ಕರ್ನಾಟಕ

karnataka

ETV Bharat / sports

Tokyo Paralympics : ಟಿಟಿ, ಪವರ್​ಲಿಫ್ಟಿಂಗ್, ಟೇಕ್ವಾಂಡೋದಲ್ಲಿ ಇತಿಹಾಸ ನಿರ್ಮಿಸಲು ಭಾರತೀಯರು ಉತ್ಸುಕ

ಸಕಿನಾ ಖತುನ್​ ಮತ್ತು ಜೈದೀಪ್​ ಈ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಕರ್ನಾಟಕದ ಸಕಿನಾ ಸಾಯ್ ಬೆಂಗಳೂರಿನ​ ರಾಷ್ಟ್ರೀಯ ಕೇಂದ್ರದಲ್ಲಿ ತರಬೇತಿ ಪಡೆದಿದ್ದರೆ, ಹರಿಯಾಣದ ಜೈದೀಪ್ ರೋಹ್ಟಕ್​ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ತರಬೇತಿ ಪಡೆದಿದ್ದಾರೆ..

Tokyo ParalymTokyo Paralympicspics
ಪ್ಯಾರಾಲಿಂಪಿಕ್ಸ್​ 2020

By

Published : Aug 22, 2021, 4:44 PM IST

ನವದೆಹಲಿ: ಗುಜರಾತ್​ನ ಭವಿನಾ ಪಟೇಲ್ ಮತ್ತು ಸೋನಲ್​ಬೆನ್​ ಪಟೇಲ್​ ಆಗಸ್ಟ್​ 25ರಿಂದ ಆರಂಭವಾಗಲಿರುವ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಟೇಬಲ್​ ಟೆನಿಸ್ ಮೂಲಕ ಭಾರತದ ಪರ ಮೊದಲ ಅಭಿಯಾನ ​ಆರಂಭಿಸಲಿದ್ದಾರೆ.

ಮಹಿಳೆಯರ ಸಿಂಗಲ್ಸ್​ನಲ್ಲಿ ಭವಿನಾ ವ್ಹೀಲ್​ಚೇರ್ ಕ್ಲಾಸ್​​ 4ನೇ ಕೆಟಗರಿಯಲ್ಲಿ ಆಡಿದರೆ, ಸೋನಲ್​ಬೆನ್​ ವ್ಹೀಲ್​ಚೇರ್​ ಕ್ಲಾಸ್​ 3 ಕೆಟಗರಿಯಲ್ಲಿ ಸ್ಪರ್ಧಿಸಲಿದ್ದಾರೆ. ಇನ್ನು, ಡಬಲ್ಸ್​ನಲ್ಲಿ ಇವರಿಬ್ಬರು ಒಟ್ಟಾಗಿ ಸ್ಪರ್ಧೆಗಿಳಿಯಲಿದ್ದಾರೆ.

ಆಗಸ್ಟ್​ 25, 26 ಮತ್ತು 27ರಂದು ಈ ಇಬ್ಬರು ಪ್ಯಾರಾ ಪೆಡ್ಲರ್​ಗಳು ತಮ್ಮ ಆರಂಭದ ದಿನವೇ ಅರ್ಹತಾ ಸುತ್ತುಗಳನ್ನಾಡಲಿದ್ದಾರೆ. ಆಗಸ್ಟ್​ 28 ಮತ್ತು 29ರಂದು ಸೆಮಿಫೈನಲ್ ಮತ್ತು ಫೈನಲ್​ ನಡೆಯಲಿದೆ.

ಭವಿನಾ ಪ್ರಸ್ತುತ ವಿಶ್ವ ರ್ಯಾಂಕಿಂಗ್ಸ್​ನಲ್ಲಿ 8ನೇ ಸ್ಥಾನದಲ್ಲಿದ್ದರೆ, ಸೋನಲ್​ಬೆನ್​ 19ನೇ ಸ್ಥಾನದಲ್ಲಿದ್ದಾರೆ. ಇವರಿಬ್ಬರು ಈ ಹಿಂದೆ ಏಷ್ಯನ್​ ಗೇಮ್ಸ್​ನಲ್ಲಿ ಪದಕ ಗೆದ್ದಿದ್ದಾರೆ.

