ಕರ್ನಾಟಕ

karnataka

ETV Bharat / sports

ಅರ್ಜುನ್​​ ಅವಾರ್ಡ್​​ಗೋಸ್ಕರ​ ಯಾವ ಪದಕ ಗೆದ್ದು ತರಲಿ: ಪ್ರಧಾನಿ, ಕ್ರೀಡಾ ಸಚಿವರಿಗೆ ಸಾಕ್ಷಿ ಪತ್ರ!

ಸಾಕ್ಷಿ ಮಲಿಕ್​ ಹಾಗೂ 2017ರ ವಿಶ್ವ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್ ಮೀರಾಬಾಯಿ ಈಗಾಗಲೇ ರಾಜೀವ್​ ಗಾಂಧಿ ಖೇಲ್​ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹೀಗಾಗಿ ಅವರ ಹೆಸರು ಈ ಸಲ ಅರ್ಜುನ್​ ಪ್ರಶಸ್ತಿಯಿಂದ ಕೈಬಿಡಲಾಗಿದೆ. ಇದೇ ವಿಷಯವಾಗಿ ಸಾಕ್ಷಿ ಮಲಿಕ್​ ಪ್ರಧಾನಿಗೆ ಪತ್ರ ಬರೆದಿದ್ದಾರೆ.

Sakshi Malik
Sakshi Malik

By

Published : Aug 22, 2020, 4:35 PM IST

ಹೈದರಾಬಾದ್​:ಕುಸ್ತಿಪಟು ಸಾಕ್ಷಿ ಮಲಿಕ್​ಗೆ ಈಗಾಗಲೇ ರಾಜೀವ್​ ಗಾಂಧಿ ಖೇಲ್​ ರತ್ನ ನೀಡಿರುವ ಕಾರಣ ಈ ಸಲ ಅವರ ಹೆಸರನ್ನ ಅರ್ಜುನ್​​ ಅವಾರ್ಡ್​ನಿಂದ ಕೈಬಿಡಲಾಗಿದೆ. ಇದೇ ವಿಷಯಕ್ಕಾಗಿ ಬೇಸರಗೊಂಡಿರುವ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ರೀಡಾ ಸಚಿವ ಕಿರಣ್​ ರಿಜುಜು ಅವರಿಗೆ ಪತ್ರ ಬರೆದಿದ್ದಾರೆ.

ಕುಸ್ತಿಪಟು ಸಾಕ್ಷಿ ಮಲಿಕ್​​

ಅರ್ಜುನ್​ ಅವಾರ್ಡ್​ ಪಡೆದುಕೊಳ್ಳಲು ನಾನು ಯಾವ ಪದಕ ಗೆದ್ದು ಬರಬೇಕು ಎಂದು ಪ್ರಶ್ನೆ ಮಾಡಿರುವ ಅವರು, ದೇಶದಲ್ಲಿನ ಪ್ರತಿಯೊಂದು ಗೌರವ ಪಡೆದುಕೊಳ್ಳಬೇಕು ಎಂಬುದು ಪ್ರತಿ ಕ್ರೀಡಾಪಟುವಿನ ಆಸೆಯಾಗಿರುತ್ತದೆ ಎಂದಿದ್ದಾರೆ. ಪ್ರತಿಯೊಂದು ಗೌರವ ಪಡೆದುಕೊಳ್ಳಲು ನಾವು ನಮ್ಮ ಪ್ರಾಣ ಕಳೆದುಕೊಳ್ಳಲು ಸಿದ್ಧರಾಗಿರುತ್ತೇವೆ. ನನಗೂ ಒಂದು ಆಸೆ ಇದೆ. ನನ್ನ ಹೆಸರಿನ ಮುಂದೆ ಅರ್ಜುನ್​ ಅವಾರ್ಡ್​ ಪುರಸ್ಕೃತೆ ಎಂದು ಇರಬೇಕು ಎಂಬುದು. ಅದಕ್ಕಾಗಿ ನಾನು ಮತ್ತೆ ಯಾವ ಪದಕ ಗೆದ್ದು ಬರಲಿ ಹೇಳಿ ಎಂದು ಕೇಳಿದ್ದಾರೆ.

ಅರ್ಜುನ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದ ಸಾಕ್ಷಿ, ಮೀರಾಬಾಯಿ ಹೆಸರು ತಿರಸ್ಕೃತ: ಕಾರಣವೇನು ಗೊತ್ತಾ?

ಈಗಾಗಲೇ ದೇಶದ ಅತ್ಯುನ್ನತ ಕ್ರೀಡಾ ಗೌರವ ರಾಜೀವ್ ಗಾಂಧಿ ಖೇಲ್​ ರತ್ನ ಪಡೆದುಕೊಂಡಿರುವ ಕಾರಣ ಸಾಕ್ಷಿ ಮಲಿಕ್​ ಅವರನ್ನ ಅರ್ಜುನ್​​ ಅವಾರ್ಡ್​ಗೆ ಆಯ್ಕೆ ಮಾಡಿಲ್ಲ. 2016ರ ಒಲಿಂಪಿಕ್ಸ್​​ನಲ್ಲಿ ಕುಸ್ತಿಪಟು ಸಾಕ್ಷಿ ಮಲಿಕ್​ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಈ ವರ್ಷ ಅವರ ಹೆಸರು ಅರ್ಜುನ್​​ ಅವಾರ್ಡ್​ಗೋಸ್ಕರ ನಾಮನಿರ್ದೇಶನ ಸಹ ಮಾಡಲಾಗಿತ್ತು. ಅಂತಿಮ ಪಟ್ಟಿಯಲ್ಲಿ ಹೆಸರೂ ಕೂಡಾ ಇತ್ತು. ಆದರೆ ಈಗಾಗಲೇ ಅತ್ಯುನ್ನತ ಪ್ರಶಸ್ತಿ ನೀಡಿರುವುದರಿಂದ ಅರ್ಜುನ್​ ಅವಾರ್ಡ್​ ಲಿಸ್ಟ್​ನಿಂದ ಸಾಕ್ಷಿ ಹೆಸರನ್ನ ಕ್ರೀಡಾ ಇಲಾಖೆ ಕೈಬಿಟ್ಟಿತ್ತು.

ABOUT THE AUTHOR

...view details