ನವದೆಹಲಿ:27ನೇ ಸೀನಿಯರ್ ಮಹಿಳಾ ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಶಿಪ್ 2022-23ರ ಅಂತಿಮ ಸುತ್ತಿನಲ್ಲಿ ಸ್ಪರ್ಧಿಸಲು ಹನ್ನೆರಡು ತಂಡಗಳು ಸಜ್ಜಾಗಿವೆ. ಗುಂಪು ಹಂತಗಳಿಂದ ಆರು ವಿಜೇತರು, ನಾಲ್ಕು ಅತ್ಯುತ್ತಮ ಎರಡನೇ ಸ್ಥಾನ ಪಡೆದ ತಂಡಗಳು ಮತ್ತು ಆತಿಥೇಯ ಪಂಜಾಬ್ ಹಾಗೂ ಡೈರೆಕ್ಟ್ ಸೀಡ್ ರೈಲ್ವೆ ತಂಡಗಳು ಅಂತಿಮ ಸುತ್ತಿನಲ್ಲಿ ಸ್ಪರ್ಧಿಸಲಿವೆ.
ಗುಂಪು ಹಂತದಲ್ಲಿ 30 ತಂಡಗಳನ್ನು ಆರು ಗುಂಪುಗಳಾಗಿ ವಿಂಗಡಿಸಿ ಅಮೃತಸರ, ಹಲ್ದ್ವಾನಿ, ಮಾರ್ಗೋ, ಭಿಲಾಯಿ, ಮಥುರಾ ಮತ್ತು ಬೆಂಗಳೂರುಗಳಲ್ಲಿ ಪಂದ್ಯಗಳನ್ನು ಆಡಿಸಲಾಯಿತು. ಗುಂಪು ಹಂತದ ಪಂದ್ಯಗಳು ಮಾರ್ಚ್ 25, 2023 ರಿಂದ ಪ್ರಾರಂಭವಾಯಿಗಿ ಮತ್ತು ಏಪ್ರಿಲ್ 9ರ ವರೆಗೆ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (AIFF) ಅಡಿಯಲ್ಲಿ ಆಯೋಜನೆಗೊಂಡಿತ್ತು. ಗುಂಪು ಹಂತದ ಈ ಪಂದ್ಯಗಳಿಂದ ಬೆಸ್ಟ್ 12 ತಂಡವನ್ನು ಆಯ್ಕೆ ಮಾಡಲಾಗಿದೆ.
ಹರಿಯಾಣ (ಗುಂಪು I), ಮಹಾರಾಷ್ಟ್ರ (ಗುಂಪು II), ಹಿಮಾಚಲ ಪ್ರದೇಶ (ಗುಂಪು III), ಜಾರ್ಖಂಡ್ (ಗುಂಪು IV), ತಮಿಳುನಾಡು (ಗುಂಪು V), ಮಣಿಪುರ (ಗುಂಪು VI) ಗುಂಪು ವಿಜೇತರಾಗಿ ಅಂತಿಮ ಸುತ್ತಿಗೆ ಅರ್ಹತೆ ಪಡೆದ ತಂಡಗಳಾದರೆ, ಚಂಡೀಗಢ (ಗುಂಪು II), ಕರ್ನಾಟಕ (ಗುಂಪು VI), ಪಶ್ಚಿಮ ಬಂಗಾಳ (ಗುಂಪು V) ಮತ್ತು ಒಡಿಶಾ (ಗುಂಪು III) ನಾಲ್ಕು ಅತ್ಯುತ್ತಮ ಎರಡನೇ ಸ್ಥಾನ ಪಡೆದು ಅಂತಿಮ ಸುತ್ತಿಗೆ ಪ್ರವೇಶ ಪಡೆದುಕೊಂಡಿವೆ.
ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ ಅಂತಿಮ ಹಂತಕ್ಕೆ ತಂಡವನ್ನು ಆಯ್ಕೆ ಮಾಡುವಲ್ಲಿ ಏಷ್ಯನ್ ಫುಟ್ಬಾಲ್ ಕಾನ್ಫೆಡರೇಶನ್ (AFC) ಮಾನದಂಡಗಳನ್ನು ಅನುಸರಿಸಿದೆ. ಅದಕ್ಕೆ ಮುಖ್ಯ ಕಾರಣ ಆರು ಗುಂಪಿನ ಗೆದ್ದ ತಂಡ ಜೊತೆಗೆ ನಾಲ್ಕು ಎರಡನೇ ಸ್ಥಾನ ಗಳಿಸಿದ ಬೆಸ್ಟ್ ತಂಡವನ್ನು ಗುರುತಿಸಲು ಈ ಮಾನದಂಡಕ್ಕೆ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ ಮೊರೆ ಹೋಗಿದೆ.