ಕರ್ನಾಟಕ

karnataka

ETV Bharat / sports

World Table Tennis: ವಿಶ್ವ ಟೇಬಲ್ ಟೆನ್ನಿಸ್ ಮಹಿಳಾ ಡಬಲ್ಸ್​ ಪ್ರಶಸ್ತಿ ಗೆದ್ದ ಸುತೀರ್ಥ, ಐಹಿಕಾ ಮುಖರ್ಜಿ

ಟ್ಯುನಿಷಿಯಾದ ಸ್ಪೋರ್ಟ್ಸ್ ಹಾಲ್ ಆಫ್ ರೇಡ್ಸ್‌ನಲ್ಲಿ ನಡೆದ ವಿಶ್ವ ಟೇಬಲ್ ಟೆನ್ನಿಸ್ ಟ್ಯುನಿಸ್ 2023 ಮಹಿಳಾ ಡಬಲ್ಸ್ ಚಾಂಪಿಯನ್‌ಶಿಪ್ ಫೈನಲ್​ನಲ್ಲಿ​ ಭಾರತದ ಜೋಡಿ ಗೆಲುವು ಸಾಧಿಸಿದರು.

WTT Contender Tunis
ಸುತೀರ್ಥ, ಐಹಿಕಾ ಮುಖರ್ಜಿ

By

Published : Jun 26, 2023, 4:42 PM IST

ಟ್ಯುನಿಸ್ (ಟ್ಯುನಿಷಿಯಾ):ಭಾರತಕ್ಕೆ ವರ್ಷದ ಮೊದಲ ವಿಶ್ವ ಟೇಬಲ್ ಟೆನ್ನಿಸ್ (ಡಬ್ಲ್ಯೂಟಿಟಿ) ಚಾಂಪಿಯನ್‌ಶಿಪ್​ ಅನ್ನು ಸುತೀರ್ಥ ಮುಖರ್ಜಿ ಮತ್ತು ಐಹಿಕಾ ಮುಖರ್ಜಿ ಗೆದ್ದು ಕೊಟ್ಟಿದ್ದಾರೆ. ಟ್ಯುನಿಷಿಯಾದ ಸ್ಪೋರ್ಟ್ಸ್ ಹಾಲ್ ಆಫ್ ರೇಡ್ಸ್‌ನಲ್ಲಿ ಭಾನುವಾರ ಫೈನಲ್ ಪಂದ್ಯ ನಡೆಯಿತು. ಪ್ರಶಸ್ತಿ ಸುತ್ತಿನಲ್ಲಿ ಭಾರತದ ಪೆಡ್ಲರ್‌ಗಳಾದ ಸುತೀರ್ಥ ಮುಖರ್ಜಿ ಮತ್ತು ಅಹಿಕಾ ಮುಖರ್ಜಿ ಎದುರಾಳಿ ಜಪಾನ್ ತಂಡವನ್ನು 3-1 ಸೆಟ್‌ಗಳಲ್ಲಿ ಗೆಲುವು ದಾಖಲಿಸಿದರು.

ಭಾರತದ ಜೋಡಿ ಜಪಾನ್‌ನ ಮಿಯು ಕಿಹರಾ ಮತ್ತು ಮಿವಾ ಹರಿಮೊಟೊ ಅವರನ್ನು 11-5, 11-6, 5-11, 13-11 ಸೆಟ್‌ಗಳಿಂದ ಮಣಿಸಿ ಪ್ರತಿಷ್ಟಿತ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಶನಿವಾರ ನಡೆದ ಮಹಿಳಾ ಸಿಂಗಲ್ಸ್​ ಫೈನಲ್​ನಲ್ಲಿ ಮಿವಾ ಹರಿಮೊಟೊ ಚಾಂಪಿಯನ್‌ಶಿಪ್ ಗೆದ್ದಿದ್ದರು. ಆದರೆ ಡಬಲ್ಸ್‌ನಲ್ಲಿ ಭಾರತೀಯ ಆಟಗಾರ್ತಿಯರ ಮುಂದೆ ಅವರು ಮಂಡಿಯೂರಿದರು.

ಸುತೀರ್ಥ ಮುಖರ್ಜಿ ಮತ್ತು ಐಹಿಕಾ ಮುಖರ್ಜಿ ಸೆಮಿಫೈನಲ್‌ನಲ್ಲಿ ರಿಪಬ್ಲಿಕ್ ಆಫ್ ಕೊರಿಯಾದ ಗ್ಲೋಬಲ್​ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಪದಕ ಗೆದ್ದ ಶಿನ್ ಯುಬಿನ್ ಮತ್ತು ಜಿಯೋನ್ ಜಿ-ಹೀ ಅವರನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದರು. ಮೊದಲ ಸುತ್ತಿನಲ್ಲಿ ಭಾರತ ತಂಡ 2022ರ ವಿಶ್ವ ಚಾಂಪಿಯನ್‌ಶಿಪ್‌ನಿಂದ ಕಂಚು ವಿಜೇತರಾದ ಚೈನೀಸ್ ತೈಪೆಯ ಚೆನ್ ಸ್ಜು-ಯು ಮತ್ತು ಹುವಾಂಗ್ - ಹುವಾ ಅವರನ್ನು ಮತ್ತು ಯುಎಸ್‌ಎಯ ಆಮಿ ವಾಂಗ್ ಮತ್ತು ರಾಚೆಲ್ ಸಂಗ್ ಅವರನ್ನು ಸೋಲಿಸಿದ್ದರು.

