ರೋಕ್ಲಾ(ಪೋಲೆಂಡ್) :ರೋಕ್ಲಾದಲ್ಲಿ ನಡೆಯುತ್ತಿರುವ ವಿಶ್ವ ಆರ್ಚರಿ ಕಿರಿಯರ ಚಾಂಪಿಯನ್ಶಿಪ್ನಲ್ಲಿ ಶನಿವಾರ ಭಾರತದ ಕಾಂಪೌಂಡ್ ಕೆಡೆಟ್ ಮಿಕ್ಸಡ್ ತಂಡ ಮತ್ತು ಪುರುಷರ ತಂಡ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಭಾರತ ತಂಡದ ಫೈನಲ್ನಲ್ಲಿ ಅಮೆರಿಕಾದ ಕಾಂಪೌಂಡ್ ಕೆಡೆಟ್ ಮಿಕ್ಸಡ್ ತಂಡವನ್ನು 155-152ರ ಅಂತರದಲ್ಲಿ ಮಣಿಸಿ ಚಿನ್ನದ ಪದಕ ಪಡೆಯಿತು. ಪ್ರಿಯಾ ಗುರ್ಜಾರ್ ಮತ್ತು ಕುಶಾಲ್ ದಲಾಲ್ ಈ ವಿಭಾಗದಲ್ಲಿ ಸ್ಪರ್ಧಿಸಿದ್ದರು.
ಸಾಹಿಲ್ ಚೌಧರಿ, ಮಿಹಿರ್ ನಿತಿನ್ ಅಪಾರ್ ಮತ್ತು ಕುಶಾಲ್ ದಲಾಲ್ ಒಳಗೊಂಡ ಭಾರತ ಪುರುಷರ ಕಾಂಪೌಂಡ್ ಕೆಡೆಟ್ ತಂಡ ಫೈನಲ್ನಲ್ಲಿ ಅಮೆರಿಕಾ ತಂಡವನ್ನು 233-231ರಲ್ಲಿ ಮಣಿಸಿ ಚಿನ್ನದ ಪದಕ ಪಡೆಯಿತು.
ಇನ್ನು, ವೈಯಕ್ತಿಕ ಕಾಂಪೌಂಡ್ ವಿಭಾಗದಲ್ಲಿ ಪ್ರಿಯಾ ತಮ್ಮ 3ನೇ ಚಿನ್ನದ ಪದಕವನ್ನು ಮಿಸ್ ಮಾಡಿಕೊಂಡರು. ಅವರು ಫೈನಲ್ನಲ್ಲಿ ಮೆಕ್ಸಿಕೋದ ಆರ್ಚರ್ ವಿರುದ್ಧ 136-139ರ ಅಂತರದಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಪರ್ನೀತ್ ಕೌರ್ ಇದೇ ವಿಭಾಗದಲ್ಲಿ ಬ್ರಿಟನ್ ಆರ್ಚರ್ರನ್ನು 140-135ರಲ್ಲಿ ಮಣಿಸಿ ಕಂಚಿನ ಪದಕ ಪಡೆದರು. ಇದಕ್ಕೂ ಮಹಿಳಾ ಕಾಂಪೌಂಡ್ ಕೆಡೆಟ್ ತಂಡ ಟರ್ಕಿಯನ್ನು 228-216ರಲ್ಲಿ ಮಣಿಸಿ ಚಿನ್ನದ ಪದಕ ಪಡೆದಿತ್ತು. ಪರ್ನೀತ್ ಕೌರ್, ಪ್ರಿಯಾ ಗುರ್ಜಾರ್ ಮತ್ತು ರಿಧಿ ವರ್ಷಿನಿ ಭಾರತ ತಂಡ ಪ್ರತಿನಿಧಿಸಿದ್ದರು.