ಭುವನೇಶ್ವರ(ಒಡಿಶಾ): ಹಾಕಿ ವಿಶ್ವಕಪ್‌ನಲ್ಲಿ ಇಂದು ಪೂಲ್ ಎ ಮತ್ತು ಪೂಲ್ ಬಿ ತಂಡಗಳ ನಡುವೆ ಪಂದ್ಯಗಳು ನಡೆಯುತ್ತಿವೆ. ಎ ಗುಂಪಿನ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಮತ್ತು ಫ್ರಾನ್ಸ್ ಮತ್ತು ಅರ್ಜೆಂಟೀನಾ ಸೆಣಸಿದೆ. ಇದರಲ್ಲಿ ಆಸ್ಟ್ರೇಲಿಯಾ 9-2 ಗೋಲ್ನಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿದೆ. ಫ್ರಾನ್ಸ್ ಮತ್ತು ಅರ್ಜೆಂಟೀನಾ ಪಂದ್ಯ 5-5ರಿಂದ ಡ್ರಾದಲ್ಲಿ ಅಂತ್ಯವಾಗಿದೆ. ಏ ಗುಂಪಿನ ಎಲ್ಲ ಪಂದ್ಯಗಳು ಮುಗಿದಿದ್ದು, ಆಸ್ಟ್ರೇಲಿಯಾ ಮೂರರಲ್ಲಿ ಎರಡು ಪಂದ್ಯಗೆದ್ದು ಅಂಕ ಪಟ್ಟಿಯ ಮೊದಲ ಸ್ಥಾನದಲ್ಲಿದೆ.
ಬಿ ಗುಂಪಿನ ಬೆಲ್ಜಿಯಂ ಮತ್ತು ಜಪಾನ್ ನಡುವಣ ಪಂದ್ಯ 5: 30ಕ್ಕೆ ಆರಂಭವಾಗಿದ್ದು ಮೊದಲ ಕ್ವಾರ್ಟರ್ ಪಂದ್ಯ ನಡೆಯುತ್ತಿದೆ. ಸಂಜೆ 7ಕ್ಕೆ ಕೊರಿಯಾ ಮತ್ತು ಜರ್ಮನಿ ನಡುವೆ ಪಂದ್ಯಗಳು ನಡೆಯಲಿದೆ. ಬಿ ಗುಂಪಿನ ಅಂಕ ಪಟ್ಟಿಯಲ್ಲಿ ಬೆಲ್ಜಿಯಂ, ಜರ್ಮನಿ ಮತ್ತು ಕೊರಿಯಾ ತಲಾ ಒಂದು ಪಂದ್ಯಗಳನ್ನು ಗೆದ್ದಿದೆ. ಇಂದಿನ ಪಂದ್ಯ ಸೆಮಿಸ್ಗೆ ಯಾರು ನೇರ ಪ್ರವೇಶ ಪಡೆಯುತ್ತಾರೆ ಎಂಬುದು ನಿರ್ಣಯ ಆಗಲಿದೆ.
ಅತೀ ಹೆಚ್ಚು ಗೋಲ್ ಗಳಸಿದ ದೇಶ ಯಾವುದು?:ಇಲ್ಲಿಯವರೆಗೆ ವಿಶ್ವಕಪ್‌ನಲ್ಲಿ ನೆದರ್ಲೆಂಡ್ಸ್ ತಂಡವು 92 ಗೋಲುಗಳನ್ನು ಹೊಡೆದಿದೆ. 2023ರ ಹಾಕಿ ವಿಶ್ವಕಪ್ ಆವೃತ್ತಿಯಲ್ಲಿ 22 ಗೋಲುಗಳನ್ನು ಗಳಿಸಿದೆ. ಈ ಮೂಲಕ ಅತೀ ಹೆಚ್ಚು ಗೋಲ್ಗಳಿಸಿದ ದೇಶ ಎಂಬ ದಾಖಲೆ ನಿರ್ಮಿಸಿದೆ. ನೆದರ್ಲೆಂಡ್ಸ್ ಗರಿಷ್ಠ ಏಳು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲುಗಳಾಗಿ ಪರಿವರ್ತಿಸಿದೆ. ವಿಶ್ವಕಪ್‌ನಲ್ಲಿ ಇದುವರೆಗೆ 57 ಫೀಲ್ಡ್ ಗೋಲುಗಳು ದಾಖಲಾಗಿದ್ದರೆ 32 ಪೆನಾಲ್ಟಿ ಕಾರ್ನರ್ ಗೋಲುಗಳು ದಾಖಲಾಗಿವೆ. ಮೂರು ಪೆನಾಲ್ಟಿ ಸ್ಟ್ರೋಕ್‌ಗಳನ್ನು ಸ್ಕೋರ್ ಮಾಡಲಾಗಿದೆ. ಆಟಗಾರರಿಗೆ 37 ಗ್ರೀನ್ ಕಾರ್ಡ್ ಮತ್ತು 14 ಹಳದಿ ಕಾರ್ಡ್ಗಳನ್ನು ತೋರಿಸಲಾಗಿದೆ.
ಹೆಚ್ಚು ಗೋಲ್ ಗಳಿಸಿದ ಆಟಗಾರ:ನೆದರ್ಲೆಂಡ್ಸ್‌ನ ಆಟಗಾರರಾದ ಬ್ರಿಂಕ್‌ಮನ್ ಥಿಯೆರಿ ಮತ್ತು ಜಾನ್ಸೀನ್ ಜಿಪ್ ತಲಾ 5-5 ಗೋಲುಗಳೊಂದಿಗೆ ಮೊದಲ ಮತ್ತು ಎರಡನೇ ಸ್ಥಾನದಲ್ಲಿದ್ದಾರೆ. 27 ವರ್ಷದ ಬ್ರಿಂಕ್‌ಮನ್ 2023ರ ವಿಶ್ವಕಪ್‌ನಲ್ಲಿ ಮೂರು ಪಂದ್ಯಗಳನ್ನು ಆಡಿದ್ದಾರೆ. ಬ್ರಿಂಕ್‌ಮನ್ ಇಲ್ಲಿಯವರೆಗೆ 143 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಅವರು 62 ಗೋಲುಗಳನ್ನು ಗಳಿಸಿದ್ದಾರೆ.