ಟೇಕ್ವಾಂಡೋ

21 ವರ್ಷದ ಅರುಣಾ ತನ್ವರ್​ ಟೇಕ್ವಾಂಡೋದಲ್ಲಿ ಸ್ಪರ್ಧಿಸುತ್ತಿರುವ ಏಕೈಕ ಭಾರತೀಯ ಸ್ಪರ್ಧಿಯಾಗಿದ್ದಾರೆ. ಹರಿಯಾಣ ಮೂಲದ ಈ ಅಥ್ಲೀಟ್, ಮಹಿಳೆಯರ 49ಕೆಜಿ ಕೆ44 ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಇವರು ಸೆಪ್ಟೆಂಬರ್​ 2 ರಂದು 16ರ ಸುತ್ತಿನಲ್ಲಿ ಕಣಕ್ಕಿಳಿಯಲಿದ್ದಾರೆ.

ಅರುಣಾ ಪ್ರಸ್ತುತ ವಿಶ್ವದ 30ನೇ ಶ್ರೇಯಾಂಕದಲ್ಲಿದ್ದು, ಇವರು 2018ರಲ್ಲಿ ವಿಯೆಟ್ನಾಂನಲ್ಲಿ ನಡೆದಿದ್ದ ಏಷ್ಯನ್​ ಪ್ಯಾರಾ ಟೇಕ್ವಾಂಡೊ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಪದಕ ಪಡೆದಿದ್ದರು. ಟರ್ಕಿಯಲ್ಲಿ 2019ರಲ್ಲಿ ನಡೆದ ವಿಶ್ವ ಪ್ಯಾರಾ ಟ್ವೇಕ್ವಾಂಡೋ ಚಾಂಪಿಯನ್​ಶಿಪ್​ನಲ್ಲೂ ಕೂಡ ಕಂಚಿನ ಪದಕ ಪಡೆದಿದ್ದರು.

ಪ್ಯಾರಾ ಪವರ್​ಲಿಫ್ಟಿಂಗ್

ಸಕಿನಾ ಖತುನ್​ ಮತ್ತು ಜೈದೀಪ್​ ಈ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಕರ್ನಾಟಕದ ಸಕಿನಾ ಸಾಯ್ ಬೆಂಗಳೂರಿನ​ ರಾಷ್ಟ್ರೀಯ ಕೇಂದ್ರದಲ್ಲಿ ತರಬೇತಿ ಪಡೆದಿದ್ದರೆ, ಹರಿಯಾಣದ ಜೈದೀಪ್ ರೋಹ್ಟಕ್​ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ತರಬೇತಿ ಪಡೆದಿದ್ದಾರೆ.

ಸಕಿನಾ ಮಹಿಳೆಯರ 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಸಕಿನಾ 2014ರ ಗ್ಲಾಸ್ಗೋ ಕಾಮನ್​ ವೆಲ್ತ್​ ಗೇಮ್ಸ್​ನಲ್ಲಿ ಕಂಚು ಮತ್ತು 2018ರ ಪ್ಯಾರಾ ಏಷ್ಯನ್ ಗೇಮ್ಸ್​ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಇದೀಗ ಪ್ಯಾರಾಲಿಂಪಿಕ್ಸ್​ನಲ್ಲೂ ಪದಕದ ನಿರೀಕ್ಷೆಯಲ್ಲಿದ್ದಾರೆ. ​ಇನ್ನು, ಜೈದೀಪ್​ ಪುರುಷರ 65ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದು, ಆಗಸ್ಟ್​ 27ರಂದು ಕಣಕ್ಕಿಳಿಯಲಿದ್ದಾರೆ.

ಈ ಎಲ್ಲಾ ಅಥ್ಲೀಟ್​ಗಳು ಕೇಂದ್ರ ಸರ್ಕಾರದ ಟಾಪ್ಸ್​ ಗ್ರೂಪ್​ನಲ್ಲಿ ಸೇರಿದ್ದು, ಇವರ ತರಬೇತಿಗೆ ಅಗತ್ಯವಾದ ಎಲ್ಲಾ ನೆರವನ್ನು ಸರ್ಕಾರ ಕಲ್ಪಿಸಿಕೊಟ್ಟಿದೆ. ಹಾಗಾಗಿ, ಈ ಮೂರು ಕ್ರೀಡೆಗಳಲ್ಲಿ ಭಾರತ ಪದಕದ ಖಾತೆ ತೆರೆಯುವ ಸಾಧ್ಯತೆ ಹೆಚ್ಚಿದೆ.

ABOUT THE AUTHOR

...view details