ಕರ್ನಾಟಕ

karnataka

ETV Bharat / sports

ವಿಂಬಲ್ಡನ್: ನೆದರ್ಲೆಂಡ್ ಸವಾಲು ಮೆಟ್ಟಿನಿಂತು ಸೆಮಿಫೈನಲ್‌​ ಪ್ರವೇಶಿಸಿದ ಬೋಪಣ್ಣ ಜೋಡಿ - ವಿಂಬಲ್ಡನ್ ಫೈನಲ್​ ಪ್ರವೇಶಿದ ಬೋಪಣ್ಣ

ವಿಂಬಲ್ಡನ್ ಪುರುಷರ ಡಬಲ್ಸ್​ ವಿಭಾಗದಲ್ಲಿ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಸೆಮಿಫೈನಲ್ ಪ್ರವೇಶಿಸಿದೆ.

ವಿಂಬಲ್ಡನ್ ಗ್ರ್ಯಾನ್ಡ್​ ಸ್ಲಾಮ್2023
ವಿಂಬಲ್ಡನ್ ಗ್ರ್ಯಾನ್ಡ್​ ಸ್ಲಾಮ್2023

By

Published : Jul 13, 2023, 10:06 AM IST

ಲಂಡನ್​:ಇಲ್ಲಿ ನಡೆಯುತ್ತಿರುವ ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್‌​ ಸ್ಲಾಮ್ 2023ರ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ನೆದರ್ಲೆಂಡ್ಸ್​​ ಜೋಡಿಯನ್ನು ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು. ಬುಧವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಬೋಪಣ್ಣ ಜೋಡಿ, ಟ್ಯಾಲನ್ ಗ್ರಿಕ್ಸ್‌ಪುರ್ ಮತ್ತು ಬಾರ್ಟ್ ಸ್ಟೀವನ್ಸ್ ತಂಡವನ್ನು 6-7, 7-5, 6-2 ಸೆಟ್‌​ಗಳಿಂದ ಪರಾಭವಗೊಳಿಸಿದರು. 43 ವಯಸ್ಸಿನ ಬೋಪಣ್ಣ 2015ರ ವಿಂಬಲ್ಡನ್‌ನಲ್ಲಿ ಕೊನೆಯ ನಾಲ್ಕರ ಘಟ್ಟ ತಲುಪಿದ್ದರು.

ಮುಂದಿನ ಸವಾಲು: 2010ರಲ್ಲಿ ಯುಎಸ್ ಓಪನ್ ರನ್ನರ್ ಅಪ್ ಆಗಿದ್ದ ಬೋಪಣ್ಣ ಪುರುಷರ ಡಬಲ್ಸ್‌ನಲ್ಲಿ ನಾಲ್ಕು ಬಾರಿ ಗ್ರ್ಯಾಂಡ್ ಸ್ಲಾಮ್ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಆರನೇ ಶ್ರೇಯಾಂಕಿತ ಇಂಡೋ-ಆಸ್ಟ್ರೇಲಿಯನ್ ಜೋಡಿ ಇದೀಗ ಫೈನಲ್ ತಲುಪಲು ಅಗ್ರ ಶ್ರೇಯಾಂಕದ ನೆದರ್ಲೆಂಡ್ಸ್ ಮತ್ತು ಬ್ರಿಟನ್ ಜೋಡಿ ವೆಸ್ಲಿ ಕೂಲ್ಹೋಫ್ ಮತ್ತು ನೀಲ್ ಸ್ಕುಪ್ಸ್ಕಿ ಅವರ ಸವಾಲು ಜಯಿಸಬೇಕಿದೆ.

ಒಂದು ಗಂಟೆ 54 ನಿಮಿಷಗಳ ಕಾಲ ನಡೆದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಬೋಪಣ್ಣ ಟೀಂ ಮೊದಲ ಸೆಟ್ ಹಿನ್ನಡೆ ಸಾಧಿಸಿತು. ಆ ಬಳಿಕ ಅದ್ಭುತ ಕಮ್​ಬ್ಯಾಕ್​ ಮಾಡಿದರು. ಮೊದಲ ಸೆಟ್ ಅನ್ನು ಟೈ-ಬ್ರೇಕ್‌ನಲ್ಲಿ ಕಳೆದುಕೊಂಡು ಎರಡನೇ ಸೆಟ್ ಅನ್ನು ಟೈ-ಬ್ರೇಕ್‌ನಲ್ಲಿ ಗೆದ್ದುಕೊಂಡರು. ಎರಡನೇ ಸೆಟ್ ಗೆದ್ದು ಆತ್ಮವಿಶ್ವಾಸದಲ್ಲಿದ್ದ ಇಂಡೋ-ಆಸ್ಟ್ರೇಲಿಯಾ ಜೋಡಿ ಮುಂದೆ ಎದುರಾಳಿಗೆ ಯಾವುದೇ ಅವಕಾಶ ನೀಡದೆ ಮೇಲುಗೈ ಸಾಧಿಸಿತು.

