ಅಕಾಪುಲ್ಕೊ(ಮೆಕ್ಸಿಕೋ): ಮೆಕ್ಸಿಕನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಸೋತ ಸಿಟ್ಟಿನಲ್ಲಿ ಅಂಪೈರ್ ಕುಳಿತಿದ್ದ ಕುರ್ಚಿಗೆ ರಾಕೆಟ್‌ನಿಂದ ಸತತವಾಗಿ ಬಡಿದಿದ್ದ ವಿಶ್ವದ ನಂ.3 ಟೆನಿಸ್ ಆಟಗಾರ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್‌ಗೆ 40 ಸಾವಿರ ಡಾಲರ್ ದಂಡ ವಿಧಿಸಲಾಗಿದೆ.
ಟೋಕಿಯೋ ಒಲಿಂಪಿಕ್ಸ್‌ನ ಚಿನ್ನದ ಪದಕ ವಿಜೇತ ಅಲೆಕ್ಸಾಂಡರ್ ಜ್ವೆರೆವ್, ಡಬಲ್ಸ್‌ನಲ್ಲಿ ಸೋತ ನಂತರ ಚೇರ್ ಅಂಪೈರ್‌ನ ಸ್ಟ್ಯಾಂಡ್‌ಗೆ ಹೊಡೆದ ನಂತರ ಮೆಕ್ಸಿಕನ್ ಓಪನ್‌ನಿಂದ ಬಂದಿದ್ದ 30 ಸಾವಿರ ಡಾಲರ್‌ಗಿಂತ ಹೆಚ್ಚು ಮೊತ್ತದ ಬಹುಮಾನದ ಹಣ ಹಾಗೂ ಎಲ್ಲಾ ಶ್ರೇಯಾಂಕದ ಅಂಕಗಳನ್ನು ಕಳೆದುಕೊಂಡಿದ್ದಾರೆ.
ಈ ಘಟನೆಯ ಬಗ್ಗೆ ಮತ್ತಷ್ಟು ಪರಿಶೀಲನೆಯನ್ನು ಕೈಗೊಳ್ಳುವುದಾಗಿ ಟೆನಿಸ್ ವೃತ್ತಿಪರರ ಸಂಘ-ಎಟಿಪಿ ನಿನ್ನೆಯಷ್ಟೇ ಘೋಷಿಸಿತ್ತು. ಕಳೆದ ಬುಧವಾರ ನಡೆದಿದ್ದ ಪುರುಷರ ಡಬಲ್ಸ್ ಪಂದ್ಯದಲ್ಲಿ ಸೋತ ಬಳಿಕ ವಿಶ್ವ ನಂ.3 ಟೆನಿಸಿಗ, ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅಂಪೈರ್ ಮೇಲೆ ದಾಳಿಗೆ ಯತ್ನಿಸಿದ್ದರು.