ಟೊರೊಂಟೊ: ಕೆನಡಾದ ಬ್ಯಾಸ್ಕೆಟ್ಬಾಲ್ ಆಟಗಾರ್ತಿ ಕಿಮ್ ಗೌಚರ್, ತನ್ನ ಮಗಳನ್ನು ಟೋಕಿಯೋ ಒಲಿಂಪಿಕ್ಸ್ಗೆ ಕರೆದುಕೊಂಡು ಹೋಗಲು ಅನುಮತಿ ಪಡೆದಿದ್ದಾರೆ. ಹಾಲುಣಿಸುವ ತಾಯಂದಿರು ತಮ್ಮ ಮಕ್ಕಳನ್ನು ಟೋಕಿಯೋಗೆ ಕರೆತರಲು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅನುಮತಿ ನೀಡಿದೆ.
Tokyo: ಸ್ತನ್ಯಪಾನ ಮಾಡಿಸುವ ತಾಯಂದಿರ ಜತೆಗೆ ಮಕ್ಕಳೂ ಬರಬಹುದು ಎಂದ IOC! - ಕೆನಡಾದ ಬ್ಯಾಸ್ಕೆಟ್ಬಾಲ್ ಆಟಗಾರ್ತಿ ಕಿಮ್ ಗೌಚರ್
ಒಲಿಂಪಿಕ್ ಕ್ರೀಡಾಕೂಟ ಸೇರಿದಂತೆ ಹಲವು ಆಟಗಳಲ್ಲಿ ಭಾಗಿಯಾಗಲು ತಾಯಂದಿರು ಸಮರ್ಥರಾಗಿದ್ದಾರೆ ಎಂಬ ಅಂಶವನ್ನು ನಾವು ಸ್ವಾಗತಿಸುತ್ತೇವೆ ಎಂದು ಐಒಸಿ ಹೇಳಿದೆ. ಟೋಕಿಯೋ - 2020 ಸಂಘಟನಾ ಸಮಿತಿಯು ಸ್ತನ್ಯಪಾನ ಮಾಡುವ ತಾಯಂದಿರಿಗೆ ಮತ್ತು ಮಕ್ಕಳಿಗೆ ಜಪಾನ್ ಪ್ರವೇಶಕ್ಕೆ ವಿಶೇಷ ಪರಿಹಾರ ಕಂಡು ಹಿಡಿದಿದೆ

ಒಲಿಂಪಿಕ್ ಕ್ರೀಡಾಕೂಟ ಸೇರಿದಂತೆ ಹಲವು ಆಟಗಳಲ್ಲಿ ಭಾಗಿಯಾಗಲು ತಾಯಂದಿರು ಸಮರ್ಥರಾಗಿದ್ದಾರೆ ಎಂಬ ಅಂಶವನ್ನು ನಾವು ಸ್ವಾಗತಿಸುತ್ತೇವೆ ಎಂದು ಐಒಸಿ ಹೇಳಿದೆ. ಟೋಕಿಯೋ - 2020 ಸಂಘಟನಾ ಸಮಿತಿಯು ಸ್ತನ್ಯಪಾನ ಮಾಡುವ ತಾಯಂದಿರಿಗೆ ಮತ್ತು ಮಕ್ಕಳಿಗೆ ಜಪಾನ್ ಪ್ರವೇಶಕ್ಕೆ ವಿಶೇಷ ಪರಿಹಾರ ಕಂಡುಹಿಡಿದಿದೆ. ಕೋವಿಡ್ ನಿರ್ಬಂಧಗಳಿಂದಾಗಿ ಯಾವುದೇ ಕುಟುಂಬವು ಟೋಕಿಯೊಗೆ ಪ್ರಯಾಣಿಸಬಾರದು ಎಂದು ಐಒಸಿ ಷರತ್ತು ವಿಧಿಸಿತ್ತು.
ಆದರೆ, ಅಂತಾರಾಷ್ಟ್ರೀಯ ಮಾಧ್ಯಮಗಳು ಮತ್ತು ಪ್ರಾಯೋಜಕರು ಟೋಕಿಯೊಗೆ ಪ್ರಯಾಣಿಸಬಹುದು ಮತ್ತು ಸ್ಥಳಗಳಲ್ಲಿ ಜಪಾನಿನ ಪ್ರೇಕ್ಷಕರಿಗೆ ಅನುಮತಿ ನೀಡ್ತೀರಿ. ಜಪಾನಿನ ಅಭಿಮಾನಿಗಳು ಹಾಜರಾಗಲಿದ್ದಾರೆ, ಅರೆನಾಗಳು ಅರ್ಧದಷ್ಟು ತುಂಬಿರುತ್ತವೆ, ಆದರೆ, ನನ್ನ ಮಗಳಿಗೆ ಪ್ರವೇಶ ಸಿಗುವುದಿಲ್ಲವೇ ಎಂದು ಈ ಹಿಂದೆ ಗೌಚರ್ ಪ್ರಶ್ನಿಸಿದ್ದರು. ಈ ಹಿನ್ನೆಲೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಈ ನಿರ್ಧಾರ ಕೈಗೊಂಡಿದೆ.