ನೂರ್ ಸುಲ್ತಾನ್: ಭಾರತದ ಕುಸ್ತಿಪಟುಗಳು ವಿಶ್ವ ಚಾಂಪಿಯನ್ಶಿಪ್ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದ್ದು 19 ವರ್ಷದ ದೀಪಕ್ ಪೂನಿಯಾ 86 ಕೆಜಿ ವಿಭಾಗದಿಂದ ಸೆಮಿಫೈನಲ್ ಪ್ರವೇಶಿಸುವ ಮೂಲಕ ಟೋಕಿಯೋ ಒಲಿಂಪಿಕ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ವಿಶ್ವಚಾಂಪಿಯನ್ಶಿಪ್ ಕುಸ್ತಿಯಲ್ಲಿ ಸೆಮಿಫೈನಲ್ ಪ್ರವೇಶಿಸಿ ಒಲಿಂಪಿಕ್ ಟಿಕೆಟ್ ಗಿಟ್ಟಿಸಿಕೊಂಡ 19 ವರ್ಷದ ದೀಪಕ್ ಪೂನಿಯ! - ವಿಶ್ವಕುಸ್ತಿ ಚಾಂಪಿಯನ್ಶಿಪ್
ಭಾರತದ ಕುಸ್ತಿಪಟುಗಳು ವಿಶ್ವ ಚಾಂಪಿಯನ್ಶಿಪ್ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದ್ದು 19 ವರ್ಷದ ದೀಪಕ್ ಪೂನಿಯಾ 86 ಕೆಜಿ ವಿಭಾಗದಿಂದ ಸೆಮಿಫೈನಲ್ ಪ್ರವೇಶಿಸುವ ಮೂಲಕ ಟೋಕಿಯೋ ಒಲಿಂಪಿಕ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
Deepak Punia
ಜೂನಿಯರ್ ವಿಶ್ವಚಾಂಪಿಯನ್ ಆಗಿರುವ ದೀಪಕ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೊಲಂಬಿಯಾದ ಕಾರ್ಲಸ್ ಜಿಕ್ವೈರ್ಡೋ ಅವರನ್ನು 7-6ರಲ್ಲಿ ಮಣಿಸುವ ಮೂಲಕ 86 ಕೆಜಿ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದರಲ್ಲದೆ. ಜಪಾನ್ನಲ್ಲಿ ನಡೆಯುವ 2020 ರ ಒಲಿಂಪಿಕ್ಗೆ ಅರ್ಹತೆ ಗಿಟ್ಟಿಸಿಕೊಂಡರು.
ಹೀಗಾಗಲೆ ಮಹಿಳಾ ವಿಭಾಗದಿಂದ ವಿನೇಶ್ ಫೋಗಟ್, ಪುರುಷರ ವಿಭಾಗದಿಂದ ಭಜರಂಗ್ ಪೂನಿಯಾ, ರವಿಕುಮಾರ್ ಒಲಿಂಪಿಕ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.