ಲಂಡನ್:ರಷ್ಯಾ ದಾಳಿಯಿಂದ ನಲುಗಿರುವ ಉಕ್ರೇನ್ನ ಕೋಟ್ಯಂತರ ಜನರು ದೇಶ ತೊರೆದು ಹಲವು ರಾಷ್ಟ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಬ್ರಿಟನ್ ಸೇರಿದಂತೆ ವಿವಿಧೆಡೆ ಆಶ್ರಯ ಪಡೆದ ಉಕ್ರೇನ್ ನಿರಾಶ್ರಿತರಿಗೆ ವಿಂಬಲ್ಡನ್ ಟೆನಿಸ್ ಪಂದ್ಯಗಳಿಗೆ ಉಚಿತ ಟಿಕೆಟ್ ಮತ್ತು 250,000 ಪೌಂಡ್ ಹಣವನ್ನು ದೇಣಿಗೆಯಾಗಿ ನೀಡುವುದಾಗಿ ಇಂಗ್ಲೆಂಡ್ ಲಾನ್ ಟೆನಿಸ್ ಕ್ಲಬ್ ಪ್ರಕಟಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಇಂಗ್ಲೆಂಡ್ ಲಾನ್ ಟೆನಿಸ್ ಕ್ಲಬ್ ಅಧ್ಯಕ್ಷ ಇಯಾನ್ ಹೆವಿಟ್, ರಷ್ಯಾದ ದಾಳಿಯಿಂದಾಗಿ ದೇಶ ತೊರೆದು ಬರುತ್ತಿರುವ ಉಕ್ರೇನ್ ಜನರನ್ನು ಇಂಗ್ಲೆಂಡಿಗರು ಸ್ವಾಗತಿಸುತ್ತಿರುವ ಅಗಾಧ ಪ್ರತಿಕ್ರಿಯೆಯನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಉಕ್ರೇನ್ ನಿರಾಶ್ರಿತ ಸಮುದಾಯಗಳ ಜೊತೆಗೆ ನಾವಿದ್ದೇವೆ ಎಂದು ಅಭಯ ನೀಡಿದರು.