ಮುಂಬೈ: wwe ಸೂಪರ್ ಸ್ಟಾರ್ ಜಾನ್ ಸೀನ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮಗನ ಕುಸ್ತಿ ಪ್ರೇಮಕ್ಕೆ ಫಿದಾ ಆಗಿದ್ದು, ವಿಡಿಯೋ ಸಂದೇಶ ಕಳುಹಿಸುವ ಮೂಲಕ ವಿಯಾನ್ ಆಸಕ್ತಿಗೆ ಮತ್ತಷ್ಟು ಸ್ಫೂರ್ತಿ ತುಂಬಿದ್ದಾರೆ.
ಶಿಲ್ಪಾ ಶೆಟ್ಟಿ ಪುತ್ರನಿಗೆ ವಿಡಿಯೋ ಸಂದೇಶ ಕಳುಹಿಸಿದ wwe ಸ್ಟಾರ್ ಜಾನ್ ಸೀನ - ಜಾನ್ ಸೀನ
wwe ಸೂಪರ್ ಸ್ಟಾರ್ ಜಾನ್ ಸೀನ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮಗನ ಕುಸ್ತಿ ಪ್ರೇಮಕ್ಕೆ ಫಿದಾ ಆಗಿದ್ದು, ವಿಡಿಯೋ ಸಂದೇಶ ಕಳುಹಿಸುವ ಮೂಲಕ ವಿಯಾನ್ ಆಸಕ್ತಿಗೆ ಮತ್ತಷ್ಟು ಸ್ಫೂರ್ತಿ ತುಂಬಿದ್ದಾರೆ.
ಶಿಲ್ಪಾ ಶೆಟ್ಟಿ ಮಗ ವಿಯಾನ್ ಡಬ್ಲ್ಯೂಡಬ್ಲ್ಯೂಇನ ಅಭಿಮಾನಿಯಾಗಿದ್ದು, ಈತ 16 ಬಾರಿ ವಿಶ್ವ ಚಾಂಪಿಯನ್ ಜಾನ್ ಸೀನರ ದೊಡ್ಡ ಅಭಿಮಾನಿಯಾಗಿದ್ದಾನೆ. ವಿಯಾನ್ ಕೆಲವು ದಿನಗಳ ಹಿಂದೆ ಜಾನ್ ಸೀನರ ರೀತಿ ಬಟ್ಟೆ ಧರಿಸಿ ಅವರ ಎಂಟ್ರಿ ಸಾಂಗ್ಅನ್ನು ಹಾಡಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಲಾಗಿತ್ತು. ತದ ನಂತರ ಭಾರತದ ಡಬ್ಲ್ಯೂಡಬ್ಲ್ಯೂಇ ಸಂಸ್ಥೆ ವಿಯಾನ್ನನ್ನು ಕರೆಸಿ ಸಂದರ್ಶನ ನಡೆಸಿತ್ತು.
ಆ ಸಂದರ್ಶನದಲ್ಲಿ ಡಬ್ಲ್ಯೂಡಬ್ಲ್ಯೂಇ ಕುರಿತು ಮಾತನಾಡಿದ್ದು, ಕಾರ್ಯಕ್ರಮ ಕುರಿತು ಹಲವು ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಕೊಟ್ಟು ಶಹಬ್ಬಾಸ್ಗಿರಿ ಪಡೆದಿದ್ದ. ಈ ಸಂದರ್ಶನ ನೋಡಿರುವ ಜಾನ್ ಸೀನ ವಿಡಿಯೋ ಸಂದೇಶದ ಮೂಲಕ ಪ್ರತಿಕ್ರಿಯಿಸಿದ್ದು, "ಹಾಯ್ ವಿಯಾನ್ ನಾನು ನಿನ್ನ ಸ್ನೇಹಿತ(ಬಡ್ಡಿ) ಜಾನ್ ಸೀನ. ನಾನು ನಿನ್ನ ವಿಡಿಯೋ ನೋಡಿದ್ದು, ಅದರಲ್ಲಿ ನಿನ್ನ ಮಸಲ್ ನೋಡಿದ ನಂತರ ಮತ್ತೆ ಜಿಮ್ಗೆ ಹೋಗಿ ವರ್ಕ್ಔಟ್ ಮಾಡಬೇಕೆನಿಸಿದೆ. ನನ್ನ ಸಮಯ ಮುಗಿದೆ, ಈಗ ನಿನ್ನ ಸಮಯ ವಿಯಾನ್ ಎಂದಿದ್ದಾರೆ.