ನೈರೋಬಿ :ಭಾರತದ ಅಥ್ಲೀಟ್ ಅಮಿತ್ ಖತ್ರಿ ನೈರೋಬಿಯಲ್ಲಿ ನಡೆಯುತ್ತಿರುವ ವಿಶ್ವ ಅಂಡರ್-20 ಚಾಂಪಿಯನ್‌ಶಿಪ್‌ನಲ್ಲಿ ಪುರುಷರ 10,000 ಮೀಟರ್ ನಡಿಗೆ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ಇತಿಹಾಸ ಸೃಷ್ಠಿಸಿದ್ದಾರೆ.
ಅವರು ಈ ಸ್ಪರ್ಧೆಯಲ್ಲಿ 42 ನಿಮಿಷ 17.94 ಸೆಕೆಂಡುಗಳಲ್ಲಿ ಗುರಿ ಮುಟ್ಟುವ ಮೂಲಕ ಭಾರತಕ್ಕೆ ಈ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿಗೆ ಪದಕ ತಂದು ಕೊಟ್ಟಿದ್ದಾರೆ. ಕೀನ್ಯಾದ ಹೆರಿಸ್ಟೋನ್ ವನ್ಯೋನಿ 42 ನಿಮಿಷ 10.84 ಸೆಕೆಂಡ್ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಪಡೆದರು. ಸ್ಪೇನಿನ ಪಾಲ್ ಮೆಗ್ರಾತ್ 42: 26.11 ಸಮಯದೊಂದಿಗೆ ಕಂಚಿನ ಪದಕ ತಮ್ಮದಾಗಿಸಿಕೊಂಡರು.
ವಿಶ್ವಚಾಂಪಿಯನ್ಶಿಪ್ನಲ್ಲಿ ಈ ಬಾರಿ ಟ್ರ್ಯಾಕ್ ಈವೆಂಟ್ನಲ್ಲಿ ಭಾರತಕ್ಕೆ ಸಂದ 2ನೇ ಪದಕವಾಗಿದೆ. ಬುಧವಾರ 4x400 ಮಿಶ್ರ ರಿಲೇ ತಂಡ ಕಂಚಿನ ಪದಕ ಪಡೆದಿತ್ತು. ಈ ತಂಡದಲ್ಲಿದ್ದ ಭರತ್ ಶ್ರೀಧರ್, ಪ್ರಿಯಾ ಮೋಹನ್, ಸಮ್ಮಿ ಹಾಗೂ ಕಪಿಲ್ 3: 20.60 ಸೆಕೆಂಡುಗಳಲ್ಲಿ ಕ್ರಮಿಸಿ ಫೈನಲ್‌ನಲ್ಲಿ 3ನೇ ಸ್ಥಾನ ಪಡೆದಿದ್ದರು.
ಶುಕ್ರವಾರ ನಡೆದ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಶಾಲಿನಿ ಸಿಂಗ್ 6 : 40 ಮೀಟರ್ ಜಿಗಿಯುವ ಮೂಲಕ ಫೈನಲ್ಗೆ ನೇರ ಅರ್ಹತೆ ಸಂಪಾದಿಸಿಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ನೇರ ಅರ್ಹತೆಗೆ 6.35 ಮೀಟರ್ ನಿಗದಿಪಡಿಸಲಾಗಿತ್ತು. ಇದರಲ್ಲಿ ಶಾಲಿನಿ ಸೇರಿದಂತೆ ಕೇವಲ 3 ಮಾತ್ರ ನೇರ ಅರ್ಹತೆ ಪಡೆಯುವಲ್ಲಿ ಸಫಲರಾದರು.
ಇದನ್ನು ಓದಿ:ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 15 ಪದಕ ಗೆಲ್ಲುವ ನಿರೀಕ್ಷೆಯಲ್ಲಿ ಭಾರತ ತಂಡ