ಮುಂಬೈ:ಭಾರತದ ಸೆಲೆಬ್ರೆಟಿ ಜೋಡಿಗಳಲ್ಲಿ ನಂಬರ್ ಒನ್ ಆಗಿರುವ ವಿರುಷ್ಕಾ ಜೋಡಿ ನ್ಯೂಜಿಲ್ಯಾಂಡ್ನಲ್ಲಿ ಹೊಸ ವರ್ಷ ಆಚರಿಸಲು ತೆರಳಿದ್ದಾರೆ.
ಬರುವ ನೂತನ ವರ್ಷದ ಆಚರಣೆಗಾಗಿ ವಿರುಷ್ಕಾ ದಂಪತಿ ನ್ಯೂಜಿಲ್ಯಾಂಡ್ಗೆ ತೆರಳಿದ್ದಾರೆ. ಸದ್ಯ ದೇಶ ಮತ್ತು ತಂಡದಿಂದ ದೂರವಿರುವ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪತ್ನಿಯೊಂದಿಗೆ ಸಖತ್ ಎಂಜಾಯ್ ಮಾಡುತ್ತಿರುವ ಫೋಟೋವೊಂದನ್ನು ಶೇರ್ ಮಾಡಿದ್ದಾರೆ.
ವಿರುಷ್ಕಾ ದಂಪತಿ ಹಿಮದಿಂದ ಕೂಡಿರುವ ಬೆಟ್ಟದ ಮೇಲೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಆದ್ರೆ ಈ ಸ್ಥಳದ ಬಗ್ಗೆ ನಿಖರ ಮಾಹಿತಿ ಇಲ್ಲ. ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರುವ ಇವರು ಅಲ್ಲಿನ ಪ್ರವಾಸಿ ನಗರವೊಂದಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಈ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಬಳಿಕ ವಿರಾಟ್ ತಮ್ಮ ಟ್ವಿಟ್ಟರ್ನಲ್ಲಿ ಈ ಫೋಟೋ ಶೇರ್ ಮಾಡಿದ್ದಾರೆ.
ಇನ್ನು ವಿರುಷ್ಕಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ.