ಕರ್ನಾಟಕ

karnataka

ETV Bharat / sports

Women's Doubles: ಆಸ್ಟ್ರೇಲಿಯಾ - ಚೀನಾ ಖ್ಯಾತ ಜೋಡಿಗೆ US Open ಪ್ರಶಸ್ತಿ - ಯುಎಸ್ ಓಪನ್​ ಟೆನಿಸ್​ ಚಾಂಪಿಯನ್​ಶಿಪ್​

2019ರ ಆಸ್ಟ್ರೇಲಿಯನ್ ಓಪನ್ ಕಿರೀಟಕ್ಕೆ ಮುತ್ತಿಕ್ಕಿದೆ ಸ್ಯಾಮ್ - ಜಾಂಗ್ ಜೋಡಿ ಇದೀಗ ಯುಎಸ್ ಓಪನ್​ ಟೆನಿಸ್​ ಚಾಂಪಿಯನ್​ಶಿಪ್​ನಲ್ಲೂ ಗೆದ್ದಿದೆ.

ಆಸ್ಟ್ರೇಲಿಯಾ-ಚೀನಾ ಖ್ಯಾತ ಜೋಡಿಗೆ US Open ಪ್ರಶಸ್ತಿ
ಆಸ್ಟ್ರೇಲಿಯಾ-ಚೀನಾ ಖ್ಯಾತ ಜೋಡಿಗೆ US Open ಪ್ರಶಸ್ತಿ

By

Published : Sep 13, 2021, 1:50 PM IST

ನ್ಯೂಯಾರ್ಕ್:ಆಸ್ಟ್ರೇಲಿಯಾದ ಸ್ಯಾಮ್ ಸ್ಟೊಸುರ್ (37) ಮತ್ತು ಚೀನಾದ ಜಾಂಗ್ ಶುವಾಯ್ (32) ನ್ಯೂಯಾರ್ಕ್​ನಲ್ಲಿ ನಡೆದ ಯುಎಸ್ ಓಪನ್​ ಟೆನಿಸ್​ ಚಾಂಪಿಯನ್​ಶಿಪ್​ನಲ್ಲಿ ತಮ್ಮ ಎರಡನೇ ಗ್ರ್ಯಾಂಡ್ ಸ್ಲಾಮ್ ಮಹಿಳಾ ಡಬಲ್ಸ್ ಪ್ರಶಸ್ತಿ ಗೆದ್ದಿದ್ದಾರೆ.

ಎರಡು ಗಂಟೆಗಳ ಕಾಲ ನಡೆದ ಟೆನಿಸ್ ಮಹಿಳಾ ಡಬಲ್ಸ್ ಪೈನಲ್​ನಲ್ಲಿ ​6-3 3-6 6-3 ಅಂತರದ ಗೆಲುವು ಈ ಜೋಡಿ ದಾಖಲಿಸಿತು. ಸ್ಯಾಮ್ - ಜಾಂಗ್ ಜೋಡಿ ಈ ಹಿಂದೆ 2019ರ ಆಸ್ಟ್ರೇಲಿಯನ್ ಓಪನ್ ಕಿರೀಟಕ್ಕೆ ಮುತ್ತಿಟ್ಟಿತ್ತು. ಇದೀಗ ಯುಎಸ್ ಓಪನ್ ಕಿರೀಟವನ್ನೂ ತಮ್ಮದಾಗಿಸಿಕೊಂಡಿದ್ದಾರೆ.

ಇದನ್ನೂ ಓದಿ: US Open: ಫೈನಲ್​​​​​​​ನಲ್ಲಿ ವಿಶ್ವನಂಬರ್​ 1 ಜಾಕೊವಿಕ್​ಗೆ ಆಘಾತಕಾರಿ ಸೋಲು..ಮೆಡ್ವೆಡೆವ್​ಗೆ ಭರ್ಜರಿ ಜಯ

ಸ್ಯಾಮ್ ಸ್ಟೊಸುರ್ ಅವರು 2005 ರಲ್ಲಿ ಫ್ಲಶಿಂಗ್ ಮೆಡೋಸ್‌ನಲ್ಲಿ ಬೇರೊಬ್ಬ ಆಟಗಾರ್ತಿಯೊಂದಿಗೆ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದರು. 2011ರ ಯುಎಸ್ ಓಪನ್​ನಲ್ಲಿ ಚಾಂಪಿಯನ್​ ರಾಣಿ ಸೆರೆನಾ ವಿಲಿಯಮ್ಸ್‌ ಅವರನ್ನೇ ಸೋಲಿಸಿದ್ದರು.

ABOUT THE AUTHOR

...view details