ವಾರ್ಸಾ:ಭಾರತದ ಭರವಸೆಯ ಕುಸ್ತಿಪಟು ವಿನೇಶ್ ಫೋಗಟ್, ಪೋಲೆಂಡ್ ಓಪನ್ ಕುಸ್ತಿ ಟೂರ್ನಮೆಂಟ್ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಪೋಲೆಂಡ್ ಓಪನ್ ಕುಸ್ತಿ: ಚಿನ್ನದ ಪದಕ ಗೆದ್ದ ವಿನೇಶ್ ಪೋಗಟ್ - ಪೋಲೆಂಡ್ ಓಪನ್ ಕುಸ್ತಿ ಟೂರ್ನಮೆಂಟ್
ಪೋಲೆಂಡ್ ಓಪನ್ ಕುಸ್ತಿ ಟೂರ್ನಮೆಂಟ್ನಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ವಿನೇಶ್ ಪೋಗಟ್
24 ವರ್ಷದ ವಿನೇಶ್ ಪೋಗಟ್ 53 ಕೆಜಿ ವಿಭಾಗದಲ್ಲಿ ಸ್ಥಳೀಯ ಕುಸ್ತಿಪಟು ರೊಕ್ಸನ ಅವರನ್ನ 3-2 ಅಂಕಗಳ ಅಂತರದಿಂದ ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಇದಕ್ಕೂ ಮೊದಲು ನಡೆದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ರಿಯೋ ಒಲಂಪಿಕ್ನಲ್ಲಿ ಕಂಚಿನ ಪದಕ ಗೆದ್ದಿದ್ದ ಸ್ವೀಡನ್ನ ಸೋಫಿಯಾ ಮ್ಯಾಟ್ಸನ್ ವಿರುದ್ಧ ಜಯ ಗಳಿಸಿದ್ದರು.
ಕಳೆದ ತಿಂಗಳಷ್ಟೆ ಗ್ರ್ಯಾಂಡ್ ಪ್ರಿಕ್ಸ್ ಆಫ್ ಸ್ಪೇನ್ ಮತ್ತು ಯಾಸರ್‌ಡೊಗು ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಪೋಗಟ್, ಸತತವಾಗಿ ಮೂರು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.