ನವದೆಹಲಿ:2020ರ ಟೋಕಿಯೊ ಒಲಿಂಪಿಕ್ಗೆ ಅರ್ಹತೆ ಪಡೆದ ಭಾರತದ ಬಾಕ್ಸರ್ಗಳಾದ ವಿಕಾಸ್ ಕ್ರಿಶನ್ (69 ಕೆಜಿ) ಮತ್ತು ಪೂಜಾ ರಾಣಿ (75 ಕೆಜಿ) ಅವರನ್ನು ಕೇಂದ್ರ ಕ್ರೀಡಾ ಸಚಿವ ಕಿರೆಣ್ ರಿಜಿಜು ಅಭಿನಂದಿಸಿದ್ದಾರೆ.
ಟೋಕಿಯೊ ಒಲಿಂಪಿಕ್ಗೆ ಅರ್ಹತೆ ಪಡೆದ ಪೂಜಾ ರಾಣಿ, ವಿಕಾಸ್: ಕ್ರೀಡಾ ಸಚಿವರಿಂದ ಅಭಿನಂದನೆ - ಒಲಂಪಿಕ್ಗೆ ಅರ್ಹತೆ ಪಡೆದ ವಿಕಾಸ್ ಕ್ರಿಶನ್
ಭಾರತೀಯ ಬಾಕ್ಸರ್ ಪೂಜಾ ರಾಣಿ ಜಪಾನ್ನ ಸೆವೊನ್ರೆಟ್ಸ್ ಒಕಾಜಾವಾ ವಿರುದ್ಧ 5-0 ಅಂಕಗಳಿಂದ ಜಯ ಸಾಧಿಸಿ ಟೋಕಿಯೊ ಒಲಿಂಪಿಕ್ಗೆ ಅರ್ಹತೆ ಪಡೆದ ಮೊದಲ ಭಾರತೀಯ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪೂಜಾ, ಥೈಲ್ಯಾಂಡ್ನ ಪೊಮ್ನಿಪಾ ಚುಟಿಯನ್ನು 5-0 ಅಂಕಗಳಿಂದ ಸೋಲಿಸಿ ಟೋಕಿಯೊ ಒಲಿಂಪಿಕ್ಗೆ ಅರ್ಹತೆ ಪಡೆದ ಮೊದಲ ಭಾರತೀಯ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇತ್ತ ಕ್ವಾರ್ಟರ್ ಫೈನಲ್ನಲ್ಲಿ ಜಪಾನ್ನ ಸೆವೊನ್ರೆಟ್ಸ್ ಒಕಾಜಾವಾ ವಿರುದ್ಧ 5-0 ಅಂಕಗಳಿಂದ ಜಯ ಸಾಧಿಸಿದ ವಿಕಾಸ್, ಟೋಕಿಯೊ ಒಲಿಂಪಿಕ್ಗೆ ಅರ್ಹತೆ ಪಡೆದುಕೊಂಡರು.
ಮುಂದಿನ ದಿನಗಳಲ್ಲಿ, ಲೋವ್ಲಿನಾ ಬೊರ್ಗೊಹೈನ್ (69 ಕೆಜಿ), ಆಶಿಶ್ ಕುಮಾರ್ (75 ಕೆಜಿ), ಸಚಿನ್ ಕುಮಾರ್ (81 ಕೆಜಿ), ಸತೀಶ್ ಕುಮಾರ್ (+ 91 ಕೆಜಿ) ಕ್ವಾರ್ಟರ್-ಫೈನಲ್ ಪಂದ್ಯಗಳನ್ನು ಆಡಲಿದ್ದು, ಒಲಿಂಪಿಕ್ಗೆ ಅರ್ಹತೆ ಪಡೆಯಲು ಎದುರು ನೋಡುತ್ತಿದ್ದಾರೆ.