ಟೋಕಿಯೋ: ಮಹಿಳಾ ವಿಭಾಗದ 10 ಮೀಟರ್ ಏರ್ ರೈಫಲ್‌ನಲ್ಲಿ ಅವನಿ ಲೇಖಾರಾ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಇದೀಗ ಅವನಿ ಎರಡನೇ ಪದಕವನ್ನು ತಮ್ಮ ಮುಡಿಗೇರಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಟೋಕಿಯೋ ಪ್ಯಾರಾಲಿಂಪಿಕ್ಸ್: ಮತ್ತೊಂದು ಪದಕ ಮುಡಿಗೇರಿಸಿಕೊಳ್ಳುವಲ್ಲಿ ವಿಫಲರಾದ ಅವನಿ - ಅವನಿ ಲೇಖಾರಾ
ಟೋಕಿಯೋದಲ್ಲಿ ನಡೆಯುತ್ತಿರುವ 2020 ರ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಏರ್ ರೈಫಲ್ ಫೈನಲ್‌ನಲ್ಲಿ 249.6 ಅಂಕಗಳನ್ನು ಗಳಿಸುವ ಮೂಲಕ ವಿಶ್ವ ದಾಖಲೆ ಬರೆದು ಚಿನ್ನದ ಪದಕ ಗೆದಿದ್ದ 19 ವರ್ಷದ ಅವನಿ ಲೇಖರಾ ಇದೀಗ ಮಿಶ್ರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಮಿಶ್ರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಅವನಿ ಲೇಖರಾ ವಿಫಲರಾಗಿದ್ದಾರೆ. ಮಿಶ್ರ 10 ಮೀಟರ್ ಏರ್ ರೈಫಲ್‌ನಲ್ಲಿ ಅವನಿ ಕೇವಲ 629.7 ಅಂಕಗಳನ್ನು ಪಡೆದು 27 ನೇ ಸ್ಥಾನ ಪಡೆದರು. ದಕ್ಷಿಣ ಕೊರಿಯಾದ ಪಾರ್ಕ್ ಜಿನ್ - ಹೋ 638.9 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರೆ, ಜರ್ಮನಿಯ ನತಾಶ್ಚ ಹಿಲ್ಟ್ರೋಪ್ 635.4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಈ ಅರ್ಹತಾ ಸುತ್ತಿನಲ್ಲಿ ಅಗ್ರ ಎಂಟು ಶೂಟರ್‌ಗಳು ಫೈನಲ್‌ಗೆ ಪ್ರವೇಶ ಪಡೆದರು. ಮಿಶ್ರ ಏರ್ ರೈಫಲ್ ಅರ್ಹತಾ ಸುತ್ತಿನಲ್ಲಿ ಭಾರತದ ಸಿದ್ಧಾರ್ಥ ಬಾಬು 625.5 ಅಂಕಗಳಿಸಿ 40 ನೇ ಸ್ಥಾನ ಪಡೆದರು. ದೀಪಕ್ 624.9 ಅಂಕಗಳಿಸಿ 43ನೇ ಸ್ಥಾನ ಪಡೆದರು.