ಕರ್ನಾಟಕ

karnataka

ETV Bharat / sports

ಜೈಲಿನಲ್ಲಿ ಟಿವಿ ಬೇಕೆಂದು ಬೇಡಿಕೆಯಿಟ್ಟ ಕೊಲೆ ಆರೋಪಿ ಕುಸ್ತಿಪಟು ಸುಶೀಲ್ ಕುಮಾರ್!

ತಿಹಾರ್ ಜೈಲಿನ ಉನ್ನತ ಅಧಿಕಾರಿಗಳು ಕುಮಾರ್ ಅವರಿಗೆ ನೀಡಬೇಕು ಎಂದು ಭಾವಿಸಿದರೆ, ವ್ಯವಸ್ಥೆ ಮಾಡಬಹುದು. ಆದರೆ ಸ್ಥಿತಿಗತಿಗಳನ್ನು ಅವಲೋಕಿಸಿದ ನಂತರವೇ ಜೈಲಾಡಳಿತ ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಮೂಲಗಳು ತಿಳಿಸಿವೆ.

ಟಿವಿ ಬೇಕೆಂದು ಬೇಡಿಕೆಯಿಟ್ಟ ಕೊಲೆ ಆರೋಪಿ ಕುಸ್ತಿಪಟು ಸುಶೀಲ್ ಕುಮಾರ್
ಟಿವಿ ಬೇಕೆಂದು ಬೇಡಿಕೆಯಿಟ್ಟ ಕೊಲೆ ಆರೋಪಿ ಕುಸ್ತಿಪಟು ಸುಶೀಲ್ ಕುಮಾರ್

By

Published : Jul 4, 2021, 4:53 PM IST

ನವದೆಹಲಿ:ಸಾಗರ್​ ರಾಣಾ ಕೊಲೆ ಪ್ರಕರಣದಲ್ಲಿ ತಿಹಾರ್ ಜೈಲು ಸೇರಿರುವ ಎರಡು ಒಲಿಂಪಿಕ್ಸ್​ ಪದಕ ವಿಜೇತ ಸುಶೀಲ್ ಕುಮಾರ್ ತಮಗೆ ಟಿವಿ ಬೇಕೆಂದು ಜೈಲಿನ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ. ಜೈಲಿನಲ್ಲಿ ಏಕಾಂಗಿಯಾಗಿ ವಾಸಿಸಲು ಬಯಸಿದ್ದು, ಈ ಸೌಲಭ್ಯ ಒದಗಿಸಿಕೊಡಬೇಕೆಂದು ಅವರು ಕೇಳಿಕೊಂಡಿದ್ದಾರೆ.

ಟಿವಿಗಾಗಿ ಸುಶೀಲ್ ಕುಮಾರ್ ಅವರ ಮನವಿ ತಿಹಾರ್‌ ಜೈಲು ಅಧಿಕಾರಿಗಳಿಗೆ ತಲುಪಿದೆಯಂತೆ. ಈ ಬಗ್ಗೆ ಪರಾಮರ್ಶೆ ನಡೆಸಿ ಟಿವಿ ಬೇಕು ಎಂದು ಭಾವಿಸಿದರೆ, ಅಧಿಕಾರಿಗಳು ಈ ವ್ಯವಸ್ಥೆ ಮಾಡಬಹುದು. ಆದರೆ ಸ್ಥಿತಿಗತಿಗಳನ್ನು ಅವಲೋಕಿಸಿದ ನಂತರವೇ ಜೈಲಾಡಳಿತ ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಕುಸ್ತಿಪಟು ಕೊಲೆ ಕೇಸ್ : ಸುಶೀಲ್‌ಕುಮಾರ್‌ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ಸುಶೀಲ್ ಕುಮಾರ್​ಗೆ ಪ್ರಸ್ತುತ ಜೈಲಿನಲ್ಲಿ ದೊರೆಯುವ ಆಹಾರವನ್ನೇ ನೀಡಲಾಗುತ್ತಿದೆ. ಆದರೆ ಪ್ರಮಾಣದಲ್ಲಿ ಏರಿಕೆ ಮಾಡಿದೆ ಎಂದು ತಿಳಿದುಬಂದಿದೆ. ಆದರೆ ಕುಸ್ತಿಪಟು ತಮಗೆ ಪ್ರೊಟೀನ್‌ಯುಕ್ತ ಅಹಾರ ಬೇಕೆಂದು ಮಾಡಿದ್ದ ಮನವಿಯನ್ನು ದೆಹಲಿಯ ರೋಹಿಣಿ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ.

ಮೇ 23ರಂದು ದೆಹಲಿ ಪೊಲೀಸರು ಮಾಜಿ ಒಲಿಂಪಿಕ್ ಚಾಂಪಿಯನ್​ ಆಗಿರುವ ಸುಶೀಲ್‌ಕುಮಾರ್‌ ಮತ್ತು ಆತನ ಸಹಚರನನ್ನ ಬಂಧಿಸಿದ್ದರು. ಮೇ 4ರಂದು ಛತ್ರಶಾಲಾದ ಸ್ಟೇಡಿಯಂನಲ್ಲಿ ಮಧ್ಯರಾತ್ರಿ 23 ವರ್ಷದ ಸಾಗರ್​ ರಾಣಾ ಎಂಬ ಕುಸ್ತಿಪಟುವನ್ನು ಸುಶೀಲ್ ಮತ್ತು ಆತನ ಸಹಚರರು ಹೊಡೆದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಸುಶೀಲ್ ಜೂನ್​ 2ರಿಂದಲೂ ಜೈಲಿನಲ್ಲಿದ್ದಾರೆ.

ಇದನ್ನೂ ಓದಿ: ಪ್ರೋಟೀನ್​ಯುಕ್ತ ಆಹಾರಕ್ಕಾಗಿ ಕುಸ್ತಿಪಟು ಸುಶೀಲ್​ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಕೋರ್ಟ್​

ABOUT THE AUTHOR

...view details