ಹೈದರಾಬಾದ್: ಪ್ರತಿ ವರ್ಷ ಡಿಸೆಂಬರ್ 21 ರಂದು ವಿಶ್ವ ಬ್ಯಾಸ್ಕೆಟ್‌ಬಾಲ್ ದಿನವನ್ನು ಆಚರಿಸಲಾಗುತ್ತದೆ. ಕ್ರೀಡೆಯ ಅಭಿವೃದ್ಧಿ ಹಾಗೂ ಆಟವನ್ನ ಗೌರವಿಸುವ ಭಾಗವಾಗಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ವ್ಯಾಪಾರ, ಶಾಂತಿ ಮತ್ತು ರಾಜತಾಂತ್ರಿಕತೆಯ ಕ್ಷೇತ್ರಗಳಲ್ಲಿ ಬ್ಯಾಸ್ಕೆಟ್‌ಬಾಲ್ ತನ್ನದೇ ಆದ ಮಹತ್ವವನ್ನು ಹೊಂದಿದೆ. ಏಕೆಂದರೆ ಇದು ಸಹಯೋಗ, ದೈಹಿಕ ಚಟುವಟಿಕೆ ಮತ್ತು ಪರಸ್ಪರ ಅವಲಂಬನೆಯ ಆಧಾರದ ಮೇಲೆ ನಡೆಯುವ ಕ್ರೀಡೆಯಾಗಿದೆ. ಆಟಗಾರರು ಒಬ್ಬರನ್ನೊಬ್ಬರು ಮಾನವೀಯತೆಯಿಂದ ಹೇಗೆಲ್ಲ ನಡೆದುಕೊಳ್ಳಬಹುದು ಎಂಬುದನ್ನು ತೋರಿಸುತ್ತದೆ.
ಬ್ಯಾಸ್ಕೆಟ್‌ಬಾಲ್ ಇತರ ಕ್ರೀಡೆಗಳಂತೆ ಒಂದು ಸೌಹಾರ್ದಯುತ ಆಟವಾಗಿದೆ. ಗಡಿಗಳು, ಸಂಸ್ಕೃತಿ ಮತ್ತು ಭಾಷೆಗಳನ್ನು ಒಳಗೊಂಡ ಒಂದು ಭಾವನಾತ್ಮಕ ಕ್ರೀಡೆಯಾಗಿದೆ. ಇದು ಎಲ್ಲಾ ಹಿನ್ನೆಲೆಯ ವ್ಯಕ್ತಿಗಳು ಪರಸ್ಪರ ಸಂವಹನ ನಡೆಸಲು, ತೊಡಗಿಸಿಕೊಳ್ಳಲು, ಅಡೆತಡೆಗಳನ್ನು ತೆಗೆದುಹಾಕಲು ಮತ್ತು ಶಾಂತಿಯನ್ನು ಸಾರುವ ಅತ್ಯಂತ ಮಹತ್ವದ ಕ್ರೀಡೆಯಾಗಿದೆ.
ಕ್ರೀಡೆಯ ಇತಿಹಾಸ ಹೀಗಿದೆ:ಕೆನಡಾದ ದೈಹಿಕ ಶಿಕ್ಷಕರಾದ ಡಾ. ಜೇಮ್ಸ್ ನೈಸ್ಮಿತ್ ಅವರು ಡಿಸೆಂಬರ್ 21, 1891 ರಂದು ಅಮೆರಿಕದ ಮ್ಯಾಸಚೂಸೆಟ್ಸ್‌ನ ಸ್ಪ್ರಿಂಗ್‌ಫೀಲ್ಡ್‌ನಲ್ಲಿರುವ ಇಂಟರ್‌ನ್ಯಾಶನಲ್ ವೈಎಂಸಿಎ ಟ್ರೈನಿಂಗ್ ಸ್ಕೂಲ್‌ನಲ್ಲಿ ಈ ಬಾಸ್ಕೆಟ್‌ಬಾಲ್ ಆಟವನ್ನು ಶೋಧಿಸಿದರು. ಚಳಿಗಾಲದ ಉದ್ದಕ್ಕೂ ತನ್ನ ವಿದ್ಯಾರ್ಥಿಗಳನ್ನು ಸಕ್ರಿಯವಾಗಿಡಲು ಅವರು ಈ ಆಟವನ್ನು ಅಭಿವೃದ್ಧಿ ಪಡಿಸಿದರು.
• ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈ ಸಂಬಂಧ ನಿರ್ಣಯ ಅಂಗೀಕರಿಸುವ ಮೂಲಕ ಆಗಸ್ಟ್ 25, 2023 ಅನ್ನು ವಿಶ್ವ ಬಾಸ್ಕೆಟ್‌ಬಾಲ್ ದಿನವೆಂದು ಘೋಷಿಸಲಾಯಿತು.
• ಇಂಟರ್ನ್ಯಾಷನಲ್ ಬಾಸ್ಕೆಟ್‌ಬಾಲ್ ಫೆಡರೇಶನ್, ಬಾಸ್ಕೆಟ್‌ಬಾಲ್ ವಿಶ್ವಕಪ್ 2023ರನ್ನು ಆಯೋಜಿಸಿತ್ತು. ವಿಶ್ವಾದ್ಯಂತ ಶಾಂತಿ ಮತ್ತು ಸಮೃದ್ಧಿಗಾಗಿ ಈ ಕ್ರೀಡಾದಿನವನ್ನು ಆಚರಿಸಲಾಗುತ್ತದೆ. ಇಂಡೋನೇಷ್ಯಾ, ಜಪಾನ್ ಮತ್ತು ಫಿಲಿಪೈನ್ಸ್ ಬಾಸ್ಕೆಟ್ ಬಾಲ್ ವಿಶ್ವಕಪ್ ಆಯೋಜಿಸುವ ಮೂಲಕ ಬಾಸ್ಕೆಟ್ಬಾಲ್ಗೆ ಹೆಚ್ಚಿನ ಮನ್ನಣೆ ನೀಡಿವೆ.
• ಈ ದಿನವು ಪರಸ್ಪರ ಸಹಕಾರ, ತಂಡದ ಕೆಲಸ ಮತ್ತು ಸಂವಹನವನ್ನು ಉತ್ತೇಜಿಸುತ್ತದೆ ಮತ್ತು ಈ ಗುಣಲಕ್ಷಣಗಳು ಹೇಗೆ ಸಾಮರಸ್ಯ ಮತ್ತು ತಿಳಿವಳಿಕೆ ಉತ್ತೇಜಿಸುತ್ತದೆ ಎಂಬುದನ್ನು ಎತ್ತಿ ತೋರಿಸುತ್ತದೆ.