ನವದೆಹಲಿ: ಕಳೆದ 6 ವರ್ಷಗಳಿಂದ ಪ್ರೊಫೆಷನಲ್ ಬಾಕ್ಸಿಂಗ್‌ನಲ್ಲಿ ಸತತ 12 ಗೆಲುವು ದಾಖಲಿಸಿದ್ದ ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಇದೇ ಮೊದಲ ಬಾರಿಗೆ ಸೋಲು ಕಂಡಿದ್ದಾರೆ. ರಷ್ಯಾದ ಆರ್ಟಿಶ್ ಲಾಪ್ಸನ್ ವಿರುದ್ಧ ತಮ್ಮ 13ನೇ ಪಂದ್ಯದಲ್ಲಿ ಸೋಲು ಕಂಡು ನಿರಾಶೆಯನುಭವಿಸಿದ್ದಾರೆ.
ವೃತ್ತಿಪರ ಬಾಕ್ಸಿಂಗ್‌ನಲ್ಲಿ ಮೊದಲ ಸೋಲುಕಂಡ ವಿಜೇಂದರ್ ಸಿಂಗ್! - ವೃತ್ತಿಪರ ಬಾಕ್ಸಿಂಗ್‌ನಲ್ಲಿ ವಿಜೇಂದರ್ಗೆ ಮೊದಲ ಸೋಲು
35 ವರ್ಷದ ವಿಜೇಂದರ್ ರಷ್ಯಾದ 26 ವರ್ಷದ ಲಾಪ್ಸನ್ ಹೊಡೆತದ ಮುಂದೆ ನಿಲ್ಲಲಾರದೆ ಹೋದರು. 5ನೇ ಸುತ್ತಿನಲ್ಲಿ ನಾಕೌಟ್ ಮೂಲಕ ಸೋಲಿಗೆ ಶರಣಾದರು. 2015ರಿಂದ ಇಲ್ಲಿಯವೆಗೆ 12 ಪಂದ್ಯಗಳಲ್ಲಿ ದಿಗ್ವಿಜಯ ಸಾಧಿಸಿ ಮುನ್ನುಗ್ಗುತ್ತಿದ್ದ ಭಾರತೀಯ ಬಾಕ್ಸರ್ಗೆ ಇದುಮೊದಲ ವೃತ್ತಿಪರ ಬಾಕ್ಸಿಂಗ್ ಸೋಲಾಗಿದೆ.
ವಿಜೇಂದರ್ ಸಿಂಗ್ಗೆ ಸೋಲು

ಇತ್ತ ಲಾಪ್ಸನ್‌ಗೆ ವೃತ್ತಿಪರ ಬಾಕ್ಸಿಂಗ್‌ನಲ್ಲಿ 7ನೇ ಪಂದ್ಯಗಳನ್ನಾಡಿದ್ದು ಇದು ಅವರ 5ನೇ ಗೆಲುವಾಗಿದೆ. ಎರಡು ಪಂದ್ಯಗಳಲ್ಲಿ ತಲಾ ಒಂದು ಸೋಲು ಮತ್ತು ಡ್ರಾ ಸಾಧಿಸಿದ್ದಾರೆ. ವಿಜೇಂದರ್‌ಗಿಂತ ಎತ್ತರವಾಗಿದ್ದ ಲಾಪ್ಸನ್ ಗೆಲುವಿಗೆ ವರದಾನವಾಯಿತು.