ಎಕಟೆರಿನ್ಬರ್ಗ್ (ರಷ್ಯಾ): ಏಷ್ಯನ್ ಗೇಮ್ಸ್ನ ಚಿನ್ನದ ಪದಕ ವಿಜೇತ ಅಮಿತ್ ಪಂಗಲ್ ಅವರು 52 ಕೆ.ಜಿ. ವಿಭಾಗದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಪ್ರವೇಶ ಪಡೆದಿದ್ದಾರೆ.
ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್: ಫೈನಲ್‌ಗೆ ಲಗ್ಗೆ ಇಟ್ಟ ಮೊದಲ ಭಾರತೀಯ ಅಮಿತ್ - ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್
ರಷ್ಯಾದ ಎಕಟೆರಿನ್ಬರ್ಗ್ನಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅಮಿತ್ ಪಂಗಲ್ ಅವರು 52 ಕೆ.ಜಿ. ವಿಭಾಗದಲ್ಲಿ ಸಾಕೆನ್ ಬಿಬೊಸಿನೋವ್ ಅವರನ್ನು 3-2 ಗೋಲುಗಳಿಂದ ಸೋಲಿಸಿ ಫೈನಲ್‌ಗೆ ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸೆಮಿಫೈನಲ್ನಲ್ಲಿ ಸಾಕೆನ್ ಬಿಬೊಸಿನೋವ್ ಅವರನ್ನು 3-2 ಗೋಲುಗಳಿಂದ ಸೋಲಿಸಿ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬಾಕ್ಸರ್ ಅಮಿತ್ ಪಂಗಲ್ ಅವರು ಚಿನ್ನಕ್ಕಾಗಿ ನಾಳೆ ಉಜೇಕಿಸ್ತಾನ್‌ನದ ಶಖೋಬಿಡಿನ್ ಜೊಯಿರೊವ್ ಅವರೊಂದಿಗೆ ಸೆಣಸಾಡಲಿದ್ದಾರೆ ಎಂದು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ತಿಳಿಸಿದೆ.