ಮೀರತ್ (ಉತ್ತರ ಪ್ರದೇಶ): ಸ್ಟಾರ್ ಜಾವೆಲಿನ್ ಥ್ರೋವರ್ ಮತ್ತು ಒಲಿಂಪಿಕ್ ಚಾಂಪಿಯನ್, ಇತ್ತಿಚೆಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಅವರ ಪ್ರತಿಮೆಯನ್ನು ಇಲ್ಲಿನ ಹಾಪುರ್ನ ಸರ್ಕಲ್ ಸ್ಥಾಪಿಸಲಾಗಿತ್ತು. ಮಂಗಳವಾರ ಬೆಳಗ್ಗೆ ಈ ಪ್ರತಿಮೆಯ ಕೈಯಲ್ಲಿದ್ದ ಜಾವೆಲಿನ್ ಬದಲಾಗಿತ್ತು. ಮೂರ್ತಿ ಸ್ಥಾಪಿಸಿದಾಗ ಫೈಬರ್ನಿಂದ ಮಾಡಿದ ಜಾವೆಲಿನ್ ಇಡಲಾಗಿತ್ತು. ಈಗ ಆ ಜಾಗದಲ್ಲಿ ಕಿಡಿಗೇಡಿಗಳು ಮರದ ಕೋಲನ್ನು ಇಟ್ಟಿದ್ದಾರೆ. ಈ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ ಈ ಬಗ್ಗೆ ಕೇಳಿದರೆ ಅದು ನಗರ ಸಭೆಗೆ ಸೇರಿದ ವಿಚಾರ ಎಂದು ವಿಷಯವನ್ನು ತಳ್ಳಿ ಹಾಕುತ್ತಿದ್ದಾರೆ.
ಸ್ಪೋರ್ಟ್ಸ್ ಸಿಟಿಯ ಪ್ರಚಾರಕ್ಕಾಗಿ ನೀರಜ್ ಚೋಪ್ರಾ ಅವರ ಪ್ರತಿಮೆಗಳನ್ನು ನಗರದ ಅನೇಕ ಭಾಗಗಳಲ್ಲಿ ಸ್ಥಾಪಿಸಲಾಗಿದೆ. ಹಾಪುರ್ದಲ್ಲಿ ರಸ್ತೆಯ ಸರ್ಕಲ್ ಒಂದರಲ್ಲಿ ವಿವಿಧ ಭಂಗಿಗಳಲ್ಲಿ ನೀರಜ್ ಅವರ ನಾಲ್ಕು ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ ಒಂದು ಪ್ರತಿಮೆಯ ಕೈಯಲ್ಲಿ ಫೈಬರ್ ಜಾವೆಲಿನ್ ಅನ್ನು ಹೊಂದಿತ್ತು. ಆದರೆ, ಇಂದು ಆ ಪ್ರತಿಮೆಯ ಕೈಯಲ್ಲಿ ಫೈಬರ್ ಜಾವೆಲಿನ್ ಬದಲಿಗೆ ಮರದ ಕೋಲು ಇಡಲಾಗಿತ್ತು. ಇದರಿಂದಾಗಿ ನಗರದಲ್ಲಿ ಜಾವೆಲಿನ್ ಕಳ್ಳತನದ ಬಗ್ಗೆ ಚರ್ಚೆ ಆರಂಭವಾಗಿದೆ. ಈ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದ ಸಾರ್ವಜನಿಕರು ಪೊಲೀಸರ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ಜಾವೆಲಿನ್ ಕಳ್ಳತಕ್ಕೆ ಪೊಲೀಸರ ಭದ್ರತಾ ವ್ಯವಸ್ಥೆಯ ಲೋಪವೇ ಕಾರಣ ಎಂದು ಜನ ಸಾಮಾನ್ಯರು ದೂರುತ್ತಿದ್ದಾರೆ.