ನವದೆಹಲಿ:ಭಾರತೀಯ ಕುಸ್ತಿ ಒಕ್ಕೂಟ (ರೆಸ್ಲಿಂಗ್ ಫೆಡೆರೇಶನ್ ಆಫ್ ಇಂಡಿಯಾ) ಆಗಸ್ಟ್ ಮೊದಲ ವಾರದಿಂದ ಮಹಿಳಾ ಮತ್ತು ಪುರುಷರಿಗೆ ತರಬೇತಿ ಶಿಬಿರ ಆರಂಭಿಸಲು ಚಿಂತಿಸಿದೆ.
ಕೊರೊನಾ ವೈರಸ್‌ನ ಕಾರಣದಿಂದಾಗಿ ಎಲ್ಲಾ ಕ್ರೀಡಾಪಟುಗಳು ತರಬೇತಿಯಿಂದ ದೂರವಿದ್ದಾರೆ. ಆದರೆ ಇನ್ನೂ ಕೂಡ ತರಬೇತಿ ಆರಂಭಿಸದಿದ್ದರೆ ಮುಂದಿನ ಒಲಿಂಪಿಕ್ಸ್‌ಗೆ ಹಿನ್ನೆಡೆಯಾಗುವುದನ್ನು ಅರಿತ ರೆಸ್ಲಿಂಗ್ ಫೆಡರೇಶನ್ ಈ ನಿಟ್ಟಿನಲ್ಲಿ ಕೆಲಸ ಶುರು ಮಾಡಿದೆ. ರೆಸ್ಲರ್‌ಗಳಿಗೆ ತರಬೇತಿ ಶಿಬಿರವನ್ನು ಆರಂಭಿಸಲು ಉತ್ಸುಕವಾಗಿರುವುದಾಗಿ ಫೆಡರೇಶನ್ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಖಚಿತಪಡಿಸಿದ್ದಾರೆ.
ಭಾರತೀಯ ಕ್ರೀಡಾ ಪ್ರಾಧಿಕಾರ, ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಜೊತೆಗೂಡಿ ತರಬೇತಿ ಪುನರಾರಂಭಕ್ಕೆ ದಿನಾಂಕವನ್ನು ನಿಗದಿಪಡಿಸುತ್ತಿದೆ.