ಫ್ಲೋರಿಡಾ :15 ಬಾರಿ ಚಾಂಪಿಯನ್ ಆಗಿದ್ದ ಪ್ರಮುಖ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ತಮ್ಮ ಮಗ, 11 ವರ್ಷದ ಚಾರ್ಲಿ ವುಡ್ಸ್ ಜೊತೆ ಪಿಎನ್‌ಸಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದಾರೆ.
ಟೈಗರ್‌ವುಡ್ಸ್ ಪಿಎನ್‌ಸಿ ಚಾಂಪಿಯನ್‌ಶಿಪ್‌ನಲ್ಲಿ 10-ಅಂಡರ್-ಪಾರ್ 62(10-under 62)ನೊಂದಿಗೆ 6ನೇ ಸ್ಥಾನ ಪಡೆದುಕೊಂಡಿದ್ದಾರೆ. 25 ವರ್ಷಗಳ ಇತಿಹಾಸದಲ್ಲಿ ಪಿಎನ್‌ಸಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ ಕಿರಿಯ ಆಟಗಾರ ಎಂಬ ಕೀರ್ತಿಗೆ ಚಾರ್ಲಿವುಡ್ಸ್ ಪಾತ್ರರಾಗಿದ್ದಾರೆ.
ಪಿಎನ್‌ಸಿ ಚಾಂಪಿಯನ್‌ಶಿಪ್‌ನಲ್ಲಿ ಟೈಗರ್‌ವುಡ್ಸ್ ಮತ್ತು ಚಾರ್ಲಿವುಡ್ಸ್ ಭಾಗಿ "ನನ್ನ ಆಟದ ಬಗ್ಗೆ ನಾನು ನಿಜವಾಗಿಯೂ ಹೆದರುವುದಿಲ್ಲ" ಎಂದು ಟೈಗರ್ ವುಡ್ಸ್ ಹೇಳಿದ್ದಾರೆ. ಚಾರ್ಲಿ ತನ್ನ ಜೀವನದಲ್ಲಿ ಇನ್ನೂ ಸಾಕಷ್ಟು ಸಮಯ ಹೊಂದಿದ್ದಾನೆ. ಈಗ ಏನು ಮಾಡಬೇಕೋ ಅದನ್ನು ಮಾಡುತ್ತಿದ್ದಾನೆ. ಕಿರಿಯರೊಂದಿಗೆ ಆಟವಾಡಲು ಇಷ್ಟಪಡುತ್ತಾನೆ, ಜನಸಮೂಹ ಅಥವಾ ಕ್ಯಾಮೆರಾಗಳ ಮುಂದೆ ಆಡುವ ಮನಸ್ಸಿಲ್ಲ ಎಂದು ತನ್ನ ಪುತ್ರನ ಬಗ್ಗೆ ಹೇಳಿಕೊಂಡಿದ್ದಾರೆ.
ನನ್ನ ಮಗನ ಆಟದಿಂದ ನನಗೇನು ಆಶ್ಚರ್ಯವಾಗಿಲ್ಲ. ನಾನು ಇದನ್ನು ಈ ವರ್ಷವಿಡೀ ಮನೆಯಲ್ಲಿ ನೋಡಿದ್ದೇನೆ. ಸಾಧಕರೊಂದಿಗೆ ಅಡುವುದು, ಸ್ಕೋರ್ರ್ಬೋರ್ಡ್, ಪ್ರೇಕ್ಷಕರು, ದೂರದರ್ಶನ ಇವೆಲ್ಲ ಅವನಿಗೆ ಹೊಸದಾಗಿದೆ ಎಂದು ಹೇಳಿದ್ದಾರೆ.