ಕರ್ನಾಟಕ

karnataka

ETV Bharat / sports

ಉಕ್ರೇನ್ ಮೇಲೆ ದಾಳಿ ಎಫೆಕ್ಟ್‌: ರಷ್ಯಾ-ಬೆಲಾರಸ್​ ಟೆನಿಸ್​ ಪ್ಲೇಯರ್​ಗಳಿಗೆ ವಿಂಬಲ್ಡನ್​ನಿಂದ ನಿಷೇಧ

ವಿಂಬಲ್ಡನ್​ ಪ್ರಸ್ತುತ ಉಕ್ರೇನ್​ನಲ್ಲಿ ಯುದ್ಧ ಆರಂಭವಾದ ಮೇಲೆ ರಷ್ಯಾ ಮತ್ತು ಬೆಲಾರಸ್​ನ ಆಟಗಾರರಿಗೆ ಸಂಪೂರ್ಣ ನಿಷೇಧ ಹೇರಿದ ಮೊದಲ ಟೂರ್ನಮೆಂಟ್​ ಆಗಿದೆ. ಇದರರ್ಥ ವಿಶ್ವದ ನಂ.2 ಶ್ರೇಯಾಂಕದ ಡೇನಿಯಲ್ ಮೆಡ್ವೆಡೆವ್​ ಕೂಡ ಗ್ರ್ಯಾಸ್​ಕೋರ್ಟ್​ ಟೂರ್ನಮೆಂಟ್​ ಆಡುವ ಅವಕಾಶ ತಪ್ಪಿಸಿಕೊಳ್ಳಲಿದ್ದಾರೆ.

Wimbledon bans Russian and Belarusian players
ರಷ್ಯಾ-ಬೆಲಾರಸ್​ ಟೆನಿಸ್​ ಪ್ಲೇಯರ್​ಗಳಿಗೆ ವಿಂಬಲ್ಡನ್​ನಿಂದ ನಿಷೇಧ

By

Published : Apr 20, 2022, 10:00 PM IST

ನವದೆಹಲಿ: ಉಕ್ರೇನ್​ ಮೇಲೆ ರಷ್ಯಾ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಕ್ರಮವನ್ನು ಆಲ್ ಇಂಗ್ಲೆಂಡ್​ ಕ್ಲಬ್​ ಖಂಡಿಸಿದ್ದು, ಈ ವರ್ಷದ ವಿಂಬಲ್ಡನ್​ ಚಾಂಪಿಯನ್​ಶಿಪ್​ಗೆ ರಷ್ಯಾ ಮತ್ತು ಬೆಲಾರಸಿಯನ್​ ಟೆನಿಸ್ ಆಟಗಾರರನ್ನು ಪ್ರತಿಷ್ಠಿತ ವಿಂಬಲ್ಡನ್​ ಟೂರ್ನಮೆಂಟ್​ನಿಂದ ನಿಷೇಧ ಹೇರಲಾಗಿದೆ. ಜೂನ್​ 27ರಿಂದ ಆರಂಭವಾಗಲಿರುವ ಬಹುನಿರೀಕ್ಷಿತ 2022ರ ಗ್ರ್ಯಾಂಡ್​​ ಸ್ಲಾಮ್​ನಲ್ಲಿ​ ಈ ಎರಡೂ ರಾಷ್ಟ್ರಗಳ ಆಟಗಾರರು ಆಡುವುದು ಅಸಾಧ್ಯವಾಗಿದೆ.

