ನವದೆಹಲಿ: ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಟೋಕಿಯೋ ಒಲಿಂಪಿಕ್ಸ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. 53 ಕೆಜಿ ವಿಭಾಗದ ಅಗ್ರ 4 ಕುಸ್ತಿಪಟುಗಳನ್ನು ವಿಶ್ವ ಕುಸ್ತಿ ಒಕ್ಕೂಟ ಇಂದು ಬಿಡುಗಡೆ ಮಾಡಿದ್ದು, ಭಾರತೀಸ್ ರೆಸ್ಟ್ಲರ್ ಅಗ್ರಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
2021ರ ಎಲ್ಲ ಕೂಟಗಳಲ್ಲೂ 53 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದಿರುವ ಫೋಗಾಟ್ ಸ್ಥಳೀಯ ಕುಸ್ತಿಪಟು ಮಾಯು ಮುಕಿಡಾರನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದಿದ್ದಾರೆ.
ಪುರುಷರ ವಿಭಾಗದಲ್ಲಿ ಭಾರತದ ಮತ್ತಿಬ್ಬರು ಭರವಸೆಯ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ ಮತ್ತು ದೀಪಕ್ ಪೂನಿಯಾ ಕ್ರಮವಾಗಿ 65 ಮತ್ತು 86 ಕೆಜಿ ವಿಭಾಗದಲ್ಲಿ ದ್ವಿತೀಯ ಶ್ರೇಯಾಂಕ ಪಡೆದುಕೊಂಡಿದ್ದಾರೆ. 57 ಕೆಜಿ ವಿಭಾಗದಲ್ಲಿ ರವಿ ಕುಮಾರ್ 4ನೇ ಶ್ರೇಯಾಂಕ ಹೊಂದಿದ್ದಾರೆ.