ಕರ್ನಾಟಕ

karnataka

ETV Bharat / sports

ಒಲಿಂಪಿಕ್ ನಡೆಯೋದು ಕನ್ಫರ್ಮ್: ಯೋಜನೆಯಂತೆ ಮುಂದುವರಿಯಲು ನಿರ್ಧಾರ ಎಂದ ಯೋಶಿರೋ ಮೋರಿ - ಟೋಕಿಯೊ ಸಂಘಟನಾ ಸಮಿತಿಯ ಅಧ್ಯಕ್ಷ ಯೋಶಿರೋ ಮೋರಿ

ಮತ್ತೆ ಒಲಿಂಪಿಕ್ ಕ್ರೀಡಾಕೂಟವನ್ನು ಮುಂದೂಡುವ ಪ್ರಮೇಯವೇ ಇಲ್ಲ ಎಂದು ಟೋಕಿಯೊ ಸಂಘಟನಾ ಸಮಿತಿಯ ಅಧ್ಯಕ್ಷ ಯೋಶಿರೋ ಮೋರಿ ಸ್ಪಷ್ಟಪಡಿಸಿದ್ದಾರೆ.

Tokyo Olympic
ಒಲಿಂಪಿಕ್ ನಡೆಯೋದು ಕನ್ಫರ್ಮ್

By

Published : Jan 13, 2021, 9:06 AM IST

ಟೋಕಿಯೊ(ಜಪಾನ್): ಈ ಬೇಸಿಗೆಯಲ್ಲಿ ನಿಗದಿಯಂತೆ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟ ನಡೆಯಲಿದೆ ಎಂದು ಟೋಕಿಯೊ ಸಂಘಟನಾ ಸಮಿತಿಯ ಅಧ್ಯಕ್ಷ ಯೋಶಿರೋ ಮೋರಿ ಹೇಳಿದ್ದಾರೆ.

ಆನ್‌ಲೈನ್ ಕಾರ್ಯಕ್ರಮವೊಂದರಲ್ಲಿ ಸುಮಾರು 3,500 ಸಮಿತಿ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, "ಯೋಜನೆಯಂತೆ ಈ ಬೇಸಿಗೆಯಲ್ಲಿ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಕ್ಕೆ ಅಗತ್ಯ ಸಿದ್ಧತೆಗಳೊಂದಿಗೆ ಮುಂದುವರಿಯಲು ನಿರ್ಧರಿಸಿದ್ದೇವೆ" ಎಂದು ಹೇಳಿದ್ದಾರೆ

"ಈ ಕತ್ತಲೆ ಸುರಂಗದ ಮೂಲಕ ನಿಮ್ಮೊಂದಿಗೆ ಮುಂದುವರೆಯುತ್ತೇವೆ. ಅಂತಿಮವಾಗಿ ವಸಂತ ಬಂದೇ ಬರುತ್ತದೆ. ಸುದೀರ್ಘ ರಾತ್ರಿಯ ನಂತರ ಬೆಳಗಾಗಲೇ ಬೇಕು. ಇದನ್ನು ನಂಬಿ, ಅನೇಕ ಜನರಿಗೆ ಸಂತೋಷ ಮತ್ತು ಭರವಸೆ ನೀಡಲು ನಿಮ್ಮ ಕೈಲಾದಷ್ಟು ಪ್ರಯತ್ನ ಮಾಡಿ" ಎಂದು ಹೇಳಿದ್ದಾರೆ.

ಯೋಶಿರೋ ಮೋರಿ, ಟೋಕಿಯೊ ಸಂಘಟನಾ ಸಮಿತಿಯ ಅಧ್ಯಕ್ಷ

ಟೋಕಿಯೊ ಸಂಘಟನಾ ಸಮಿತಿಯ ಸಿಇಒ ತೋಶಿರೊ ಮುಟೊ ಮಾತನಾಡಿ, ಕ್ರೀಡೆ ಪ್ರಬಲವಾಗಿದ್ದು ಜನರನ್ನು ಮೆಚ್ಚಿಸುತ್ತದೆ. "ಅವರಿಗೆ ಏನಾಗಲಿದೆ ಎಂದು ಆಶ್ಚರ್ಯಪಡುವ ಬದಲು ಆಟವನ್ನು ಹೇಗೆ ನಡಸಬೇಕು ಎಂದು ಯೋಚಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

ಮತ್ತೆ ಒಲಿಂಪಿಕ್ ಕ್ರೀಡಾಕೂಟವನ್ನು ಮುಂದೂಡುವ ಪ್ರಮೇಯವೇ ಇಲ್ಲ ಎಂದು ಯೋಶಿರೋ ಮೋರಿ ಸ್ಪಷ್ಟಪಡಿಸಿದ್ದಾರೆ. ಸಾಂಕ್ರಾಮಿಕ ರೋಗದಿಂದಾಗಿ 2020ರ ಟೋಕಿಯೊ ಒಲಿಂಪಿಕ್ ಅನ್ನು ಕಳೆದ ವರ್ಷ ಮುಂದೂಡಲಾಗಿತ್ತು. 2021ರ ಜುಲೈ 23 ರಿಂದ ಆಗಸ್ಟ್ 8, ರವರೆಗೆ ಒಲಿಂಪಿಕ್ ಕ್ರೀಡಾಕೂಟ ನಡೆಯಲಿದ್ದು, ಪ್ಯಾರಾಲಿಂಪಿಕ್ಸ್ ಆಗಸ್ಟ್ 24 ರಿಂದ ಸೆಪ್ಟೆಂಬರ್ 5 ರವರೆಗೆ ನಡೆಯಲಿದೆ.

ABOUT THE AUTHOR

...view details