ಭಾರತದ ಪುರುಷರ ಡಬಲ್ಸ್‌ ತಂಡದ ಮಾನವ್‌ ವಿಕಾಶ್‌ ಠಕ್ಕರ್‌ ಮತ್ತು ಮನುಷ್‌ ಉತ್ಪಲಭಾಯ್‌ ಷಾ ಜೋಡಿ ಕೊರಿಯಾದ ಚೊ ಡೇಸೊಂಗ್‌ ಮತ್ತು ಚೊ ಸೆಯುಂಗ್‌ಮಿನ್‌ ವಿರುದ್ಧ ನಾಲ್ಕರ ಘಟ್ಟದಲ್ಲಿ ಸೋಲು ಅನುಭವಿಸಿದರು. ಪುರುಷರ ಸಿಂಗಲ್ಸ್ ಚಾಂಪಿಯನ್ ಶರತ್ ಕಮಲ್ ಮತ್ತು ಸತ್ಯನ್ ಜ್ಞಾನಶೇಖರನ್ ಆರಂಭಿಕ ಸುತ್ತಿನಲ್ಲೇ ಹೊರಬಿದ್ದರು. ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಹರ್ಮೀತ್ ದೇಸಾಯಿ ಸೋಲು ಕಂಡರು. ವನಿತೆಯರ ಸಿಂಗಲ್ಸ್ ವಿಭಾಗದಲ್ಲಿ ಮಣಿಕಾ ಬಾತ್ರಾ ಮೊದಲ ಸುತ್ತಿನಲ್ಲೇ ಹೊರಬಿದ್ದರು.

ವಿಶ್ವ ಟೇಬಲ್ ಟೆನ್ನಿಸ್ ಟ್ಯುನಿಸ್ 2023- ಭಾರತದ ಫಲಿತಾಂಶ :

ಪುರುಷರ ಸಿಂಗಲ್ಸ್:

ಶರತ್ ಕಮಲ್ - ಮೊದಲ ಸುತ್ತಿನಲ್ಲಿ ಔಟ್

ಸತ್ಯನ್ ಜ್ಞಾನಶೇಖರನ್ - ಮೊದಲ ಸುತ್ತಿನಲ್ಲೇ ಔಟ್

ಹರ್ಮೀತ್ ದೇಸಾಯಿ - ಎರಡನೇ ಸುತ್ತಿನಲ್ಲಿ ಔಟ್

ಸನಿಲ್ ಶೆಟ್ಟಿ - ಅರ್ಹತಾ ಸುತ್ತಿನಲ್ಲಿ ಔಟ್

ಮನುಷ್ ಶಾ - ಅರ್ಹತಾ ಸುತ್ತಿನಲ್ಲಿ ಔಟ್

ಮಹಿಳೆಯರ ಸಿಂಗಲ್ಸ್ ಟಿಟಿ:

ಮನಿಕಾ ಬಾತ್ರಾ - ಮೊದಲ ಸುತ್ತಿನಲ್ಲೇ ಔಟ್

ದಿಯಾ ಪರಾಗ್ ಚಿತಾಲೆ - ಮೊದಲ ಸುತ್ತಿನಲ್ಲಿ ಔಟ್

ಶ್ರೀಜಾ ಅಕುಲಾ - ಮೊದಲ ಸುತ್ತಿನಲ್ಲೇ ಔಟ್

ಐಹಿಕಾ ಮುಖರ್ಜಿ - ಎರಡನೇ ಸುತ್ತಿನಲ್ಲಿ ಔಟ್

ರೀತ್ ಟೆನ್ನಿಸನ್ - ಅರ್ಹತಾ ಸುತ್ತಿನಲ್ಲಿ ಔಟ್

ಸುತೀರ್ಥ ಮುಖರ್ಜಿ - ಅರ್ಹತಾ ಸುತ್ತಿನಲ್ಲಿ ಔಟ್

ಪುರುಷರ ಡಬಲ್ಸ್:

ಹರ್ಮೀತ್ ದೇಸಾಯಿ/ಶರತ್ ಕಮಲ್ - ಮೊದಲ ಸುತ್ತಿನಲ್ಲೇ ಔಟ್

ಮಾನವ್ ವಿಕಾಶ್ ಠಕ್ಕರ್/ಮನುಷ್ ಶಾ - ಸೆಮಿಫೈನಲ್‌ನಲ್ಲಿ ಔಟ್

ಮಹಿಳೆಯ ಡಬಲ್ಸ್:

ಸುತೀರ್ಥ ಮುಖರ್ಜಿ/ಐಹಿಕಾ ಮುಖರ್ಜಿ - ವಿಜೇತರು

ದಿಯಾ ಪರಾಗ್ ಚಿತಾಲೆ/ಶ್ರೀಜಾ ಅಕುಲಾ - ಮೊದಲ ಸುತ್ತಿನಲ್ಲಿಯೇ ಔಟ್

ಮಿಶ್ರ ಡಬಲ್ಸ್:

ಸತ್ಯನ್ ಜ್ಞಾನಶೇಖರನ್/ಮಾನಿಕಾ ಬಾತ್ರಾ - ಸೆಮಿಫೈನಲ್‌ನಲ್ಲಿ ಔಟ್

ಮನುಷ್ ಉತ್ಪಲಭಾಯ್ ಶಾ/ಶ್ರೀಜಾ ಅಕುಲಾ - ಅರ್ಹತಾ ಸುತ್ತಿನಲ್ಲಿ ಔಟ್.

ಇದನ್ನೂ ಓದಿ:West Indies tour: ಟೀಂ ಇಂಡಿಯಾ ವೆಸ್ಟ್​ ಇಂಡೀಸ್​ ಪ್ರವಾಸ- ಟಿ20 ತಂಡದಲ್ಲಿ ರಿಂಕು ಸಿಂಗ್‌ಗೆ ಅವಕಾಶ ಸಾಧ್ಯತೆ

ABOUT THE AUTHOR

...view details