ಲಂಡನ್: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ವೃತ್ತಿ ಜೀವನದ ಕೊನೆಯ ಟೆನಿಸ್ ಟೂರ್ನಿಯ ಅಂತಿಮ ಪಂದ್ಯದಲ್ಲಿ ನಿರಾಶೆ ಅನುಭವಿಸಿದರು. ವಿಂಬಲ್ಡನ್ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಶ್ರ ಡಬಲ್ಸ್ನಲ್ಲಿ ಸೆಮಿಫೈನಲ್ ತಲುಪಿದ್ದ ಆಟಗಾರ್ತಿ ಸೋಲುವ ಮೂಲಕ ಪ್ರಶಸ್ತಿ ರೇಸ್ನಿಂದ ಹೊರಬಿದ್ದರು. ಕ್ರೊಯೇಷಿಯಾದ ಮೇಟ್ ಪಾವಿಕ್ ಜೊತೆಗೂಡಿ ಆಡಿದ ಸಾನಿಯಾ, ಸೆಮಿಫೈನಲ್ನಲ್ಲಿ ಎಡವಿ ವಿಂಬಲ್ಡನ್ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಗೆಲ್ಲುವ ಕನಸು ಕೈಬಿಟ್ಟರು.
ಸಾನಿಯಾ ಮತ್ತು ಪಾವಿಕ್ ಕಠಿಣ ಹೋರಾಟದ ನಡುವೆಯೂ ಹಾಲಿ ಚಾಂಪಿಯನ್ ನೀಲ್ ಸ್ಕುಪ್ಸ್ಕಿ ಮತ್ತು ದೇಸಿರೆ ಕ್ರೌಜಿಕ್ ವಿರುದ್ಧ 6-4, 5-7, 4-6 ಸೆಟ್ಗಳ ಅಂತರದ ಪರಾಜಯ ಹೊಂದಿದರು. ಫೈನಲ್ಗೇರುವ ಭರವಸೆಯೊಂದಿಗೆ ಆಟ ಆರಂಭಿಸಿದ ಸಾನಿಯಾ-ಮೇವಿಟ್ ಜೋಡಿ ಮೊದಲ ಸೆಟ್ ಅನ್ನು 6-4ರಲ್ಲಿ ಗೆದ್ದು ಮುನ್ನಡೆ ಪಡೆಯಿತು. ಬಳಿಕ ತಿರುಗೇಟು ನೀಡಿದ ನೀಲ್ ಸ್ಕುಪ್ಸ್ಕಿ- ದೇಸಿರೆ ಕ್ರೌಜಿಕ್ 2ನೇ ಸೆಟ್ ಅನ್ನು 7-5 ರಲ್ಲಿ ಜಯಿಸಿತು.