ಬರ್ಲಿನ್ (ಜರ್ಮನಿ): ವಿಶ್ವ ಆರ್ಚರಿ ಚಾಂಪಿಯನ್ಶಿಪ್ನಲ್ಲಿ ಭಾರತದ ಜ್ಯೋತಿ ಸುರೇಖಾ ವೆನ್ನಮ್, ಪರ್ನೀತ್ ಕೌರ್ ಮತ್ತು ಅದಿತಿ ಗೋಪಿಚಂದ್ ಸ್ವಾಮಿ ಅವರಿದ್ದ ತಂಡ ದೇಶಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. ಶುಕ್ರವಾರ ಬರ್ಲಿನ್ನಲ್ಲಿ ನಡೆದ ಚಾಂಪಿಯನ್ಶಿಪ್ನಲ್ಲಿ ಈ ಮಹಿಳಾ ಭಾರತೀಯ ಜೋಡಿ ಸ್ಮರಣೀಯ ಪದಕ ಸಾಧನೆ ಮಾಡಿತು.
ಫೈನಲ್ಸ್ ಸ್ಪರ್ಧೆಯಲ್ಲಿ ಭಾರತದ ವನಿತೆಯರು 235 ಅಂಕ ಕಲೆಹಾಕಿದ್ದರಿಂದ ಮೆಕ್ಸಿಕನ್ನ ತಂಡ ಸೋಲುಂಡಿತು. ಎದುರಾಳಿ ಆಟಗಾರ್ತಿಯರಾದ ಡಾಫ್ನೆ ಕ್ವಿಂಟೆರೊ, ಅನಾ ಸೋಫಾ ಹೆರ್ನಾಂಡೆಜ್ ಜಿಯೋನ್ ಮತ್ತು ಆಂಡ್ರಿಯಾ ಬೆಸೆರಾ ಅವರು ಫೈನಲ್ನಲ್ಲಿ 229 ಅಂಕ ಗಳಿಸಲಷ್ಟೇ ಶಕ್ತರಾದರು. ಇದರಿಂದ ಭಾರತ 6 ಅಂಕಗಳ ಅಂತರದ ಗೆಲುವು ದಾಖಲಿಸಿತು.