ಕರ್ನಾಟಕ

karnataka

ETV Bharat / sports

ಕೋವಿಡ್​ನಿಂದ ಕುಸ್ತಿಪಟು ವಿನೇಶ್​ ಫೋಗಟ್ ಗುಣಮುಖ - ಕೋವಿಡ್​ನಿಂದ ಗುಣಮುಖರಾದ ಕುಸ್ತಿಪಟು ವಿನೇಶ್​ ಫೋಗಟ್

ಕಳೆದ ವಾರ ಕೊರೊನಾ ಸೋಂಕಿಗೆ ತುತ್ತಾಗಿದ್ದ ಕುಸ್ತಿಪಟು ವಿನೇಶ್​ ಫೋಗಟ್, ಸೋಂಕಿನಿಂದ ಗುಣಮುಖಳಾಗಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

Vinesh Phogat tests negative for COVID-19
ಕುಸ್ತಿಪಟು ವಿನೇಶ್​ ಫೋಗಟ್

By

Published : Sep 2, 2020, 8:50 AM IST

ನವದೆಹಲಿ:ಭಾರತದ ಅತ್ಯುನ್ನತ ಕ್ರೀಡಾ ಗೌರವ ಖೇಲ್ ರತ್ನ ಪಡೆದ ಕುಸ್ತಿಪಟು ವಿನೇಶ್​ ಪೋಗಟ್​​ ಅವರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಕಳೆದ ವಾರ ಕೊರೊನಾ ಸೋಂಕಿಗೆ ತುತ್ತಾಗಿದ್ದ ಫೋಗಟ್, ಇದೀಗ ಸೋಂಕಿನಿಂದ ಗುಣಮುಖಳಾಗಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

ವಿನೇಶ್​ ಫೋಗಟ್ ಟ್ವೀಟ್

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಾನು ನಿನ್ನೆ ಎರಡನೇ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದೆ. ನನ್ನ ಕೋವಿಡ್ ವರದಿ ನೆಗೆಟಿವ್ ಬಂದಿದೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ. ಇದು ಒಂದು ದೊಡ್ಡ ಸುದ್ದಿಯಾಗಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ನಾನು ಪ್ರತ್ಯೇಕವಾಗಿ ಉಳಿಯುತ್ತೇನೆ. ನಿಮ್ಮ ಪ್ರಾರ್ಥನೆಗಾಗಿ ಧನ್ಯವಾದಗಳು ಎಂದಿದ್ದಾರೆ.

ಆಗಸ್ಟ್ 28ರಂದು ಫೋಗಾಟ್ ಕೊರೊನಾ ಸೋಂಕಿಗೆ ತುತ್ತಾಗಿರುವುದಾಗಿ ಹೇಳಿಕೊಂಡಿದ್ದರು. ಇದರ ಪರಿಣಾಮವಾಗಿ ಅವರು 2020ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ವರ್ಚುವಲ್ ಈವೆಂಟ್ ಮಿಸ್​​ ಮಾಡಿಕೊಳ್ಳಬೇಕಾಯಿತು. ಫೋಗಟ್ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ABOUT THE AUTHOR

...view details