ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿರುವ ಭಾರತದ ಮಾಜಿ ಕ್ರಿಕೆಟಿಗ, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್, ದುಬೈನ 'ಫೇಮ್ ಪಾರ್ಕ್'ನಲ್ಲಿ ಪ್ರಾಣಿಗಳೊಂದಿಗೆ ಮಸ್ತಿ ಮಾಡುತ್ತಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರೋದು ಸಖತ್ ವೈರಲ್ ಆಗಿದೆ.
'ಟೈಗರ್ ವರ್ಸಸ್ ಲೈಗರ್' ಎಂಬ ಶೀರ್ಷಿಕೆಯೊಂದಿಗೆ ಯುವಿ ಹಂಚಿಕೊಂಡಿರುವ ವಿಡಿಯೋದಲ್ಲಿ ಯುವರಾಜ್ ಸಿಂಗ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಲೈಗರ್ ಜೊತೆ ಟಗ್ ಆಫ್ ವಾರ್ ಆಡುತ್ತಿದ್ದಾರೆ. "ಟೈಗರ್ ವರ್ಸಸ್ ಲೈಗರ್, ಆದರೆ ಅಂತಿಮ ಫಲಿತಾಂಶವು ನನ್ನ ಭಯವನ್ನು ಮೀರಿ ಒಂದು ಸುಂದರ ಅನುಭವವನ್ನು ಪಡೆದುಕೊಂಡಿದೆ, ಕಾಡಿನ ನೈಜ ರೂಪದೊಂದಿಗೆ ಸಂವಹನ ನಡೆಸುತ್ತಿದೆ" ಎಂದು ಯುವಿ ಬರೆದುಕೊಂಡಿದ್ದಾರೆ.