ಫಿನ್ಲ್ಯಾಂಡ್:ಸಾಧನೆ ಮಾಡಬೇಕು ಎಂಬ ಛಲ, ಉತ್ಸಾಹ ಇದ್ದರೆ ಯಾವುದೇ ವಯಸ್ಸಿನಲ್ಲಾದರೂ ಇತಿಹಾಸ ಸೃಷ್ಟಿ ಮಾಡಬಹುದು. ಅಂತಹ ಅನೇಕ ನಿದರ್ಶನಗಳು ಈಗಾಗಲೇ ನಮ್ಮ ಕಣ್ಮುಂದೆ ಇವೆ. ಅದಕ್ಕೆ ಮತ್ತೊಂದು ಉದಾಹರಣೆ ಎಂಬ ರೀತಿಯಲ್ಲಿ 94 ವರ್ಷದ ಭಗವಾನಿ ದೇವಿ ಫಿನ್ಲ್ಯಾಂಡ್ನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಫಿನ್ಲ್ಯಾಂಡ್ನ ಟಂಪೆರೆ ಎಂಬಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾಗಿಯಾಗಿದ್ದ ಹರಿಯಾಣದ ಖಿಡ್ಕಾ ಗ್ರಾಮದ ನಿವಾಸಿ ಭಗವಾನಿ ದೇವಿ(94ವರ್ಷ) 100 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದು, ಶಾಟ್ಪುಟ್ನಲ್ಲಿ ಕಂಚಿನ ಪದಕಕ್ಕೆ ಕೊರಳೊಡಿದ್ದಾರೆ.
ಭಗವಾನಿ ದೇವಿ ಅವರ ಮೊಮ್ಮಗ ವಿಕಾಸ್ ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೀಟ್ ಆಗಿದ್ದಾರೆ. ಆದರೆ, ಫಿನ್ಲ್ಯಾಂಡ್ನಲ್ಲಿ ನಡೆದ ಸ್ಪರ್ಧೆಯಲ್ಲಿ 94ರ ಭಗವಾನಿ ದೇವಿ ಈ ಸಾಧನೆ ಮಾಡಿದ್ದು, ಇದೀಗ ಭಾರತದ ಕೀರ್ತಿ ಮತ್ತಷ್ಟು ಉತ್ತುಂಗಕ್ಕೆ ಒಯ್ದಿದ್ದಾರೆ. ಕೇವಲ 24.74 ಸೆಕೆಂಡುಗಳಲ್ಲಿ 100 ಮೀಟರ್ ಗುರಿ ಮುಟ್ಟಿದ ಭಗವಾನಿ ಚಿನ್ನ ಗೆದ್ದಿದ್ದಾರೆ.
ಇದನ್ನೂ ಓದಿರಿ:SL vs AUS 2nd Test: 1992ರ ಬಳಿಕ ಮೊದಲ ಸಲ ಆಸ್ಟ್ರೇಲಿಯಾ ವಿರುದ್ಧ 500+ ರನ್ಗಳಿಸಿದ ಲಂಕಾ
ಇವರ ಸಾಧನೆಗೆ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪದಕಗಳೊಂದಿಗೆ ಇರುವ ಚಿತ್ರ ಪೋಸ್ಟ್ ಮಾಡಿ, ಶ್ಲಾಘನೆ ವ್ಯಕ್ತಪಡಿಸಿದೆ.