ದುಬೈ:ಯುಎಇಯಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಪಂದ್ಯಗಳು ಕ್ರಿಕೆಟ್ ಅಭಿಮಾನಿಗಳಲ್ಲಿ ರೋಚಕತೆ ಉಂಟು ಮಾಡುತ್ತಿದೆ.
ಪಂದ್ಯ ಮುಗಿದ ಬಳಿಕ ಕ್ರಿಕೆಟ್ ತಂಡದ ನಾಯಕರು ಸುದ್ದಿಗೋಷ್ಠಿ ನಡೆಸಿ ಮಾತನಾಡುವುದು ಅವರು ನಿರ್ವಹಿಸಬೇಕಾದ ಕರ್ತವ್ಯಗಳಲ್ಲಿ ಒಂದು. ಈ ಸಂದರ್ಭದಲ್ಲಿ ಆಯಾ ತಂಡದ ನಾಯಕರು ಆ ದಿನ ನಡೆದ ಪಂದ್ಯದ ಬಗ್ಗೆ ವಿವರಣೆ ನೀಡುತ್ತಾರೆ. ಆದ್ರೆ ಅಫ್ಘಾನಿಸ್ತಾನ ತಂಡದ ನಾಯಕ ಇದೊಂದು ಅತ್ಯಂತ ಕಷ್ಟಕರ ಎಂದು ತಮಾಷೆ ಮಾಡಿದ್ದಾರೆ.
ಅಫ್ಘಾನ್ ತಂಡದ ನಾಯಕ ಮಹಮ್ಮದ್ ನಬಿ, ಪಂದ್ಯದ ನಂತರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡುವುದು ಕಷ್ಟದ ಕೆಲಸ. ಐದು ನಿಮಿಷದಲ್ಲಿ ನನ್ನ ಇಂಗ್ಲಿಷ್ ಮಾತುಗಳು ಮುಗಿಯುತ್ತವೆ ಎಂದಿದ್ದಾರೆ.
‘ಸಬ್ಸೆ ಮುಷ್ಕಿಲ್ ಕಾಮ್ ಹೈ ಭಾಯಿ ಯೇ, ಕಸಮ್ ಸೆ,’ (ಇದು ಅತ್ಯಂತ ಕಷ್ಟಕರವಾದ ವಿಷಯ ಸಹೋದರ, ನನ್ನಾಣೆಗೂ). ‘ಕಿತ್ನೆ ಕೊಶನ್ಸ್ ಹೈ?’ (ಎಷ್ಟು ಪ್ರಶ್ನೆಗಳಿವೆ?) ಎಂದು ಅಲ್ಲಿದ್ದ ವ್ಯಕ್ತಿಗೆ ಕೇಳುತ್ತಾರೆ. ಬಹುಶಃ ಅವರು ಮಾಧ್ಯಮ ನಿರ್ವಾಹಕರಾಗಿರಬೇಕು. ‘ಪಾಂಚ್ ಮಿನಿಟ್ ಮೇ ಮೇರಿ ಇಂಗ್ಲಿಷ್ ಖತಮ್ ಹೋ ಜಾಯೇಗಿ ಭಾಯ್’ (ಐದು ನಿಮಿಷದಲ್ಲಿ ನನ್ನ ಇಂಗ್ಲಿಷ್ ಮುಗಿಯುತ್ತೆ ಸಹೋದರ) ಎಂದು ನಬಿ ಹೇಳುತ್ತಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದು, ಕ್ರಿಕೆಟ್ ಅಭಿಮಾನಿಗಳು ಸಖತ್ ಎಂಜಾಯ್ ಮಾಡ್ತಿದ್ದಾರೆ.