ಮನಾಮ (ಬಹ್ರೈನ್) :ಬಹ್ರೈನ್ ಗ್ರ್ಯಾಂಡ್ ಪ್ರಿಕ್ಸ್ ಭಾನುವಾರ ಪ್ರಾರಂಭಗೊಂಡಿದ್ದು, ಫಾರ್ಮುಲಾ ಒನ್ನ ಸ್ಪರ್ಧಿ ರೊಮೈನ್ ಗ್ರೋಸ್ಜೀನ್ ಕಾರು ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಬಹ್ರೈನ್ ಗ್ರ್ಯಾಂಡ್ ಪ್ರಿಕ್ಸ್.. ರೊಮೈನ್ ಗ್ರೋಸ್ಜೀನ್ ಕಾರಿನಲ್ಲಿ ಬೆಂಕಿ ಅವಘಡ - ಕಾರ್ ರೇಸರ್ ರೊಮೈನ್ ಗ್ರೋಸ್ಜೀನ್ ಸಂಬಂಧಿತ ಸುದ್ದಿ
ಬೆಂಕಿ ಆವರಿಸಿದ ನಂತರ ಗ್ರೋಸ್ಜೀನ್ ಸುಮಾರು 10 ಸೆಕೆಂಡ್ಗಳ ಕಾಲ ಕಾರಿನೊಳಗೆ ಸಿಲುಕಿದ್ದರು. ಬಳಿಕ ಜ್ವಾಲೆಯಿಂದ ತಪ್ಪಿಸಿಕೊಂಡು ಬರುವಲ್ಲಿ ಅವರು ಯಶಸ್ವಿಯಾಗಿದ್ದಾರೆ..
![ಬಹ್ರೈನ್ ಗ್ರ್ಯಾಂಡ್ ಪ್ರಿಕ್ಸ್.. ರೊಮೈನ್ ಗ್ರೋಸ್ಜೀನ್ ಕಾರಿನಲ್ಲಿ ಬೆಂಕಿ ಅವಘಡ ರೊಮೈನ್ ಗ್ರೋಸ್ಜೀನ್ ಕಾರಿನಲ್ಲಿ ಬೆಂಕಿ ಅವಘಡ](https://etvbharatimages.akamaized.net/etvbharat/prod-images/768-512-9711884-thumbnail-3x2-mng.jpg)
ರೊಮೈನ್ ಗ್ರೋಸ್ಜೀನ್ ಕಾರಿನಲ್ಲಿ ಬೆಂಕಿ ಅವಘಡ
ಫ್ರೆಂಚ್ನ ರೊಮೈನ್ ಗ್ರೋಸ್ಜೀನ್ ಕಾರು ಮೊದಲ ಲ್ಯಾಪ್‌ನಲ್ಲಿ ಟ್ರ್ಯಾಕ್‌ನಿಂದ ಜಾರಿದೆ. ಬಳಿಕ ತಡೆಗೋಡೆಗೆ ಗುದ್ದಿದ ರಭಸಕ್ಕೆ ಕಾರಿಗೆ ಬೆಂಕಿ ಹತ್ತಿಕೊಂಡಿದೆ. ಸದ್ಯ ಗ್ರೋಸ್ಜೀನ್ರನ್ನು ತಕ್ಷಣವೇ ಹೆಲಿಕಾಪ್ಟರ್ ಮೂಲಕ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಆವರ ಆರೋಗ್ಯ ಸ್ಥಿರವಾಗಿದೆ ಎಂದು ಆಡಳಿತ ಮಂಡಳಿ ಎಫ್ಐಎ ತಿಳಿಸಿದೆ.
ಬೆಂಕಿ ಆವರಿಸಿದ ನಂತರ ಗ್ರೋಸ್ಜೀನ್ ಸುಮಾರು 10 ಸೆಕೆಂಡ್ಗಳ ಕಾಲ ಕಾರಿನೊಳಗೆ ಸಿಲುಕಿದ್ದರು. ಬಳಿಕ ಜ್ವಾಲೆಯಿಂದ ತಪ್ಪಿಸಿಕೊಂಡು ಬರುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಮೊದಲು ಪ್ರಥಮ ಚಿಕಿತ್ಸೆ ನೀಡಿ ಬಳಿಕ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.