ನೆದರ್ಲ್ಯಾಂಡ್: ಮಹಿಳಾ ಹಾಕಿ ವಿಶ್ವಕಪ್ನಲ್ಲಿ ಭಾರತೀಯ ಹಾಕಿ ತಂಡ ಕೆನಡಾ ವಿರುದ್ದ 3-2 ಗೋಲುಗಳಿಂದ ಜಯಗಳಿಸುವ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಚೊಚ್ಚಲ ಗೆಲುವಿನ ಸಿಹಿ ಅನುಭವಿಸಿತು. ತಂಡದ ನಾಯಕಿ ಹಾಗೂ ಗೋಲ್ ಕೀಪರ್ ಸವಿತಾ ಅವರ ಅದ್ಭುತ ಗೋಲ್ಕೀಪಿಂಗ್ನಿಂದಾಗಿ ಕೆನಡಾ ಶೂಟೌಟ್ಗಳನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲವಾಯಿತು.
ಮಹಿಳಾ ಹಾಕಿ ವಿಶ್ವಕಪ್: ಕೆನಡಾ ವಿರುದ್ಧ ಟೂರ್ನಿಯ ಮೊದಲ ಜಯ ದಾಖಲಿಸಿದ ಭಾರತ
ಮಹಿಳಾ ಹಾಕಿ ವಿಶ್ವಕಪ್ನಲ್ಲಿ ಭಾರತ ಹಾಕಿ ತಂಡ ಕೆನಡಾ ವಿರುದ್ದ ಜಯಗಳಿಸುವ ಮೂಲಕ ಟೂರ್ನಿಯಲ್ಲಿ ಮೊದಲ ಗೆಲುವು ಕಂಡಿದೆ.
ಮಹಿಳಾ ಹಾಕಿ ವಿಶ್ವಕಪ್ನಲ್ಲಿ ಭಾರತಕ್ಕೆ ಮೊದಲ ಜಯ
ಮೊದಲಾರ್ಧದ ಸಮಯದಲ್ಲಿ 1-1 ಗೋಲ್ನೊಂದಿಗೆ ಎರಡು ತಂಡಗಳು ಸಮಬಲ ಸಾಧಿಸಿದ್ದವು. ನಂತರ ಶೂಟೌಟ್ನಲ್ಲಿ ಭಾರತ 2 ಗೋಲ್ಗಳನ್ನು ಸಾಧಿಸುವ ಮುಖೇನ ಗೆಲುವು ಖಾತ್ರಿಪಡಿಸಿಕೊಂಡಿತು. ಈಗಾಗಲೇ ವಿಶ್ವಕಪ್ನಿಂದ ಹೊರಬಿದ್ದಿರುವ ಭಾರತ ಜುಲೈ 13ಕ್ಕೆ ಕೊನೆಯ ಪಂದ್ಯವನ್ನು ಜಪಾನ್ ವಿರುದ್ಧ ಆಡಲಿದೆ.
ಇದನ್ನೂ ಓದಿ:India vs England ODI: ಮೊದಲ ಏಕದಿನ ಪಂದ್ಯದಿಂದ ವಿರಾಟ್ ಕೊಹ್ಲಿ ಔಟ್?
Last Updated : Jul 13, 2022, 6:13 AM IST