ಮ್ಯೂನಿಚ್: 2022 ರ ವಿಶ್ವ ಶೂಟಿಂಗ್ ಪ್ಯಾರಾ ಸ್ಪೋರ್ಟ್ ವರ್ಲ್ಡ್ ಕಪ್ನಲ್ಲಿ ಭಾರತೀಯ ಪಡೆ ಅಬ್ಬರದಿಂದ ತನ್ನ ಅಭಿಯಾನ ಪ್ರಾರಂಭಿಸಿದೆ. ಎರಡು ಚಿನ್ನ ಮತ್ತು ಒಂದು ಬೆಳ್ಳಿ ಹೀಗೆ ಮೊದಲ ದಿನವೇ ಮೂರು ಪದಕಗಳನ್ನು ಪಡೆದುಕೊಂಡು ಸಾಧನೆ ಮಾಡಿದೆ. P3 Mixed 25m ಪಿಸ್ತೂಲ್ ಎಸ್ಎಚ್ 1 ಸ್ಪರ್ಧೆಯಲ್ಲಿ ರಾಹುಲ್ ಜಾಖರ್ ಚಿನ್ನದ ಪದಕ ಪಡೆದರು. ಗುರಿಯ ಮಧ್ಯದಲ್ಲಿ ಹತ್ತು ಹಿಟ್ಗಳೊಂದಿಗೆ ಒಟ್ಟು 571 ಕ್ಕೆ 95,91,96,97,96 ಮತ್ತು 96 ರ ಸರಣಿಯೊಂದಿಗೆ ಶೂಟಿಂಗ್ ಮಾಡಿ ಅವರು ಅದ್ಭುತ ಸಾಧನೆ ಮಾಡಿದರು. ಈ ಪ್ರದರ್ಶನದೊಂದಿಗೆ ಅವರು ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
WSPS ಮ್ಯೂನಿಚ್ ವಿಶ್ವಕಪ್: ಪ್ರಥಮ ದಿನ 3 ಪದಕ ಗೆದ್ದು ಬೀಗಿದ ಭಾರತೀಯ ಶೂಟರ್ಸ್ - ವಿಶ್ವ ಶೂಟಿಂಗ್ ಪ್ಯಾರಾ ಸ್ಪೋರ್ಟ್ ವರ್ಲ್ಡ್ ಕಪ್
ಫೈನಲ್ನಲ್ಲಿ, ಜಾಖರ್ ಮೊದಲ ಮತ್ತು ಎರಡನೇ ಸರಣಿಯಲ್ಲಿ ಮೂರು ಹಿಟ್ಗಳನ್ನು ಮತ್ತು ನಂತರ ಒಂದು ಬೌಂಡರಿ ಹೊಡೆದರು. ಅಂತಿಮ ಸರಣಿಯಲ್ಲಿ, ಜಾಖರ್ ಒಂದು ಮತ್ತು ಸಿಂಗ್ರಾಜ್ ಎರಡು ಬೌಂಡರಿ ಬಾರಿಸಿದರು.
ಫೈನಲ್ನಲ್ಲಿ, ಜಾಖರ್ ಮೊದಲ ಮತ್ತು ಎರಡನೇ ಸರಣಿಯಲ್ಲಿ ಮೂರು ಹಿಟ್ಗಳನ್ನು ಮತ್ತು ನಂತರ ಒಂದು ಬೌಂಡರಿ ಹೊಡೆದರು. ಅಂತಿಮ ಸರಣಿಯಲ್ಲಿ, ಜಾಖರ್ ಒಂದು ಮತ್ತು ಸಿಂಗ್ರಾಜ್ ಎರಡು ಬೌಂಡರಿ ಬಾರಿಸಿದರು. ಅಂತಿಮ ಸ್ಕೋರ್- ರಾಹುಲ್ 27 ಮತ್ತು ಸಿಂಗ್ರಾಜ್ 24 ಆಗಿದ್ದು, ಇಬ್ಬರೂ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಪಡೆದರು. ಉಕ್ರೇನ್ ಶೂಟರ್ ಓಲೆಕ್ಸಿ ಡೆನಿಸಿಯುಕ್ 20 ಅಂಕಗಳೊಂದಿಗೆ ಮೂರನೇ ಸ್ಥಾನ ಗಳಿಸಿದರೆ, ನಿಹಾಲ್ ಸಿಂಗ್ 14 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದರು.
P3 Mixed 25m ಪಿಸ್ತೂಲ್ ತಂಡ SH1 ರ ಟೀಮ್ ಈವೆಂಟ್ನಲ್ಲಿ, ಭಾರತದ ಜಾಖರ್, ಸಿಂಗ್ರಾಜ್ ಮತ್ತು ನಿಹಾಲ್ ಸಿಂಗ್ 14 ಅಂಕಗಳೊಂದಿಗೆ ಚಿನ್ನದ ಪದಕವನ್ನು ಪಡೆದರು. ಗ್ರೇಟ್ ಬ್ರಿಟನ್ 12 ಅಂಕ ಗಳಿಸಿ ಬೆಳ್ಳಿ ಪದಕ ಪಡೆಯಿತು ಮತ್ತು ಸ್ವಿಟ್ಜರ್ಲೆಂಡ್ 9 ಅಂಕಗಳೊಂದಿಗೆ ಕಂಚಿನ ಪದಕ ಪಡೆದುಕೊಂಡಿತು.