ಯಾಂಕ್ಟನ್: ಅಮೆರಿಕದ ಯಾಂಕ್ಟನ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಚರಿ ಚಾಂಪಿಯನ್ಶಿಪ್ನಲ್ಲಿ ಭಾರತೀಯ ಮಹಿಳಾ ಹಾಗೂ ಮಿಶ್ರ ಜೋಡಿ ಕಾಂಪೌಂಡ್ ಆರ್ಚರಿ ತಂಡಗಳು ಎರಡೂ ಸ್ಪರ್ಧೆಗಳಲ್ಲಿ ಕೊಲಂಬಿಯಾ ವಿರುದ್ಧ ಸೋಲುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿವೆ.
ವಿಶ್ವ ಆರ್ಚರಿ ಚಾಂಪಿಯನ್ಶಿಪ್: ಎರಡೂ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕದ ಗರಿ
ಆರಂಭದಲ್ಲಿ ಭಾರತೀಯ ಮಿಶ್ರ ಜೋಡಿ ಅಭಿಷೇಕ್ ವರ್ಮಾ ಹಾಗೂ ಜ್ಯೋತಿ ಸುರೇಖಾ ವೆನ್ನಮ್ 39 - 38 ಪಾಯಿಂಟ್ಗಳಿಂದ ಮುನ್ನಡೆ ಸಾಧಿಸಿದ್ದರು. ಆದರೆ, ಅಂತಿಮವಾಗಿ ಭಾರತೀಯರು ನಾಲ್ಕು ಪಾಯಿಂಟ್ಗಳ ಅಂತರದಿಂದ (150-154) ಶರಣಾದರು.
ವಿಶ್ವ ಆರ್ಚರಿ ಚಾಂಪಿಯನ್ಶಿಪ್
ಆರಂಭದಲ್ಲಿ ಭಾರತೀಯ ಮಿಶ್ರ ಜೋಡಿ ಅಭಿಷೇಕ್ ವರ್ಮಾ ಹಾಗೂ ಜ್ಯೋತಿ ಸುರೇಖಾ ವೆನ್ನಮ್ 39 - 38 ಪಾಯಿಂಟ್ಗಳಿಂದ ಮುನ್ನಡೆ ಸಾಧಿಸಿದ್ದರು. ಆದರೆ ಅಂತಿಮವಾಗಿ ಭಾರತೀಯರು ನಾಲ್ಕು ಪಾಯಿಂಟ್ಗಳ ಅಂತರದಿಂದ ಎದುರಾಳಿಗಳಿಗೆ (150-154) ಶರಣಾದರು.
ಮತ್ತೊಂದೆಡೆ, ಜ್ಯೋತಿ, ಮುಸ್ಕಾನ್ ಕಿರಾರ್ ಹಾಗೂ ಪ್ರಿಯಾ ಗುರ್ಜರ್ ಅವರನ್ನೊಳಗೊಂಡ ಏಳನೇ ಶ್ರೇಯಾಂಕದ ಮಹಿಳಾ ತಂಡ, ಸಾರಾ ಲೋಪೆಝ್, ಅಲೆಜಾಂಡ್ರಾ ಉಸ್ಕಿಯಾನೊ ಹಾಗೂ ನೋರಾ ವಾಲ್ಡೆಝ್ ಅವರ ವಿರುದ್ಧ ಐದು ಅಂಕಗಳ ಅಂತರದಿಂದ (224-229) ಸೋಲು ಕಂಡಿತು.