ಇದಕ್ಕೂ ಮುನ್ನ ಮಂಗಳವಾರ ಬೋಪಣ್ಣ- ಮ್ಯಾಥ್ಯೂ ಎಬ್ಡೆನ್ ಜೋಡಿ ರೀಸ್ ಸ್ಟಾಲ್ಡರ್ ಮತ್ತು ಡೇವಿಡ್ ಪೆಲ್ ಜೋಡಿಯನ್ನು ಸೋಲಿಸುವ ಮೂಲಕ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದರು. ಎರಡು ಗಂಟೆ 19 ನಿಮಿಷಗಳ ಕಾಲದ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಬೋಪಣ್ಣ-ಎಬ್ಡೆನ್ ಅಮೆರಿಕದ ಸ್ಟಾಲ್ಡರ್ ಮತ್ತು ನೆದರ್ಲೆಂಡ್ಸ್ ತಂಡವನ್ನು 7-5, 4-6, 7-6 (10-5) ಸೆಟ್‌ಗಳಿಂದ ಸೋಲಿಸಿದ್ದರು.

ಮಹಿಳೆಯರ ಸಿಂಗಲ್ಸ್‌- ಸೆಮೀಸ್‌ಗೇರಿದ ಸಬಲೆಂಕಾ : ಮತ್ತೊಂದೆಡೆ, ಮಹಿಳೆಯರ ಸಿಂಗಲ್ಸ್​ ವಿಭಾಗದಲ್ಲಿ ಅರೀನಾ ಸಬಲೆಂಕಾ ಬುಧವಾರ ಮ್ಯಾಡಿಸನ್ ಕೀಸ್ ವಿರುದ್ಧ ನೇರ ಸೆಟ್‌ಗಳ ಜಯದೊಂದಿಗೆ ತನ್ನ ಎರಡನೇ ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಬೆಲಾರಸ್‌ನ ಎರಡನೇ ಶ್ರೇಯಾಂಕದ ಸಬಲೆಂಕಾ ಸೆಮಿಫೈನಲ್‌ನಲ್ಲಿ ಓನ್ಸ್ ಜೆಬುರೆ ಅವರನ್ನು ಎದುರಿಸುವರು.

ಪುರುಷರ ಸಿಂಗಲ್ಸ್‌- ಕಾರ್ಲೋಸ್ ಅಲ್ಕರಾಜ್ ದಾಖಲೆ:ಪುರುಷರ ಸಿಂಗಲ್ಸ್​ ವಿಭಾಗದಲ್ಲಿ20 ವರ್ಷದ ಸ್ಪೇನಿನ ಕಾರ್ಲೋಸ್ ಅಲ್ಕರಾಜ್ ಕ್ವಾರ್ಟರ್ ಫೈನಲ್‌ನಲ್ಲಿ ಡೆನ್ಮಾರ್ಕ್‌ನ ಹೋಲ್ಗರ್ ರೂನ್ ಅವರನ್ನು 7-6, 6-4, 6-4 ಸೆಟ್‌ಗಳಿಂದ ಸೋಲಿಸುವ ಮೂಲಕ ವಿಂಬಲ್ಡನ್‌ನಲ್ಲಿ ಸೆಮಿಫೈನಲ್ ತಲುಪಿದ ಅತ್ಯಂತ ಕಿರಿಯ ಪುರುಷ ಆಟಗಾರರಾಗಿದ್ದಾರೆ. ಸೆಮಿಫೈನಲ್‌ನಲ್ಲಿ ಡೇನಿಯಲ್ ಮೆಡ್ವೆಡೆವ್ ಅವರನ್ನು ಎದುರಿಸಲಿದ್ದಾರೆ.

ಇದನ್ನೂ ಓದಿ:ಭಾರತ vs ವೆಸ್ಟ್​ ಇಂಡೀಸ್​ ಮೊದಲ ಟೆಸ್ಟ್‌: ಅಶ್ವಿನ್‌ 'ಫೈವ್‌ಸ್ಟಾರ್‌', ನಲುಗಿದ ವಿಂಡೀಸ್‌

ABOUT THE AUTHOR

...view details