ಕರ್ನಾಟಕ

karnataka

ಚಿನ್ನದ ಹುಡುಗಿ ಹುಟ್ದಬ್ಬ.. Happy Birthday Geeta Phogat

By

Published : Dec 15, 2021, 8:58 AM IST

2010 ರಲ್ಲಿ ನವದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ಮೂಲಕ ಇತಿಹಾಸವನ್ನು ಬರೆದಿದ್ದ ಭಾರತೀಯ ಮಹಿಳಾ ಕುಸ್ತಿಪಟು ಗೀತಾ ಫೋಗಟ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.

ಗೀತಾ ಫೋಗಟ್
ಗೀತಾ ಫೋಗಟ್

2010 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು 'ಗೀತಾ ಫೋಗಟ್' ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಜನ್ಮ ದಿನದ ಆಚರಣೆಯಲ್ಲಿರುವ ಕುಸ್ತಿಪಟುಗೆ ಶುಭಾಶಯಗಳು.

ಗೀತಾ ಫೋಗಟ್ ಅವರು ಹರಿಯಾಣದ ಭಿವಾನಿ ಜಿಲ್ಲೆಯ ಬಲಾಲಿ ಎಂಬ ಹಳ್ಳಿಯಲ್ಲಿ ಜನಿಸಿದ್ದು, ಇವರ ತಂದೆ ಮಹಾವೀರ್ ಸಿಂಗ್ ಫೋಗಟ್. ಇವರು ಸಹ ಕುಸ್ತಿಪಟು. ಅಷ್ಟೇ ಅಲ್ಲದೆ ಇವರಿಗೆ ದ್ರೋಣಾಚಾರ್ಯ ಪ್ರಶಸ್ತಿ ಸಹ ದೊರಕಿದೆ. ಮಹಾವೀರ್‌ ತಮ್ಮ ಮಕ್ಕಳಾದ ಗೀತಾ ಪೋಗಟ್‌ ಮತ್ತು ಬಬಿತಾ ಕುಮಾರಿ ಅವರಿಗೆ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ತಾವೇ ಕೋಚ್ ಆಗಿದ್ದರು.

ಗೀತಾ ಫೋಗಟ್

2010 ರಲ್ಲಿ ನವದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 55 ಕೆ.ಜಿ ವಿಭಾಗದಲ್ಲಿ ಆಸ್ಟ್ರೇಲಿಯಾದ ಎಮಿಲಿ ಬೆನ್‌ಸ್ಟೆಡ್ ಅವರನ್ನು ಸೋಲಿಸಿ ಚಿನ್ನ ಗೆಲ್ಲುವ ಮೂಲಕ ಗೀತಾ ಫೋಗಟ್ ಇತಿಹಾಸವನ್ನು ಬರೆದಿದ್ದರು. 2012 ರಲ್ಲಿ ಕೆನಡಾದಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ ಹಾಗೂ 2012 ರ ಏಷ್ಯನ್ ಚಾಂಪಿಯನ್‌ಷಿಪ್​ನಲ್ಲಿ ಕಂಚಿನ ಪದಕ ಗೆದ್ದದ್ದರು.

2013ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ 59 ಕೆಜಿ ಭಾರ ಎತ್ತುವ ವಿಭಾಗದಲ್ಲಿ ಎರಡನೇ ಸ್ಥಾನ ಗಳಿಸಿ ಬೆಳ್ಳಿ ಪದಕಕ್ಕೆ ಗೀತಾ ಮುತ್ತಿಕ್ಕಿದ್ದರು.

ಗೀತಾ ಫೋಗಟ್

2016 ರಲ್ಲಿ ಬಿಡುಗಡೆಯಾದ ಅಮೀರ್ ಖಾನ್ ನಟನೆಯ 'ದಂಗಲ್​​​' ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಹಣ ಬಾಚಿಕೊಂಡ ಸಿನಿಮಾಗಳಲ್ಲಿ ಒಂದು. ಖ್ಯಾತ ಕುಸ್ತಿಪಟು ಗೀತಾ ಫೊಗಟ್​​ ಜೀವನಚರಿತ್ರೆ ಕಥೆಯನ್ನೊಳಗೊಂಡ ಈ ಸಿನಿಮಾಗೆ ಅನೇಕ ಪ್ರಶಸ್ತಿಗಳು ಕೂಡಾ ಲಭಿಸಿವೆ.

ABOUT THE AUTHOR

...view details