ಕರ್ನಾಟಕ

karnataka

ETV Bharat / sports

2,02,590 ಯುಎಸ್ ಡಾಲರ್​​​ಗೆ ಹರಾಜಾದ ಕೋಬ್ ಬ್ರ್ಯಾಂಟ್ ಬಳಸುತ್ತಿದ್ದ ವಸ್ತುಗಳು! - ಕೋಬ್ ಬ್ರ್ಯಾಂಟ್

ಖ್ಯಾತ ಬಾಸ್ಕೆಟ್‌ಬಾಲ್ ಕೋಬ್ ಬ್ರ್ಯಾಂಟ್ ಬಳಸುತ್ತಿದ್ದ ವಸ್ತುಗಳನ್ನು ಒಟ್ಟು 2,02,590 ಯುಎಸ್ ಡಾಲರ್‌ಗಳಿಗೆ ಹರಾಜುಗೊಳಿಸಲಾಗಿದೆ.

kobe
kobe

By

Published : May 22, 2020, 4:11 PM IST

ಕ್ಯಾಲಿಫೋರ್ನಿಯಾ:ಪ್ರಸಿದ್ಧ ಬಾಸ್ಕೆಟ್​ಬಾಲ್​ ಆಟಗಾರ ಬಳಸುತ್ತಿದ್ದ ವಸ್ತುಗಳು ದೊಡ್ಡ ಮೊತ್ತಕ್ಕೆ ಹರಾಜಾಗಿವೆ. ಲಾಸ್ ಏಂಜಲೀಸ್ ಲೇಕರ್ಸ್‌ನ ಎನ್‌ಬಿಎ (ನ್ಯಾಷನಲ್ ಬಾಸ್ಕೆಟ್‌ಬಾಲ್ ಅಸೋಸಿಯೇಷನ್) ತಂಡದಲ್ಲಿದ್ದಾಗ ಕೋಬ್ ಬ್ರ್ಯಾಂಟ್ ಬಳಸುತ್ತಿದ್ದ ಅವರ ವಸ್ತುಗಳು ಒಟ್ಟು 2,02,590 ಯುಎಸ್ ಡಾಲರ್‌ಗಳಿಗೆ ಹರಾಜಾಗಿವೆ.

ಹರಾಜಾದ ಕೋಬ್ ಬ್ರ್ಯಾಂಟ್ ಕೈಯಚ್ಚು

ಬ್ರ್ಯಾಂಟ್‌ನ ಕೈಯಚ್ಚು 75,000 ಯುಎಸ್ ಡಾಲರ್‌ಗಳಿಗೆ ಮಾರಾಟವಾಗಿದೆ. 1999-2000 ಎನ್‌ಬಿಎ ಫೈನಲ್ಸ್​ನಲ್ಲಿ ಬ್ರ್ಯಾಂಟ್ ತೊಟ್ಟಿದ್ದ ಸಮವಸ್ತ್ರ 43,750 ಯುಎಸ್ ಡಾಲರ್‌ಗಳಿಗೆ ಮಾರಾಟವಾಗಿದೆ.

ಹರಾಜಾದ ಕೋಬ್ ಬ್ರ್ಯಾಂಟ್ ಬಳಸುತ್ತಿದ್ದ ವಸ್ತುಗಳು

ಕೋಬ್ ಬ್ರ್ಯಾಂಟ್‌ ಲೇಕರ್ಸ್ ಜರ್ಸಿ 22,400 ಯುಎಸ್ ಡಾಲರ್ಗಳಿಗೆ, ಅವರ ಸಹಿ ಇರುವ ಅಡೀಡಾಸ್ ಬಾಸ್ಕೆಟ್‌ಬಾಲ್ ಸ್ನೀಕರ್‌ಗಳು 25,600 ಯುಎಸ್ ಡಾಲರ್‌ಗಳಿಗೆ ಮಾರಾಟವಾದವು.

ABOUT THE AUTHOR

...view details