ಕರ್ನಾಟಕ

karnataka

ETV Bharat / sports

ಪ್ಯಾರಾಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಸಿಂಗ್​ರಾಜ್​ ಪ್ರಶಂಸಿಸಿದ ಪ್ರಧಾನಿ ಮೋದಿ

ಸಿಂಗ್​ರಾಜ್​ ಪುರುಷರ P1 - 10 ಮೀಟರ್​ ಏರ್ ಪಿಸ್ತೂಲ್​ನಲ್ಲಿ 216.8 ಅಂಕಗಳಿಸಿ ಕಂಚಿನ ಪದಕ ಗೆದ್ದರು. ಇದು ಭಾರತಕ್ಕೆ ದಕ್ಕಿದ 8ನೇ ಪದಕವಾಗಿದೆ.

l Singhraj Adhana  won  bronze
ಸಿಂಗ್​ರಾಜ್​ರನ್ನು ಪ್ರಶಂಸಿಸಿದ ಪ್ರಧಾನಿ ಮೋದಿ, ಠಾಕೂರ್

By

Published : Aug 31, 2021, 3:53 PM IST

ನವದೆಹಲಿ: ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಮಂಗಳವಾರ ಕಂಚಿನ ಪದಕ ಗೆದ್ದ ಭಾರತದ ಶೂಟರ್​ ಸಿಂಗ್​ರಾಜ್​ ಅದಾನ ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮತ್ತು 2008ರ ಒಲಿಂಪಿಕ್ಸ್ ಪದಕ ವಿಜೇತ ಅಭಿನವ್​ ಬಿಂದ್ರಾ ಅಭಿನಂದನೆ ಸಲ್ಲಿಸಿದ್ದಾರೆ.

ಸಿಂಗ್​ರಾಜ್​ ಪುರುಷರ P1 - 10 ಮೀಟರ್​ ಏರ್ ಪಿಸ್ತೂಲ್​ನಲ್ಲಿ 216.8 ಅಂಕಗಳಿಸಿ ಕಂಚಿನ ಪದಕ ಗೆದ್ದರು. ಇದು ಭಾರತಕ್ಕೆ ದಕ್ಕಿದ 8ನೇ ಪದಕವಾಗಿದೆ.

ಭಾರತಕ್ಕೆ ಪದಕ ತಂದುಕೊಟ್ಟ ಸಿಂಗ್​ರಾಜ್ ಅವ​ರನ್ನು ಟ್ವೀಟ್​ ಮಾಡಿ ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ಸಿಂಗ್​ರಾಜ್​ ಅವರಿಂದ ಅದ್ಭುತ ಪ್ರದರ್ಶನ. ಪ್ರತಿಭಾವಂತ ಶೂಟರ್ ಆಗಿರುವ ಅವರು ದೇಶಕ್ಕೆ ಕಂಚಿನ ಪದಕ ತಂದು ಕೊಟ್ಟಿದ್ದಾರೆ. ಈ ಗಮನಾರ್ಹ ಸಾಧನೆಗಾಗಿ ಅವರು ಬಹಳ ಶ್ರಮವಹಿಸಿದ್ದಾರೆ. ಅವರಿಗೆ ಅಭಿನಂದನೆಗಳು ಮತ್ತು ಮುಂದಿನ ಸ್ಪರ್ಧೆಗಳಿಗೆ ಶುಭಾಶಯಗಳು ಎಂದಿದ್ದಾರೆ.

ಇನ್ನು ಕ್ರೀಡಾ ಸಚಿವಾ ಅನುರಾಗ್ ಠಾಕೂರ್, ಯಶಸ್ಸಿಗೆ ವಯಸ್ಸಿನ ಅಡ್ಡಿಯಿಲ್ಲ. ಪ್ಯಾರಾಲಿಂಪಿಕ್ಸ್​ಗೆ 39ನೇ ವಯಸ್ಸಿನಲ್ಲಿ ಪದಾರ್ಪಣೆ ಮಾಡಿದ ಏಸ್​ ಶೂಟರ್​ ಸಿಂಗ್​ರಾಜ್​ ಅದಾನ ಕಂಚಿನ ಪದಕ ಗೆದ್ದಿದ್ದಾರೆ. ಭಾರತ ಈ ಪ್ಯಾರಾಲಿಂಪಿಕ್ಸ್​ 2020ರಲ್ಲಿ ಒಟ್ಟು 8 ಪದಕ ಗೆದ್ದಂತಾಗಿದೆ ಎಂದು ಟ್ವೀಟ್​ ಮಾಡಿದ್ದಾರೆ.

2008ರ ಬೀಜಿಂಗ್​ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದಿದ್ದ ಅಭಿನವ್ ಬಿಂದ್ರಾ 10 ಮೀಟರ್​ ಪಿಸ್ತೂಲ್​ SH1ನಲ್ಲಿ ಕಂಚು ಗೆದ್ದ ಸಿಂಗ್​ರಾಜ್​ ಅದಾನ ಅವರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.

2020ರ ಪ್ಯಾರಾಲಿಂಪಿಕ್ಸ್​ನಲ್ಲಿ ಶೂಟಿಂಗ್ ವಿಭಾಗದಲ್ಲಿ ಬಂದ 2ನೇ ಪದಕ ಇದಾಗಿದೆ. ಸೋಮವಾರ ಭಾರತದ ಅವಿನ ಲೇಖಾರಾ 10 ಮೀಟರ್​ ಏರ್​ ರೈಫಲ್​ನಲ್ಲಿ ಚಿನ್ನದ ಪದಕ ಪಡೆದಿದ್ದರು.

ಇದನ್ನು ಓದಿ:ಶೂಟಿಂಗ್ ಕನಸು ನನಸು ಮಾಡಿಕೊಳ್ಳಲು ಪತ್ನಿ ಆಭರಣಗಳನ್ನೇ ಮಾರಿದ್ರಂತೆ ಕಂಚುಗೆದ್ದ ಸಿಂಗ್​ರಾಜ್​

ABOUT THE AUTHOR

...view details