ವಿಂಬಲ್ಡನ್​ ಪ್ರಸ್ತುತ ಉಕ್ರೇನ್​ನಲ್ಲಿ ಯುದ್ದ ಆರಂಭವಾದ ಮೇಲೆ ರಷ್ಯಾ ಮತ್ತು ಬೆಲಾರಸ್​ನ ಆಟಗಾರರಿಗೆ ಸಂಪೂರ್ಣ ನಿಷೇಧ ಹೇರಿದ ಮೊದಲ ಟೂರ್ನಮೆಂಟ್​ ಆಗಿದೆ. ಇದರರ್ಥ ವಿಶ್ವದ ನಂ.2 ಶ್ರೇಯಾಂಕದ ಡೇನಿಯಲ್ ಮೆಡ್ವೆಡೆವ್​ ಕೂಡ ಗ್ರ್ಯಾಸ್​ಕೋರ್ಟ್​ ಟೂರ್ನಮೆಂಟ್​ ಆಡುವ ಅವಕಾಶ ತಪ್ಪಿಸಿಕೊಳ್ಳಲಿದ್ದಾರೆ.

ರಷ್ಯಾ ಮತ್ತು ಬೆಲಾರಸ್​ ಟಿನಿಸಿಗರನ್ನು ಅಂತರರಾಷ್ಟ್ರೀಯ ಟೆನಿಸ್ ಫೆಡರೇಶನ್ ಎಟಿಪಿ ಮತ್ತು ಡಬ್ಲ್ಯೂಟಿಎ ಟೂರ್ನಿಗಳಲ್ಲಿ ತಮ್ಮ ರಾಷ್ಟ್ರಧ್ವಜವನ್ನು ತೋರಿಸದೆ ಮತ್ತು ರಾಷ್ಟ್ರೀಯ ಗೀತೆಯನ್ನು ಹಾಡದೆ ಸ್ಪರ್ಧಿಸಲು ಅವಕಾಶ ನೀಡಿದೆ. ಆದರೆ ವಿಂಬಲ್ಡನ್​ ಇಂಗ್ಲೆಂಡ್ ಟಿನಿಸ್​ ಫೆಡರೇಷನ್​ ಆಯೋಜಿಸುತ್ತಿರುವುದರಿಂದ ಈ ರಾಷ್ಟ್ರಗಳ ಆಟಗಾರರನ್ನು ಸರ್ಕಾರದ ನಿರ್ದೇಶನದಂತೆ ನಿಷೇಧಿಸಿದೆ.

ಡೇನಿಯಲ್ ಮೆಡ್ವೆಡೆವ್ ಅಲ್ಲದೆ ಪುರುಷರ ನಂ. 8 ಆಂಡ್ರೆ ರುಬ್ಲೆವ್, 2021ರಲ್ಲಿ ವಿಂಬಲ್ಡನ್ ಸೆಮಿಫೈನಲಿಸ್ಟ್ ಆಗಿದ್ದ ಮತ್ತು WTA ಶ್ರೇಯಾಂಕದಲ್ಲಿ 4ನೇ ಶ್ರೇಯಾಂಕದಲ್ಲಿರುವ ಅರಿನಾ ಸಬಲೆಂಕಾ, ವಿಕ್ಟೋರಿಯಾ ಅಜರೆಂಕಾ, ಎರಡು ಬಾರಿ ಆಸ್ಟ್ರೇಲಿಯನ್ ಓಪನ್ ಗೆದ್ದಿರುವ ಮಾಜಿ ಮಹಿಳಾ ನಂ. 1 ಆಟಗಾರ್ತಿ ಅನಸ್ತಾಸಿಯಾ ಪಾವ್ಲ್‌ಯುಚೆಂಕೋವಾ ವಿಂಬಲ್ಡನ್​ನಲ್ಲಿ ಆಡುವ ಅವಕಾಶ ಕಳೆದುಕೊಳ್ಳಲಿದ್ದಾರೆ.

ಇದನ್ನೂ ಓದಿ:ಸೋತವರ ನಡುವೆ ಕಾಳಗ: ಟೂರ್ನಿಯಲ್ಲಿ ಉಳಿದುಕೊಳ್ಳಲು ಇತ್ತಂಡಗಳಿಗೂ ಗೆಲುವು ಅನಿವಾರ್ಯ

ABOUT THE AUTHOR

...view details