ಕರ್ನಾಟಕ

karnataka

ETV Bharat / sports

ಕೇಜ್ರಿವಾಲ್​ ಸರ್ಕಾರದ ವಿರುದ್ಧ ಕಾಮನ್​​​ವೆಲ್ತ್​ ಕಂಚು ವಿಜೇತೆ ದಿವ್ಯಾ ಬೇಸರ

2022ರ ಕಾಮನ್​​ವೆಲ್ತ್ ಗೇಮ್ಸ್​​ನಲ್ಲಿ ಕಂಚು ಗೆದ್ದಿರುವ ಕುಸ್ತಿಪಟು ದಿವ್ಯಾ ದೆಹಲಿ ಸರ್ಕಾರದ ವಿರುದ್ಧ ಮಾಧ್ಯಮಗೋಷ್ಟಿ ನಡೆಸಿ ಬೇಸರ ಹಾಗು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Wrestler Divya Kakran on CM Kejriwal
Wrestler Divya Kakran on CM Kejriwal

By

Published : Aug 11, 2022, 6:20 PM IST

ನವದೆಹಲಿ: ಇಂಗ್ಲೆಂಡ್​​ನ ಬರ್ಮಿಂಗ್​ಹ್ಯಾಮ್​​ನಲ್ಲಿ ನಡೆದ ಕಾಮನ್​​ವೆಲ್ತ್​ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತ ಕುಸ್ತಿಪಟು ದಿವ್ಯಾ ಕಕ್ರನ್, ದೆಹಲಿ ಸರ್ಕಾರ ಹಾಗು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ವಿರುದ್ಧ ಕೆಲವು ಆಪಾದನೆಗಳನ್ನು ಮಾಡಿದ್ದಾರೆ.

2017ರಲ್ಲಿ ಏಷ್ಯಾ ಗೇಮ್ಸ್​​ನಲ್ಲಿ ನಾನು ದೆಹಲಿ ಪ್ರತಿನಿಧಿಸಿ ಪದಕ ಗೆದ್ದಿದ್ದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​​ ಅವರನ್ನು ಭೇಟಿಯಾಗಿದ್ದೆ. ಸಹಾಯಕ್ಕಾಗಿ ಲಿಖಿತ ರೂಪದಲ್ಲಿ ಪತ್ರ ನೀಡಿದರೆ ಸಹಾಯ ಮಾಡುವುದಾಗಿ ಅವರು ಭರವಸೆ ನೀಡಿದ್ದರು. ಹೀಗೆ ಪತ್ರ ನೀಡಿದ ಬಳಿಕ ಹಿಂತಿರುಗಿಯೂ ನೋಡಲಿಲ್ಲ. ಯಾವುದೇ ರೀತಿಯ ಧನ ಸಹಾಯವನ್ನೂ ಮಾಡಲಿಲ್ಲ ಎಂದು ಎಂದು ಬೇಸರ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, 2017ರ ಹೊತ್ತಿಗೆ ದೆಹಲಿಗೋಸ್ಕರ 58 ಪದಕಗಳನ್ನು ಗೆದ್ದಿದ್ದೇನೆ. ನಾನು ಅತ್ಯಂತ ಬಡ ಕುಟುಂಬದಿಂದ ಬಂದವಳು. ಕ್ರೀಡಾಕೂಟದ ಸಲುವಾಗಿ ದೂರ ಪ್ರಯಾಣಕ್ಕೆ ನನ್ನ ಬಳಿ ಹಣವೂ ಇರಲಿಲ್ಲ. ರೈಲಿನ ಶೌಚಾಲಯದ ಪಕ್ಕದಲ್ಲಿಯೇ ಕುಳಿತು ಪ್ರಯಾಣಿಸಿದ್ದಿದೆ.

ಇದರಿಂದ ನೊಂದು ಕೊನೆಗೆ, 2018ರಿಂದ ಉತ್ತರ ಪ್ರದೇಶಕ್ಕಾಗಿ ಸ್ಪರ್ಧಿಸಲು ಪ್ರಾರಂಭಿಸಿದೆ. 2019ರಲ್ಲಿ ಯುಪಿ ಸರ್ಕಾರ ನನಗೆ ರಾಣಿ ಲಕ್ಷ್ಮೀ ಬಾಯಿ ಪ್ರಶಸ್ತಿ ನೀಡಿತು. 2020ರಲ್ಲಿ ಜೀವಿತಾವಧಿ ಪಿಂಚಣಿಯನ್ನೂ ಕೊಟ್ಟರು. ನಿನ್ನೆಯಷ್ಟೇ 50 ಲಕ್ಷ ರೂಪಾಯಿ ಮತ್ತು ಗೆಜೆಟೆಡ್​​ ಅಧಿಕಾರಿ ಶ್ರೇಣಿಯ ಹುದ್ದೆ ಘೋಷಣೆ ಮಾಡಿದ್ದಾರೆ ಎಂದು ಖುಷಿ ಹಂಚಿಕೊಂಡರು.

ABOUT THE AUTHOR

...view details