪ್​(ICC T20 World Cup)ನಲ್ಲಿ ಆಸ್ಟ್ರೇಲಿಯಾ ನೂತನ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ICC) ಟೂರ್ನಾಮೆಂಟ್ ತಂಡದ ಹೆಸರು ಘೋಷಣೆ ಮಾಡಿದೆ. ಇದರಲ್ಲಿ ಯಾವುದೇ ಭಾರತೀಯ ಆಟಗಾರ ಸ್ಥಾನ ಪಡೆದುಕೊಂಡಿಲ್ಲ.

ಐಸಿಸಿ ಟೂರ್ನಾಮೆಂಟ್​​ (ICC Team of the Tournament)ತಂಡದಲ್ಲಿ ಪಾಕಿಸ್ತಾನದ ಬಾಬರ್​ ಆಜಂಗೆ ನಾಯಕ ಸ್ಥಾನ ನೀಡಲಾಗಿದೆ. ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​ ಹಾಗೂ ಇಂಗ್ಲೆಂಡ್​ ವಿಕೆಟ್ ಕೀಪರ್​​ ಜೋಸ್​ ಬಟ್ಲರ್​ ಆರಂಭಿಕರಾಗಿ ಸ್ಥಾನ ಪಡೆದಿದ್ದಾರೆ.

ಉಳಿದಂತೆ ಶ್ರೀಲಂಕಾದ ಅಸಲಂಕಾ 4ನೇ ಸ್ಥಾನ,ದಕ್ಷಿಣ ಆಫ್ರಿಕಾದ ಮರ್ಕ್ರಾಮ್ ಹಾಗೂ ಇಂಗ್ಲೆಂಡ್​​ ಆಲ್​​ರೌಂಡರ್​​ ಮೊಯಿನ್​ ಅಲಿ ಕ್ರಮವಾಗಿ 5 ಹಾಗೂ 6ನೇ ಸ್ಥಾನ ಪಡೆದಿದ್ದಾರೆ. ಇದರ ಜೊತೆಗೆ ಶ್ರೀಲಂಕಾದ ಹಸರಂಗ,ಆಸ್ಟ್ರೇಲಿಯಾದ ಆಡಮ್ ಜಂಪಾ, ಜೋಶ್ ಹ್ಯಾಜಲ್​ವುಡ್​​​, ಟ್ರೆಂಟ್​ ಬೊಲ್ಟ್​​, ಆನ್ರಿಚ್​ ನಾರ್ಟ್ಜ್​​ ಹಾಗೂ ಶಾಹಿನ್​ ಆಫ್ರಿದಿ ತಂಡದಲ್ಲಿದ್ದಾರೆ.

ಟ್ರೋಫಿ ಗೆದ್ದ ಆಸ್ಟ್ರೇಲಿಯಾ ಗೆಲುವಿನ ಸಂಭ್ರಮ

ಐಸಿಸಿ ಟೂರ್ನಾಮೆಂಟ್ ತಂಡ : ಡೇವಿಡ್ ವಾರ್ನರ್, ಜೋಸ್ ಬಟ್ಲರ್ (WK), ಬಾಬರ್ ಅಜಮ್ (ಕ್ಯಾಪ್ಟನ್​​), ಅಸಲಂಕಾ, ಮಾರ್ಕ್ರಾಮ್, ಮೊಯಿನ್ ಅಲಿ, ವನಿಂದು ಹಸರಂಗಾ, ಆಡಮ್ ಜಂಪಾ, ಜೋಶ್ ಹ್ಯಾಜಲ್‌ವುಡ್, ಟ್ರೆಂಟ್ ಬೌಲ್ಟ್, ಆನ್ರಿಚ್ ನಾರ್ಟ್ಜೆ, ಶಾಹೀನ್ ಅಫ್ರಿದಿ.

ಇದನ್ನೂ ಓದಿರಿ:ಗೆಲುವಿನ ಸಂಭ್ರಮಾಚರಣೆಯಲ್ಲಿ ಆಸ್ಟ್ರೇಲಿಯಾ ಆಟಗಾರರು; ಶೂದಿಂದ ತಂಪು ಪಾನೀಯ ಕುಡಿದ ವಿಡಿಯೋ ವೈರಲ್

ಐಸಿಸಿ ಟಿ-20 ಕ್ರಿಕೆಟ್(ICC T20 World Cup) ಟೂರ್ನಾಮೆಂಟ್​ನಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್​ 289 ರನ್​, ಬಟ್ಲರ್​ 269 ರನ್ ​ಗಳಿಸಿದ್ದಾರೆ. ಪಾಕ್​ನ ಬಾಬರ್ ಆಜಂ 303 ರನ್​ ಗಳಿಕೆ ಮಾಡಿದ್ದಾರೆ.

ವಿಶೇಷವೆಂದರೆ ತಂಡದಲ್ಲಿ ರೋಹಿತ್ ಶರ್ಮಾ, ವಿರಾಟ್​​ ಕೊಹ್ಲಿ, ರವೀಂದ್ರ ಜಡೇಜಾ, ರಿಷಭ್ ಪಂತ್ ಸೇರಿದಂತೆ ಯಾವುದೇ ಪ್ಲೇಯರ್ಸ್​ ಅವಕಾಶ ಪಡೆದಿಲ್ಲ. ​​ಪ್ರಸಕ್ತ ಸಾಲಿನ ಐಸಿಸಿ ಟಿ-20 ವಿಶ್ವಕಪ್​​ನಲ್ಲಿ ವಿರಾಟ್​​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ(Team India Cricket) ಆಡಿರುವ ಐದು ಪಂದ್ಯಗಳ ಪೈಕಿ ಮೂರರಲ್ಲಿ ಗೆಲುವು ಸಾಧಿಸಿ, ಎರಡು ಪಂದ್ಯಗಳಲ್ಲಿ ಸೋಲು ಕಂಡು ಲೀಗ್ ಹಂತದಿಂದಲೇ ಹೊರ ಬಿದ್ದಿತ್ತು.

Last Updated : Nov 15, 2021, 4:37 PM IST

ABOUT THE AUTHOR

...view details