ನವದೆಹಲಿ:ಭಾರತದ ಭರವಸೆಯ ಕುಸ್ತಿಪಟು ವಿನೇಶ್ ಫೋಗಟ್ ರೋಮ್ ರ್‍ಯಾಂಕಿಂಗ್ ಸೀರಿಸ್ ಕುಸ್ತಿ ಪಂದ್ಯಾವಳಿಯಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
2019ರಲ್ಲಿ ವಿವಿಧ ಕುಸ್ತಿ ಸ್ಪರ್ಧೆಯಲ್ಲಿ 4 ಚಿನ್ನದ ಪದಕ ಗೆದ್ದಿದ್ದ ವಿನೇಶ್ ವಿಶ್ವಚಾಂಪಿಯನ್ಶಿಪ್ನಲ್ಲಿ ಕಂಚು ಗೆದ್ದು 2020ರ ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.
2020ರ ಟೂರ್ನಿಗಳಲ್ಲೂ ತಮ್ಮ ಪ್ರಾಬಲ್ಯ ಮುಂದುವರಿಸಿದ್ದು, 53 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಈಕ್ವೆಡಾರ್ನ ಲೂಸಿಯಾ ಎಲಿಜಬೆತ್ ಮೆಲೆಂಡ್ರೆಸ್ ಅವರನ್ನು 4-0ಯಲ್ಲಿ ಮಣಿಸುವ ಮೂಲಕ 2020ರ ಸೀಸನ್ನಲ್ಲಿ ಮೊದಲ ಚಿನ್ನದ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
53 ಕೆಜಿ ವಿಭಾಗದಲ್ಲಿ ಫೈನಲ್ ತಲುಪುವ ಮುನ್ನ ವಿನೇಶ್ ಚೀನಾದ ಲನ್ನುವಾನ್ ಲುವೋ(15-5), ಉಕ್ರೇನ್ನ ಕ್ರಿಸ್ಟೈನಾ ಬೆರೆಜಾ (10-0) ಅವರನ್ನು ಮಣಿಸಿದ್ದರು.
18 ವರ್ಷದ ಯುವ ಕುಸ್ತಿಪಟು ಅನ್ಶು ಮಲಿಕ್ ತನ್ನ ಮೊದಲ ಅಂತಾರಾಷ್ಟ್ರೀಯ ಕುಸ್ತಿ ಟೂರ್ನಿಯಲ್ಲಿ ಬೆಳ್ಳಿ ಪದಕ ಪಡೆದು ಮಿಂಚಿದ್ದಾರೆ. ಅವರು ಫೈನಲ್ನಲ್ಲಿ ನೈಜೀರಿಯಾದ ಒಡುನಾಯೊ ಅಡೆಕುರೊಯ್ ವಿರುದ್ಧ ಸೋಲು ಕಾಣುವ ಮೂಲಕ ಚಿನ್ನದ ಪದಕ ತಪ್ಪಿಸಿಕೊಂಡರು.